ಹಬ್ಬದ ಸಂಭ್ರಮ ಹೆಚ್ಚಿಸುವ ಬಂಗಾರ, ಬೆಳ್ಳಿಯನ್ನು ಖರೀದಿಸಲು ತಮ್ಮ ಅಳಿದುಳಿದ ಉಳಿತಾಯಗಳನ್ನು ಬಳಸಿ ಗ್ರಾಹಕರು ಆಭರಣಗಳು, ಪೂಜಾಪರಿಕರಗಳ ಖರೀದಿ ಮಾಡುತ್ತಾರೆ. ಇಂಧನಗಳಂತೆ, ಬಂಗಾರ, ಬೆಳ್ಳಿ ಕೂಡ ಹಲವಾರು ವಿದ್ಯಮಾನಗಳ ಕಾರಣದಿಂದ ಬೆಲೆ ಏರಿಕೆಯ ಬಿಸಿಗೆ ಒಳಗಾಗಿದ್ದು,
ಗ್ರಾಹಕರ ಪಾಲಿಗೆ ನುಂಗಲಾರದ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಆದರೂ ಗ್ರಾಹಕರು ಕೊಂಚವಾದರೂ ಚಿನ್ನದ ಬೆಲೆ ತಗ್ಗಿದರೆ ಅದನ್ನು ಸದುಪಯೋಗಪಡಿಸಿಕೊಳ್ಳಲು ತುದಿಗಾಲಲ್ಲಿ ಕಾಯುತ್ತಿದ್ದಾರೆ. ಸರಿ ಹಾಗಿದ್ದರೆ ಇಂದಿನ ಚಿನ್ನ ಬೆಳ್ಳಿ ಬೆಲೆಗಳ ಬಗ್ಗೆ ತಿಳಿದುಕೊಳ್ಳೋಣ..
ಹೊಸ ಬಟ್ಟೆ ಬಣ್ಣ ಬಿಡುತ್ತೆ ಅನ್ನೋ ಭಯ ಇದ್ದರೆ ಈ ಟ್ರಿಕ್ಸ್ ಟ್ರೈ ಮಾಡಿ ನೋಡಿ! ರಿಸಲ್ಟ್ ಪಕ್ಕಾ
ಚಿನ್ನ ಮತ್ತು ಬೆಳ್ಳಿ ಬೆಲೆಗಳು ಇಂದು ಶುಕ್ರವಾರ ಇಳಿಕೆಯಾಗಿವೆ. ಮೊನ್ನೆ 220 ರೂ, ನಿನ್ನೆ 45 ರೂ ಬೆಲೆ ಏರಿಕೆ ಕಂಡಿದ್ದ ಆಭರಣ ಚಿನ್ನದ ಬೆಲೆ ಇಂದು 35 ರೂ ತಗ್ಗಿ 89,400 ರೂ ಆಗಿದೆ. ಅಪರಂಜಿ ಚಿನ್ನದ ಬೆಲೆ 9,753 ರೂಗೆ ಇಳಿದಿದೆ. ವಿದೇಶಗಳಲ್ಲೂ ಹೆಚ್ಚಿನ ಕಡೆ ಬೆಲೆ ಇಳಿದಿದೆ.
ಬೆಳ್ಳಿ ಬೆಲೆಯೂ ಒಂದು ರುಪಾಯಿಯಷ್ಟು ಕಡಿಮೆ ಅಗಿದೆ. ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 89,400 ರುಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 97,530 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 10,000 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್ಗೆ 89,400 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್ಗೆ 10,000 ರುಪಾಯಿಯಲ್ಲಿ ಇದೆ.
ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ (ಮೇ 23ಕ್ಕೆ)
- 22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 89,400 ರೂ
- 24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 97,530 ರೂ
- 18 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 73,150 ರೂ
- ಬೆಳ್ಳಿ ಬೆಲೆ 10 ಗ್ರಾಂಗೆ: 1,000 ರೂ
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ
- 22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 89,400 ರೂ
- 24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 97,530 ರೂ
- ಬೆಳ್ಳಿ ಬೆಲೆ 10 ಗ್ರಾಂಗೆ: 1,000 ರೂ
ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ)
- ಬೆಂಗಳೂರು: 89,400 ರೂ
- ಚೆನ್ನೈ: 89,400 ರೂ
- ಮುಂಬೈ: 89,400 ರೂ
- ದೆಹಲಿ: 89,550 ರೂ
- ಕೋಲ್ಕತಾ: 89,400 ರೂ
- ಕೇರಳ: 89,400 ರೂ
- ಅಹ್ಮದಾಬಾದ್: 89,450 ರೂ
- ಜೈಪುರ್: 89,550 ರೂ
- ಲಕ್ನೋ: 89,550 ರೂ
- ಭುವನೇಶ್ವರ್: 89,400 ರೂ