ಬಾಗಲಕೋಟೆ:- ದೇಹಕ್ಕೆ ಏನಾದ್ರೂ ಸಮಸ್ಯೆ ಆದ್ರೆ ಮನುಷ್ಯ ಹೇಳಿಕೊಳ್ತಾನೆ.. ನನಗೆ ಇಂತಹ ನೋವಿದೆ ಅಂತ ವೈದ್ಯರ ಬಳಿ ಹೇಳಿ ಚಿಕಿತ್ಸೆ ಪಡೆಯುತ್ತಾನೆ. ಆದ್ರೆ ಮೂೂಕಪ್ರಾಣಿಗಳಿಗೆ ನೋವಾದ್ರೆ ಪಾಪ ಏನು ಮಾಡುತ್ವೆ ಹೇಳಿ, ನರಳಾಡಿ-ನರಳಾಡಿ ಸುಮ್ಮನಾಗತ್ವೆ. ಆದ್ರೆ ಇಲ್ಲೊಂದು ಜಾಣ ಕೋತಿಯ ಬಗ್ಗೆ ನೀವು ಕೇಳಿದ್ರೆ ಅಚ್ಚರಿ ಪಡ್ತೀರಿ. ಮಾತು ಬಾರದಿದ್ರೂ ತನಗಾದ ನೋವನ್ನು ಡಾಕ್ಟರ್ ಬಳಿ ತೋರಿಸಿದ ಪರಿ ನಿಜಕ್ಕೂ ಆಶ್ಚರ್ಯಚಕಿತವಾಗಿತ್ತು.
ಹಿಮ್ಮಡಿ ಹೊಡೆದು ಧಗಧಗನೆ ಉರಿತಿದ್ಯಾ!? ಹಾಗಿದ್ರೆ ಈ ಮನೆಮದ್ದು ಫಾಲೋ ಮಾಡಿ!
ಎಸ್, ತನ್ನ ಖಾಸಗಿ ಅಂಗದಲ್ಲಿ ನೋವು ಬಂದ ಹಿನ್ನೆಲೆ ಇಲ್ಲೊಂದು ಮಂಗ ಪಶು ಆಸ್ಪತ್ರೆಗೆ ಭೇಟಿ ನೀಡಿ ವೈದ್ಯರಿಂದ ಚಿಕಿತ್ಸೆ ಪಡೆದ ಅಚ್ಚರಿ ಘಟನೆ ಬಾಗಲಕೋಟೆ ಜಿಲ್ಲೆ ಇಳಕಲ್ಲ ತಾಲ್ಲೂಕಿನ ಗೂಡೂರು ಎಸ್ ಸಿ ಪಶು ಆಸ್ಪತ್ರೆಯಲ್ಲಿ ಜರುಗಿದೆ.
ಗುದಧ್ವಾರದ ಕಡೆ ತೋರಿಸಿ ತನಗಾದ ವೇದನೆಯನ್ನು ಕೈ ಸನ್ನೆ ಮೂಲಕ ವೈದ್ಯರಿಗೆ ಕಪಿರಾಯ ತೋರಿಸಿದ್ದಾನೆ. ಹೀಗಾಗಿ ಪಶುವೈದ್ಯಕೀಯ ಪರಿವೀಕ್ಷಕ ಜಿಜಿ ಬಿಲ್ಲೋರ ಅವರು ಮಂಗಕ್ಕೆ ಚಿಕಿತ್ಸೆ ಕೊಟ್ಟಿದ್ದಾರೆ. ಚಿಕಿತ್ಸೆ ನೀಡಿದ ನಂತರ ಮಂಗ ಹೊರಟು ಹೋಗಿದೆ.
ಈ ಅಚ್ಚರಿ ಘಟನೆ ಕಂಡು ಅಲ್ಲಿನ ಸ್ಥಳೀಯರು ಒಂದು ಕ್ಷಣ ಮೂಕವಿಸ್ಮಿಸರಾಗಿದ್ದರು.