ಚಿತ್ರದುರ್ಗ:- ತಾಲ್ಲೂಕಿನಲ್ಲಿ ಮಳೆಯ ಅಬ್ಬರ ಜೋರಾಗಿದ್ದು, ರಣ ಭೀಕರ ಮಳೆಗೆ ಇಲ್ಲಿನ ಮುದ್ದಾಪುರ ಗ್ರಾಮಸ್ತರು ಅಕ್ಷರಶಃ ತತ್ತರಿಸಿ ಹೋಗಿದ್ದಾರೆ. ಭಾರೀ ಮಳೆಯ ಕಾರಣ ಗ್ರಾಮದ ಸುಮಾರು 40 ಕ್ಕೂ ಹೆಚ್ಚು ಮನೆಗಳಿಗೆ ಮಳೆ ನೀರು ನುಗ್ಗಿ ಅವಾಂತರ ವಲಸೆ ಸೃಷ್ಟಿ ಮಾಡಿದೆ.
ಈ ರಾಶಿಯವರು ಉದ್ಯೋಗಕ್ಕೆ ಮರು ಸೇರ್ಪಡೆ: ಬುಧವಾರದ ರಾಶಿ ಭವಿಷ್ಯ 21 ಮೇ 2025!
ಇನ್ನೂ ಮಳೆ ನೀರನ್ನ ಹೊರ ಹಾಕಲು ಗ್ರಾಮಸ್ತರು ಪರದಾಟ ನಡೆಸಿದ್ದಾರೆ. ರಸ್ತೆಯ ಮೇಲೆ ಬಾರಿ ಪ್ರಮಾಣದಲ್ಲಿ ಮಳೆ ನೀರು ಹರಿದು ಹೋಗಿದೆ. ಮನೆಯ ಅಡುಗೆ ಸಾಮಗ್ರಿಗಳು ದವಸ ದಾನ್ಯಗಳು ನೀರಿನಲ್ಲಿ ಮುಳುಗಿ ಗ್ರಾಮಸ್ತರ ಪರದಾಟ ನಡೆಸಿದ್ದಾರೆ. ಗ್ರಾಮದ ಹಳ್ಳ ಕೊಳ್ಳಗಳು ಬಹುತೇಕ ಭರ್ತಿ ಆಗಿದ್ದು, ಸುಮಾರು 30 ವರ್ಷಗಳ ನಂತರ ಈ ರೀತಿಯ ಮಳೆ ಬಂದಿದ್ದಾಗಿ ಗ್ರಾಮಸ್ತರು ಮಾಹಿತಿ ನೀಡಿದ್ದಾರೆ.