ತುಮಕೂರು: ಇಂಜಿನಿಯರಿಂಗ್ ಹಾಗೂ ಮೆಡಿಕಲ್ ಸೀಟ್ ಬ್ಲಾಕಿಂಗ್ ಹಗರಣದಲ್ಲಿ ಗೃಹ ಸಚಿವ ಪರಮೇಶ್ವರ್ ಗೆ ಮತ್ತೆ ಇಡಿ ಸಂಕಷ್ಟ ಶುರುವಾಗಿದೆ.
ನಾಲ್ಕು ವರ್ಷಗಳ ಹಿಂದೆ ಡಾ.ಜಿ ಪರಮೇಶ್ವರ್ ಒಡೆತನದ ಸಿದ್ದಾರ್ಥ ಸಂಸ್ಥೆಯ ಕಾಲೇಜು, ಕಚೇರಿಗಳ ಮೇಲೆ ಐಟಿ (ಆದಾಯ ತೆರಿಗೆ) ಅಧಿಕಾರಿಗಳು ದಾಳಿ ನಡೆಸಿ ದಾಖಲೆ ಸಂಗ್ರಹಿಸಿದ್ದರು. ಇದೀಗ, ನಾಲ್ಕು ವರ್ಷಗಳ ಬಳಿಕ ಇಡಿ ಶಾಕ್ ಎದುರಾಗಿದೆ.
ಬೂಕರ್ ಪ್ರಶಸ್ತಿಗೆ ಭಾಜನರಾದ ಕನ್ನಡದ ಸಾಹಿತಿ ಬಾನು ಮುಷ್ತಾಕ್: ಶುಭ ಕೋರಿದ ಸಿದ್ದರಾಮಯ್ಯ!
ತುಮಕೂರಿನ ಸಿದ್ದಾರ್ಥ ಮೆಡಿಕಲ್ ಕಾಲೇಜು, ಇಂಜಿನಿಯರಿಂಗ್ ಕಾಲೇಜು, ನೆಲಮಂಗಲದ ಟಿ.ಬೇಗೂರಿನ ಕಾಲೇಜು ಸೇರಿದಂತೆ ಸಿದ್ದಾರ್ಥ ಸಮೂಹ ಸಂಸ್ಥೆಗಳ ಮೇಲೆ ಇಡಿ ಅಧಿಕಾರಿಗಳು ಬೆಳ್ಳಂಬೆಳಿಗ್ಗೆ 3 ಕಾರುಗಳಲ್ಲಿ ಬಂದು ದಾಳಿ ಮಾಡಿ ದಾಖಲೆ ಸಂಗ್ರಹ ನಡೆಸಿದ್ದಾರೆ.
ಈ ಹಿಂದೆ ಐಟಿ ಅಧಿಕಾರಿಗಳು ನಡೆಸಿದ ದಾಳಿ ವೇಳೆ ಕೋಟ್ಯಂತರ ರೂ. ಮೌಲ್ಯದ ಹಣ ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ದಾಳಿ ನಡೆದಿರುವ ಶಂಕೆ ವ್ಯಕ್ತವಾಗಿದೆ.