ಬೆಂಗಳೂರು: ಯಾವುದೇ ಶುಭ ಸಮಾರಂಭವಿರಲಿ ಅಲ್ಲಿ ಚಿನ್ನ ಬೆಳ್ಳಿ ಇರಲೇಬೇಕು. ಹುಟ್ಟಿದ ಪುಟ್ಟ ಕಂದಮ್ಮನಿಗೂ ದೃಷ್ಟಿಯಾಗದಿರಲಿ ಎಂದು ಚಿನ್ನದ ತಾಯತವನ್ನೇ ಕಟ್ಟುತ್ತಾರೆ ಇನ್ನು ಚಿನ್ನದ ಬಳೆ, ಓಲೆ, ಉಡಿದಾರ ಬೆಳ್ಳಿಯ ಕಾಲ್ಗೆಜ್ಜೆ ಎಂದು ಅಲಂಕರಿಸುತ್ತಾರೆ. ವಿವಾಹ ಸಮಾರಂಭಗಳಲ್ಲೂ ವಧು ವರರನ್ನು ಅಲಂಕರಿಸಲು ಚಿನ್ನದ ಬೆಳ್ಳಿಯ ಆಭರಣಗಳನ್ನು ಬಳಸಲಾಗುತ್ತದೆ.
ಬೆಲೆ ಕಡಿಮೆಯಾದ ಕೂಡಲೇ ಚಿನ್ನ ಖರೀದಿಗೆ ಗ್ರಾಹಕರು ತಾ ಮುಂದು ನಾ ಮುಂದು ಹೊರಡುತ್ತಾರೆ. ಬೆಲೆ ಕಡಿಮೆಯಾದಷ್ಟು ಚಿನ್ನವನ್ನು ಕೂಡ್ಟಿಟ್ಟುಕೊಳ್ಳೋಣ ಎಂಬುದು ಅವರ ಲೆಕ್ಕಾಚಾರವಾಗಿದೆ. ಒಟ್ಟಿನಲ್ಲಿ ಆಡಂಬರಕ್ಕೂ, ಹೂಡಿಕೆಯ ರೂಪದಲ್ಲೂ ಚಿನ್ನ ಇಂದು ಬಳಕೆಯಾಗುತ್ತಿದೆ.
ಬಿಯರ್ ಕುಡಿದರೆ ಕಿಡ್ನಿ ಸ್ಟೋನ್ ಆಗುತ್ತಾ? ಎಣ್ಣೆ ಪ್ರಿಯರು ನೋಡಲೇಬೇಕಾದ ಸ್ಟೋರಿ!
ಆಭರಣ ಚಿನ್ನದ ಬೆಲೆ ಗ್ರಾಮ್ಗೆ ಬರೋಬ್ಬರಿ 220 ರೂ ಏರಿದೆ. ಬೆಳ್ಳಿ ಬೆಲೆಯಂತೂ ಗ್ರಾಮ್ಗೆ 3 ರೂ ಹೆಚ್ಚು ದುಬಾರಿಯಾಗಿದೆ. ಬೆಂಗಳೂರಿನಲ್ಲಿ ಬೆಳ್ಳಿ ಬೆಲೆ 97 ರೂ ಇದ್ದದ್ದು 100 ರೂಗೆ ಏರಿದೆ. ಇದು ಚಿನ್ನದ ಸಾರ್ವಕಾಲಿಕ ದಾಖಲೆ ಮಟ್ಟದ ಬೆಲೆಯಾಗಿದೆ. ವಿದೇಶಗಳಲ್ಲೂ ಬಹುತೇಕ ಕಡೆ ಚಿನ್ನದ ಬೆಲೆ ಭರ್ಜರಿ ಏರಿಕೆ ಕಂಡಿದೆ. ಸಾರ್ವಕಾಲಿಕ ಗರಿಷ್ಠ ಮಟ್ಟದತ್ತ ಸಾಗುತ್ತಿದೆ ಚಿನ್ನದ ಬೆಲೆ.
ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 89,300 ರುಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 97,420 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 10,000 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್ಗೆ 89,300 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್ಗೆ 10,000 ರುಪಾಯಿಯಲ್ಲಿ ಇದೆ.
ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ (ಮೇ 21ಕ್ಕೆ)
- 22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 89,300 ರೂ
- 24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 97,420 ರೂ
- 18 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 73,070 ರೂ
- ಬೆಳ್ಳಿ ಬೆಲೆ 10 ಗ್ರಾಂಗೆ: 1,000 ರೂ
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ
- 22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 89,300 ರೂ
- 24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 97,420 ರೂ
- ಬೆಳ್ಳಿ ಬೆಲೆ 10 ಗ್ರಾಂಗೆ: 1,000 ರೂ
ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ)
- ಬೆಂಗಳೂರು: 89,300 ರೂ
- ಚೆನ್ನೈ: 89,300 ರೂ
- ಮುಂಬೈ: 89,300 ರೂ
- ದೆಹಲಿ: 89,450 ರೂ
- ಕೋಲ್ಕತಾ: 89,300 ರೂ
- ಕೇರಳ: 89,300 ರೂ
- ಅಹ್ಮದಾಬಾದ್: 89,350 ರೂ
- ಜೈಪುರ್: 89,450 ರೂ
- ಲಕ್ನೋ: 89,450 ರೂ
- ಭುವನೇಶ್ವರ್: 89,300 ರೂ