ಹಾವೇರಿ: ಹಾವೇರಿಯಲ್ಲಿ ಗ್ಯಾಂಗ್ ರೇಪ್ ಆರೋಪಿಗಳು ಜಾಮೀನು ಮೇಲೆ ಬಿಡುಗಡೆ ಹೊಂದಿದ್ದಾರೆ. ಆ ಆರೋಪಿಗಳನ್ನು ಮೆರವಣಿಗೆ ಮೂಲಕ ಕರೆತಂದ ಘಟನೆ ಹಾವೇರಿಯಲ್ಲಿ ನಡೆದಿದೆ. ಹೌದು ಹಾನಗಲ್ ಗ್ಯಾಂಗ್ ರೇಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ 7 ಆರೋಪಿಗಳಿಗೆ ಹಾವೇರಿ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ ನ್ಯಾಯಾಲಯದಿಂದ ಜಾಮೀನು ಮಂಜೂರು ಮಾಡಿತ್ತು.
ಜಾಮೀನು ಸಿಗುತ್ತಲೇ ಆರೋಪಿಗಳಿಂದ ರೋಡ್ ಶೋ ಮಾಡಿರುವಂತ ಘಟನೆ ನಡೆದಿದೆ. ಸದ್ಯ ರೋಡ್ ಶೋ ನಡೆಸಿದ್ದಾರೆ ಎನ್ನಲಾದ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ. A1- ಅಪ್ತಾಬ್ ಚಂದನಕಟ್ಟಿ, A2- ಮದರ್ ಸಾಬ್ ಮಂಡಕ್ಕಿ, A3- ಸಮಿವುಲ್ಲಾ ಲಾಲನವರ, A7- ಮಹಮದ್ ಸಾದಿಕ್ ಅಗಸಿಮನಿ, A8- ಶೊಯಿಬ್ ಮುಲ್ಲಾ, A11- ತೌಸಿಪ್ ಚೋಟಿ, A13- ರಿಯಾಜ್ ಸಾವಿಕೇರಿಗೆ ಜಾಮೀನಿನ ಮೇಲೆ ಬಿಡುಗಡೆಯಾದ ಆರೋಪಿಗಳಾಗಿದ್ದು,
ಕಳೆದ ಜನೆವರಿ 8, 2024 ರಂದು ತನ್ನ ಮೇಲೆ ಗ್ಯಾಂಗ್ ರೇಪ್ ನಡೆದಿರೋದಾಗಿ ಸಂತ್ರಸ್ಥೆ ದೂರು ನೀಡಿದ್ದರು. ಪ್ರಕರಣದಲ್ಲಿ ಜೈಲುಪಾಲಾಗಿದ್ದ 19 ಆರೋಪಿಗಳ ಪೈಕಿ 12 ಆರೋಪಿಗಳು 10 ತಿಂಗಳ ಹಿಂದೆಯೇ ಜಾಮೀನು ಪಡೆದಿದ್ರು. ಆದರೆ ಪ್ರಮುಖ ಆರೋಪಿಗಳ ಜಾಮೀನು ಅರ್ಜಿಗಳನ್ನು ನ್ಯಾಯಾಲಯ ಹಲವು ಬಾರಿ ತಿರಸ್ಕರಿಸಿತ್ತು.
ಹೊಸ ಬಟ್ಟೆ ಬಣ್ಣ ಬಿಡುತ್ತೆ ಅನ್ನೋ ಭಯ ಇದ್ದರೆ ಈ ಟ್ರಿಕ್ಸ್ ಟ್ರೈ ಮಾಡಿ ನೋಡಿ! ರಿಸಲ್ಟ್ ಪಕ್ಕಾ
ಸಂತ್ರಸ್ಥೆ ಮ್ಯಾಜಿಸ್ಟ್ರೇಟ್ ಮುಂದೆ ನೀಡಿದ್ದ ಹೇಳಿಕೆಗಳನ್ನು ಉಳಿಸಿಕೊಳ್ಳಲು ವಿಫಲವಾದ ಹಿನ್ನಲೆ ಅತ್ಯಾಚಾರ ಪ್ರಕರಣದ ಎಲ್ಲಾ 7 ಆರೋಪಿಗಳಿಗೂ ಜಾಮೀನು ಮಂಜೂರು ಮಾಡಿದೆ. ಜಾಮೀನು ಸಿಗುತ್ತಲೇ ಆರೋಪಿಗಳಿಂದ ರೋಡ್ ಶೋ ನಡೆದಿದೆ.
ಹಾವೇರಿ ಸಬ್ ಜೈಲಿನಿಂದ ಅಕ್ಕಿ ಆಲೂರಿಗೆ ತೆರಳೋವರೆಗೂ ರೋಡ್ ಶೋ ನಡೆಸಲಾಗಿದ್ದು, 5 ಕಾರುಗಳಲ್ಲಿ 20 ಕ್ಕೂ ಹೆಚ್ಚು ಹಿಂಬಾಲಕರ ಜೊತೆ ಮೆರವಣಿಗೆ ಮಾಡಲಾಗಿದೆ. ಅಕ್ಕಿ ಆಲೂರು ಪಟ್ಟಣದಲ್ಲೂ ರೋಡ್ ಶೋ ನಡೆಸಿದ್ದಾರೆ ಎನ್ನಲಾದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.