ಬೆಂಗಳೂರು:- ನಗರದಲ್ಲಿ ಸುರಿದ ಭಾರೀ ಗಾಳಿ ಮಳೆಯಿಂದ ಸಾಕಷ್ಟು ಅವಾಂತರಗಳು ಸೃಷ್ಟಿ ಆಗಿದ್ದು, ಅನೇಕ ರಸ್ತೆಗಳಲ್ಲಿ ಮರಗಳು ಬಿದ್ದ ಪರಿಣಾಮ ಸಂಚಾರಕ್ಕೆ ಸಮಸ್ಯೆಯಾಗಿದೆ.
ಕರ್ನಾಟಕದಲ್ಲಿ ಇನ್ನೂ ಒಂದು ವಾರ ಭಾರೀ ಮಳೆ ಸಾಧ್ಯತೆ: ಈ ಜಿಲ್ಲೆಗಳಿಗೆ ಅಲರ್ಟ್!
ಬಿಬಿಎಂಪಿ ಹಾಗೂ ಬೆಂಗಳೂರು ಸಂಚಾರ ಪೊಲೀಸರು ತ್ವರಿತಗತಿಯಲ್ಲಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವ ನಿಟ್ಟಿನಲ್ಲಿ ಶ್ರಮಿಸುತ್ತಿದ್ದರೂ ಅನೇಕ ರಸ್ತೆಗಳಲ್ಲಿ ಬುಧವಾರ ಮುಂಜಾನೆಯೂ ನಿಧಾನಗತಿಯ ಸಂಚಾರ ಮುಂದುವರಿದಿದೆ.
ಈ ಬಗ್ಗೆ X ಮಾಡಿರುವ ಸಂಚಾರಿ ಪೊಲೀಸರು, ನಮನ ಜಕ್ಷನ್ ಹತ್ತಿರ ಮರಬಿದ್ದಿರುವುದರಿಂದ ಕೋಡಿಚಿಕ್ಕನಹಳ್ಳಿ ಕಡೆಗೆ ನಿಧಾನಗತಿಯ ಸಂಚಾರವಿರುತ್ತದೆ. ಟೋಲ್ ಗೇಟ್ ಎಂಸಿ ಸರ್ಕಲ್ ಹತ್ತಿರ ಮರಬಿದ್ದಿರುವುದರಿಂದ ಚೋಳರಪಾಳ್ಯ ಕಡೆಗೆ ನಿಧಾನಗತಿಯ ಸಂಚಾರವಿರುತ್ತದೆ ಎಂದು ಸಂಚಾರ ಪೊಲೀಸರು ತಿಳಿಸಿದ್ದಾರೆ.
ಬಾಳೇಕುಂದ್ರಿ ಜಕ್ಷನ್ ಹತ್ತಿರ ಮರ ಬಿದ್ದಿರುವುದರಿಂದ ಚಂದ್ರಿಕಾ ಹೊಟೇಲ್ ಕಡೆಗೆ ನಿಧಾನಗತಿಯ ಸಂಚಾರವಿರುತ್ತದೆ. ಈ ರಸ್ತೆಯನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದ್ದು ಪ್ರಯಾಣಿಕರು ಪರ್ಯಾಯ ಮಾರ್ಗವನ್ನು ಬಳಸಲು ಸೂಚಿಸಲಾಗಿದೆ ಎಂದು ಬೆಂಗಳೂರು ಟ್ರಾಫಿಕ್ ಪೊಲೀಸರು ತಿಳಿಸಿದ್ದಾರೆ
ರಸ್ತೆ ಹದಗೆಟ್ಟಿರುವ ಕಾರಣ ಹಗದೂರು ಜಂಕ್ಷನ್ನಿಂದ ಹಗದೂರು ಗ್ರಾಮದ ಕಡೆಗೆ ನಿಧಾನಗತಿಯ ಸಂಚಾರವಿರುತ್ತದೆ ಎಂದು ಟ್ರಾಫಿಕ್ ಪೊಲೀಸರು ಮಂಗಳವಾರ ರಾತ್ರಿ ತಿಳಿಸಿದ್ದರು. ಈ ರಸ್ತೆಯಲ್ಲಿ ಬುಧವಾರವೂ ಇಡೀ ದಿನ ನಿಧಾನಗತಿಯ ಸಂಚಾರ ನಿರೀಕ್ಷಿಸಲಾಗಿದೆ.