ಹಾವೇರಿ:- ಕಾಂಗ್ರೆಸ್‌ನವರ ಹೃದಯ ಬಗೆದರೆ ಪಾಕಿಸ್ತಾನ ಕಾಣುತ್ತೆ, ಇದು ಸಾಬೀತಾಗಿದೆ ಎಂದು ಸಚಿವ ಬಿಸಿ ಪಾಟೀಲ್ ಹೇಳಿದ್ದಾರೆ.
ಪೂರ್ವ ಮುಂಗಾರು ಮಳೆ: ಅಧಿಕಾರಿ, ಸಿಬ್ಬಂದಿ ಕೇಂದ್ರ ಸ್ಥಾನ ಬಿಡದಂತೆ ಡಿಸಿ ವಾರ್ನಿಂಗ್!
ಈ ಸಂಬಂಧ ನಗರದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ನವರ ಹೃದಯ ಬಗೆದರೆ ರಾಹುಲ್ ಗಾಂಧಿ, ಪಾಕಿಸ್ತಾನದ ಪ್ರಧಾನಿ ಬಿರಿಯಾನಿ ತಿನ್ನೋದು ಕಾಣುತ್ತದೆ. ಆಂಜನೇಯನ ಹೃದಯ ಬಗೆದು ತೋರಿಸಿದಾಗ ರಾಮ ಸೀತೆ ಕಂಡಿದ್ದರೋ, ಹಾಗೆ ಕಾಂಗ್ರೆಸ್‌ನವರ ಹೃದಯ ಬಗೆದರೆ ಪಾಕಿಸ್ತಾನ ಕಾಣುತ್ತೆ. ನಿನ್ನೆನೇ ಇದು ಸಾಬೀತಾಗಿದೆ. ಖರ್ಗೆಯವರು ನಮ್ಮ ಪಾಕಿಸ್ತಾನ ಎಂದಿದ್ದಾರೆ ಎಂದು ಕಿಡಿಕಾರಿದರು.
ನಮ್ಮ ಆಡಳಿತಾವಧಿಯಲ್ಲಿ ಜನನ ಪ್ರಮಾಣ ಪತ್ರ ಕೊಡೋಕೆ 5 ರೂ. ಇತ್ತು. ಈಗ ಇವರು 50 ರೂ. ಮಾಡಿದ್ದಾರೆ. ಹುಟ್ಟಿದವರಿಂದ ಹಿಡಿದು ಸಾಯೋರವರೆಗೂ ವಸೂಲಿ ಮಾಡ್ತಾ ಇದ್ದಾರೆ. ಜನರ ಮೇಲೆ ಲೀಗಲ್ ಡಕಾಯಿತಿ ಮಾಡ್ತಾ ಇದ್ದಾರೆ. ರೈತರ ಮಕ್ಕಳ ವಿದ್ಯಾನಿಧಿ ಬಂದ್ ಮಾಡಿದರು. ರೈತರ ಮಕ್ಕಳ ಹೊಟ್ಟೆ ಮೇಲೆ ಹೊಡೆದಿದ್ದು ಇವರ ಮೊದಲ ಸಾಧನೆ ಎಂದು ಟೀಕಿಸಿದರು