ಬೆಂಗಳೂರು: ಹೋದೆಯಾ ಪಿಶಾಚಿ, ಅಂದರೆ, ಬಂದೆ ಗವಾಕ್ಷಿಅನ್ನೋ ಗಾದೆ ಮಾತಿನಂತೆ ಭಾರತ ಸೇರಿದಂತೆ ಕರ್ನಾಟಕದಲ್ಲಿ ಸಾವಿನ ರಣಕೇಕೆ ಹಾಕಿದ್ದ ಹೆಮ್ಮಾರಿ ಕೊರೊನಾ ಸೈಲೆಂಟಾಗಿ ಮತ್ತೆ ವಕ್ಕರಿಸಿದೆ.
ಕರ್ನಾಟಕದಲ್ಲಿ ಲಕ್ಷಾಂತರ ಜನರ ಪ್ರಾಣ ಹಿಂದಿ, ಉಸಿರು ನಿಲ್ಲಿಸಿದ್ದ ರಕ್ಕಸ ಕೊರೊನಾ, ರಾಜ್ಯದಲ್ಲಿ ಮತ್ತೆ ತನ್ನ ಆಟ ಶುರು ಮಾಡಿದೆ.
ಕೇರಳ ಮತ್ತು ಮಹಾರಾಷ್ಟ್ರದಲ್ಲಿ ಇಬ್ಬರು ಕೊರೊನಾ ಸೋಂಕಿತರು ಮೃತಪಟ್ಟಿದ್ದಾರೆ. ಸಿಂಗಾಪುರದಲ್ಲಿ ಸೋಕು ಪ್ರಮಾಣ ಏರಿಕೆ ಕಂಡ ನಂತರ ಭಾರತದಲ್ಲಿ 257 ಪ್ರಕರಣಗಳು ಪತ್ತೆಯಾಗಿವೆ. ಅದರಲ್ಲೂ ಕರ್ನಾಟಕದಲ್ಲಿ 16 ಪ್ರಕರಣಗಳು ದಾಖಲಾಗಿವೆ.
ಈ ಹಿನ್ನೆಲೆಯಲ್ಲಿ ಎಚ್ಚೆತ್ತ ಆರೋಗ್ಯ ಇಲಾಖೆ, ನಿರ್ಲಕ್ಷ್ಯ ಬೇಡವೆಂದು ಎಚ್ಚರಿಸಿದೆ.
ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲು ಆರೋಗ್ಯ ಇಲಾಖೆ ಸೂಚಿಸಿದೆ.
ಕೊರೊನಾದ ಹೊಸ ಭೀತಿ: ಆರೋಗ್ಯ ಇಲಾಖೆಯಿಂದ ಎಚ್ಚರಿಕೆ – ಭಾರತದಲ್ಲಿ ಎಷ್ಟು ಪ್ರಕರಣಗಳಿವೆ ಗೊತ್ತಾ..?
ಕೊರೊನಾ ವೈರಾಣುವಿನ ಓಮಿಕ್ರಾನ್ ರೂಪಾಂತರಿಯ ‘ಜೆನ್.1’ ಉಪತಳಿಯಿಂದ ಏಷ್ಯಾದಲ್ಲಿ ಕೊರೊನಾ ಸೋಂಕು ಹೆಚ್ಚುತ್ತಿದೆ ಎಂದು ಅಮೆರಿಕದ ಜಾನ್ಸ್ ಹಾಪ್‌ಕಿನ್ಸ್ ಮೆಡಿಸಿನ್ ತಿಳಿಸಿದೆ. ಇದಲ್ಲದೇ LF-.7 ಹಾಗೂ NB.1.8 ರೂಪಾಂತರಿಗಳಿಂದಲೂ ಹಾಂಗ್‌ಕಾಂಗ್ ಹಾಗೂ ಸಿಂಗಾಪುರದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಏರಿಕೆ ಕಾಣುತ್ತಿದೆ ಎನ್ನಲಾಗಿದೆ.