ಧಾರವಾಡ : ಮುಂದೆ ಹೊರಟಿದ್ದ ವಾಹನವೊಂದಕ್ಕೆ ಹಿಂದೆ ಬರುತ್ತಿದ್ದ ಕಾರು ಡಿಕ್ಕಿ ಹೊಡೆದ ಪರಿಣಾಮ ಕಾರು ಓಡಿಸುತ್ತಿದ್ದ ಬ್ಯಾಂಕ್ ಮ್ಯಾನೇಜರ್ ಸ್ಥಳದಲ್ಲೇ ಮೃತಪಟ್ಟ ಘಟನೆ ಧಾರವಾಡ ಬಳಿ ನಡೆದಿದೆ.
ಮೂಲತಃ ಮದ್ಯಪ್ರದೇಶ ಮೂಲದ ರಾಹುಲ್ ಶುಕ್ಲಾ, ಧಾರವಾಡದಿಂದ ಬೆಳಗಾವಿಗೆ ಕುಟುಂಬ ಸಮೇತ ಹೊರಟಿದ್ದರು. ಈ ವೇಳೆ ಕಾರು ಧಾರವಾಡ ಹೊರವಲಯದ ರಾಷ್ಟ್ರೀಯ ಹೆದ್ದಾರಿಯ ಮುಲ್ಲಾ ದಾಬಾ ಹತ್ತಿರ ಬರುತ್ತಿದ್ದಂತೆ ಚಾಲಕನ ನಿಯಂತ್ರಣ ಕಳೆದುಕೊಂಡಿದೆ. ಮುಂದೆ ಸಾಗುತ್ತಿದ್ದ ವಾಹನಕ್ಕೆ ಹಿಂದಿನಿಂದ ಕಾರು ಡಿಕ್ಕಿ ಹೊಡೆದ ಪರಿಣಾಮ ಬ್ಯಾಂಕ್ ಮ್ಯಾನೇಜರ್ ರಾಹುಲ್ ಶುಕ್ಲಾ (40)ಸಾವನ್ನಪ್ಪಿದ್ದರೆ, ಪತ್ನಿ ಶ್ರೇಯಾ ಶುಕ್ಲಾ(35), ಮಗಳು ಕಿಯಾನಾ ಶುಕ್ಲಾ(3) ಗಂಭೀರವಾಗಿ ಗಾಯಗೊಂಡಿದ್ದಾರೆ.
ಗಾಯಾಳುಗಳನ್ನು ಧಾರವಾಡದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ಗರಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಗ್ಯಾಂಗ್ ರೇಪ್ ಆರೋಪಿಗಳು ಜೈಲಿನಿಂದ ರಿಲೀಸ್.. ಭರ್ಜರಿ ರೋಡ್ ಶೋ ಮಾಡಿ ಬಿಲ್ಡಪ್ – Video Viral