ಪಾದವು ದೇಹ ನಿಲ್ಲುವುದಕ್ಕೆ ಅನುಕೂಲ ಕಲ್ಪಿಸುವ ಒಂದು ಅಂಗ. ಪಾದದಲ್ಲಿ ಇರುವ ಪ್ರತಿಯೊಂದು ಬೆರಳು, ಹಿಮ್ಮಡಿಯು ವಿಶೇಷ ಚಕ್ರಗಳನ್ನು ಒಳಗೊಂಡಿದ್ದು, ಅವು ದೇಹದ ಆರೋಗ್ಯಕ್ಕೆ ಅನುವುಮಾಡಿಕೊಡುತ್ತವೆ. ನೆಲದ ಸ್ಪರ್ಶವನ್ನು ಸದಾ ಪಡೆದು ಕೊಳ್ಳುವ ಪಾದಗಳಿಗೆ ಧೂಳು, ಕೊಳಕು ಹಾಗೂ ಅನಾಹುತಗಳು ಉಂಟಾಗುವುದು ಸಾಮಾನ್ಯವಾದ ಸಂಗತಿ. ಈ ಹಿನ್ನೆಲೆಯಲ್ಲಿಯೇ ಪಾದಗಳು ಬಿರುಕು ಹಾಗೂ ನೋವು ಉಂಟಾಗುತ್ತವೆ. ಅವು ನಡೆಯುವಾಗ ಹಾಗೂ ಮಲಗಿರುವಾಗ ಸಾಕಷ್ಟು ನೋವನ್ನು ಉಂಟುಮಾಡುವುದು. ಅಲ್ಲದೆ ನೋಡುಗರಿಗೂ ಒಂದು ಬಗೆಯ ಶುಚಿತ್ವ ಇಲ್ಲ ಎನ್ನುವ ಭಾವನೆಯನ್ನು ಮೂಡಿಸುವುದು.
ಪರಮೇಶ್ವರ್ ವಿರುದ್ಧ ಇಡಿ ದಾಳಿ ಹಿಂದೆ ಕಾಂಗ್ರೆಸ್ ನಾಯಕರ ಕೈವಾಡ ಇದೆ: ಪ್ರಹ್ಲಾದ್ ಜೋಶಿ ಆರೋಪ
ಸೌಂದರ್ಯದ ಕಾಳಜಿಯ ವಿಚಾರಕ್ಕೆ ಬಂದರೆ ನಾವು ನಮ್ಮ ನೆರಳಿನಲ್ಲೇ ನಿರ್ಲಕ್ಷಿಸುತ್ತೇವೆ. ಎಷ್ಟೇ ಸ್ಮಾರ್ಟ್ ಆಗಿ ಡ್ರೆಸ್ ಮಾಡಿದರೂ ಒಡೆದ ಹಿಮ್ಮಡಿ ನಿಮ್ಮ ಲುಕ್ ಅನ್ನು ಹಾಳು ಮಾಡುತ್ತದೆ. ಹೀಗಾಗಿ ಅನೇಕ ಮಂದಿ ಒಡೆದ ಹಿಮ್ಮಡಿ ನಿವಾರಣೆಗೆ ಕಾಸ್ಟ್ಲಿ ಕ್ರೀಮ್ಗಳನ್ನು ಖರೀದಿಸಿ ಬಳಸುತ್ತಾರೆ. ಅಲ್ಲದೇ ಪಾರ್ಲರ್ಗೆ ಹೋಗಿ ಚಿಕಿತ್ಸೆ ಪಡೆಯುವ ಮೂಲಕ ಸಾಕಷ್ಟು ಹಣ ವ್ಯರ್ಥ ಮಾಡುತ್ತಾರೆ. ಆದರೆ ಮನೆಯಲ್ಲಿರುವ ಕೆಲವು ಪದಾರ್ಥಗಳನ್ನು ಉಪಯೋಗಿಸುವ ಮೂಲಕವೇ ಒಡೆದ ಹಿಮ್ಮಡಿ ಸಮಸ್ಯೆಯನ್ನು ನಿವಾರಿಸಿಕೊಳ್ಳಬಹುದು ಎಂದು ನಿಮಗೆ ತಿಳಿದಿದ್ಯಾ?
ಹೌದು, ಅತಿಯಾದ ಶೀತ, ಒಣ ಚರ್ಮ, ಅತಿಯಾದ ದೇಹದ ತೂಕ, ನೀರಿನಲ್ಲಿ ದೀರ್ಘಕಾಲ ನಿಲ್ಲುವುದು, ಅನೈರ್ಮಲ್ಯ ಜೀವನಶೈಲಿ ಮತ್ತು ಚಪ್ಪಲಿ ಧರಿಸದೇ ಬರಿ ಪಾದಗಳಿಂದಾಗಿ ನಮ್ಮ ಹಿಮ್ಮಡಿಗಳು ಬಿರುಕು ಬೀಳುತ್ತದೆ. ಇದರಿಂದ ಸಾಕಷ್ಟು ಬಾರಿ ನಿಂತುಕೊಂಡು ಕೆಲಸ ಮಾಡಲು ಕಷ್ಟವಾಗುತ್ತದೆ. ಜೊತೆಗೆ ಸಹಿಸಲಾರದಷ್ಟು ಹಿಮ್ಮಡಿ ಉರಿ ಹಾಗೂ ನೋವು ಉಂಟಾಗುತ್ತದೆ. ಆದರೆ ನಾವಿಂದು ತಿಳಿಸುವ ಕೆಲ ಸಿಂಪಲ್ ಟಿಪ್ಸ್ ಫಾಲೋ ಮಾಡುವ ಮೂಲಕವೇ ಒಡೆದ ಹಿಮ್ಮಡಿ ಸಮಸ್ಯೆಗೆ ಪರಿಹಾರ ಪಡೆಯಬಹುದು.
ಅದೇನಪ್ಪಾ ಅಂದರೆ ನಾವು ಪ್ರತಿದಿನ ಬಳಸುವ ಮೌತ್ವಾಶ್ ಹಿಮ್ಮಡಿ ಸ್ಪರ್ಸ್ಗೆ ಉತ್ತಮ ಪರಿಹಾರವಾಗಿದೆ. ಮೌತ್ವಾಶ್ನಲ್ಲಿರುವ ರಾಸಾಯನಿಕಗಳು ಹೀಲ್ ಸ್ಪರ್ಸ್ಗೆ ಕಾರಣವಾಗುವ ಬ್ಯಾಕ್ಟೀರಿಯಾ ಸೇರಿದಂತೆ ಸೂಕ್ಷ್ಮ ಜೀವಿಗಳನ್ನು ಕೊಲ್ಲುತ್ತದೆ, ಆದರೆ ಒಣ ಚರ್ಮವನ್ನು ತೇವಗೊಳಿಸುತ್ತದೆ. 1 ಸ್ಪೂನ್ ಮೌತ್ವಾಶ್ಗೆ 2 ಸ್ಪೂನ್ ನೀರಿನ ಮಿಶ್ರಣ ಮಾಡಿ 15 ನಿಮಿಷಗಳ ಕಾಲ ನಿಮ್ಮ ಪಾದಗಳನ್ನು ನೆನೆಸುವುದರಿಂದ ಒಡೆದ ಹಿಮ್ಮಡಿ ಸಮಸ್ಯೆಗೆ ಪರಿಹಾರ ಸಿಗುತ್ತದೆ
ಒಣ ತ್ವಚೆ ಇರುವವರು ತೆಂಗಿನೆಣ್ಣೆಯನ್ನು ಪ್ರತಿದಿನ ಹಚ್ಚುವುದರಿಂದ ಕೂಡ ಪ್ರಯೋಜನ ಪಡೆಯಬಹುದು. ಒಡೆದ ಹಿಮ್ಮಡಿ ಸಮಸ್ಯೆಯಿಂದ ಬಳಲುತ್ತಿರುವವರು ಪ್ರತಿದಿನ ರಾತ್ರಿ ಮಲಗುವ ಮುನ್ನ ತೆಂಗಿನೆಣ್ಣೆಯನ್ನು ಪಾದಗಳಿಗೆ ಹಚ್ಚಿದರೆ ಹಿಮ್ಮಡಿ ಒಡೆಯುವಿಕೆಗೆ ಪರಿಹಾರ ಪಡೆಯಬಹುದು.
ಆಲಿವ್ ಎಣ್ಣೆಯಲ್ಲಿ ಉತ್ಕರ್ಷಣ ನಿರೋಧಕಗಳು ಅಧಿಕವಾಗಿವೆ. ಈ ಎಣ್ಣೆಯನ್ನು ನಿಯಮಿತವಾಗಿ ಪಾದಗಳಿಗೆ ಹಚ್ಚುವುದರಿಂದ ಒಡೆದ ಹಿಮ್ಮಡಿ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು. ಇದಲ್ಲದೇ ನಿಯಮಿತವಾಗಿ ಆಲಿವ್ ಎಣ್ಣೆಯನ್ನು ತ್ವಚೆಗೆ ಬಳಸುವವರು ಸಹ ಯಾವಾಗಲೂ ಯಂಗ್ ಆಗಿ ಕಾಣುತ್ತಾರೆ.
ಒಡೆದ ಹಿಮ್ಮಡಿ ಸಮಸ್ಯೆಯಿಂದ ಬಳಲುತ್ತಿರುವವರು ವಾರಕ್ಕೊಮ್ಮೆ ಹಾಲು ಮತ್ತು ಓಟ್ಮೀಲ್ನ ಮಿಶ್ರಣವನ್ನು ಪಾದಗಳಿಗೆ ಹಚ್ಚಿದರೆ ಉತ್ತಮ ಫಲಿತಾಂಶವನ್ನು ಪಡೆಯಬಹುದು.
ಒಡೆದ ಹಿಮ್ಮಡಿ ಸಮಸ್ಯೆಗೆ ಪಪ್ಪಾಯಿ ಹಣ್ಣು ಕೂಡ ತುಂಬಾ ಪರಿಣಾಮಕಾರಿ ಆಗಿದೆ. ಪಪ್ಪಾಯಿ ಹಣ್ಣನ್ನು ಕತ್ತರಿಸಿ ಚೆನ್ನಾಗಿ ಮ್ಯಾಶ್ ಮಾಡಿ, ಒಡೆದ ಹಿಮ್ಮಡಿಗಳಿರುವ ಪಾದಗಳಿಗೆ ಹಚ್ಚಿ, ಒಣಗುವವರೆಗೆ ಕಾಯಿರಿ ಮತ್ತು ನಂತರ ಶುದ್ಧ ನೀರಿನಿಂದ ಪಾದಗಳನ್ನು ತೊಳೆಯುವುದು ಉತ್ತಮ ಫಲಿತಾಂಶ ಸಿಗುತ್ತದೆ.
ಅರಿಶಿನ ಪುಡಿ ಅತ್ಯುತ್ತಮ ನಂಜುನಿರೋಧಕ ಎಂದು ಹೇಳಲಾಗುತ್ತದೆ. ಅದೇ ರೀತಿ ಕಲ್ಲು ಉಪ್ಪು ಕೂಡ ರೋಗಾಣುಗಳನ್ನು ಹೋಗಲಾಡಿಸುತ್ತದೆ ಮತ್ತು ಇವು ಪಾದಗಳನ್ನು ಹೊಳೆಯುವಂತೆ ಮಾಡುತ್ತವೆ.