ವಿಜಯಪುರ: ಭಾರತದ ಮೊದಲಲ್ಲಾ ಮೋದಿ ಮೊದಲು ಎಂಬಂತಾಗಿದೆ ಎಂದು ಎಐಸಿಸಿ ಆಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪ್ರತಿಕ್ರಿಯೇ ನೀಡಿದ್ದಾರೆ. ವಿಜಯಪುರದಲ್ಲಿ ಮಾತನಾಡಿದ ಅವರು, ಖರ್ಗೆ ಅವರು ಪಾಕಿಸ್ತಾನದ ರಾಷ್ಟ್ರೀಯ ಅಧ್ಯಕ್ಷರೋ… ಭಾರತದ ಅಧ್ಯಕ್ಷರೋ ಎನ್ನುವುದನ್ನು ಮೊದಲು ಸ್ಪಷ್ಟಪಡಿಸಿಲಿ ಎಂದು ಕಿಡಿಕಾರಿದ್ದಾರೆ.
ಇವರಿಗೆ ದೇಶ ಬೇಕಾಗಿಲ್ಲ ಕೇವಲ ಮತ ಬೇಕಾಗಿದೆ. ಮಲ್ಲಿಕಾರ್ಜುನ್ ಖರ್ಗೆ ರಾಜ್ಯದ ಹಾಗೂ ದೇಶದ ಅತ್ಯಂತ ಹಿರಿಯ ನಾಯಕರು, ಆದ್ರೆ ಅವರು ದೇಶದ ಬಗ್ಗೆ ಮಾತನಾಡುವುದನ್ನು ಮೊದಲು ಕಲಿಯಬೇಕು. ಖರ್ಗೆ ಅಂಬೇಡ್ಕರ್ ಅನುಯಾಯಿ ಅಲ್ಲ, ಸೋನಿಯಾ ಅನುಯಾಯಿ ಎಂದು ನಮ್ಮ ವೈರಿ ಪಾಕಿಸ್ತಾನ ಎಂದು ಹೇಳುವ ಬದಲು ನಮ್ಮ ಪಾಕಿಸ್ತಾನ ಎಂದಿದ್ದಕ್ಕೆ ಮಲ್ಲಿಕಾರ್ಜುನ್ ಖರ್ಗೆ ವಿರುದ್ಧ ಯತ್ನಾಳ್ ಗರಂ ಆಗಿದ್ದಾರೆ.
ನಿಮಗೂ ಈ ಸಮಸ್ಯೆ ಇದ್ಯಾ!? ಹಾಗಿದ್ರೆ ಆಲೂಗಡ್ಡೆ ಮುಟ್ಟಲೇಬೇಡಿ! ಇದು ತಿಳಿದ್ರೆ ಶಾಕ್ ಆಗ್ತೀರಾ!?
ಇನ್ನೂ 1971ರ ಯುದ್ಧ ಇಂದಿರಾಗಾಂಧಿ ಗೆದ್ದಿದಾರೆ ಅಂತ ಹೇಳ್ತಾರೆ. ಈಗಿನ ಯುದ್ಧ ಸೈನಿಕರಿಂದ ಗೆಲುವು ಅಂತ ಹೇಳ್ತಾರೆ. ಸೈನಿಕರ ಪರಿಶ್ರಮನೇ ನಂಬರ್ ಒನ್ ಇದೆ. ಎಲ್ಲಿಯೂ ಕೂಡ ನಾನು ಹೋಗಿ ಯುದ್ಧ ಮಾಡಿದ್ದೇನೆ ಎಂದು ಮೋದಿ ಅವರು ಹೇಳಿಲ್ಲ. ಸೈನಿಕರಿಗೆ ಬೆನ್ನು ತಟ್ಟಿ ಪ್ರೋತ್ಸಾಹ ಕೊಟ್ಟಿದ್ದರಿಂದಲೇ ನಮ್ಮ ಶಸ್ತ್ರಾಸ್ತ್ರಗಳು ಎಷ್ಟು ಶಕ್ತಿಯುತವಾಗಿವೆ ಎಂದು ಚೀನಾ ಕೂಡ ಅಂಜುವ ಪರಿಸ್ಥಿತಿ ಬಂದಿದೆ. ಆದ್ದರಿಂದಲೇ ಬ್ರಹ್ಮೋಸ್ ಗೆ 17 ರಾಷ್ಟ್ರಗಳಿಂದ ಬೇಡಿಕೆ ಬಂದಿದೆ ಎಂದು ಹೇಳಿದರು.