ಹುಬ್ಬಳ್ಳಿ: ಕುಂದಗೋಳ ತಾಲೂಕಿನ ಹಿರೇಹರಕುಣಿ ಗ್ರಾಮದ
ಮೈಲಾರಪ್ಪ ಬಸವರಾಜ ಉಣಕಲ್ ಎಂಬ 18 ವರ್ಷದ ಬಾಲಕ ಇತ್ತೀಚೆಗೆ ಹಿರೇನೆರ್ತಿ ಗ್ರಾಮದಲ್ಲಿ ಸಿಡಿಲು ಬಡಿದು ಸಾವನ್ನಪ್ಪಿದರು. ಈ ಹಿನ್ನೆಲೆಯಲ್ಲಿ ಯುವಕನ ಮನೆಗೆ ಶಾಸಕರಾದ ಎಮ್ ಆರ್ ಪಾಟೀಲ ಅವರು ಭೇಟಿ ನೀಡಿ ಎನ್ ಡಿ ಆರ್ ಎಪ್ ನಿಂದ ಹಾಗೂ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಮ್ರತ ಯುವಕನ ಕುಟುಂಬಕ್ಕೆ ಸರಕಾರದಿಂದ 5 ಲಕ್ಷ ರೂ ಗಳನ್ನು ಜಮಾ ಮಾಡಿದ ಮಾಹಿತಿ ಪತ್ರವನ್ನು ಮ್ರತನ ತಾಯಿಗೆ ನೀಡಿ ಸಾಂತ್ವಾನ ತಿಳಿಸಿದರು.
ಈ ಸಂಧರ್ಭದಲ್ಲಿ ತಹಶಿಲ್ದಾರ ಮಾವರಕರ,ದಾನಪ್ಪ ಗಂಗಾಯಿ, ಡಿ ವಾಯ್ ಲಕ್ಕನಗೌಡ್ರ,ರಂಗನಗೌಡ ಪಾಟೀಲ ಮಾಲತೇಶ ಶ್ಯಾಗೋಟಿ, ರುದ್ರಪ್ಪ ಮಡ್ಲಿ,ಬಸವರಾಜ ಚಿಕ್ಕಹರಕುಣಿ ಕೆಂಚಪ್ಪ ಸಾದರ , ಅಶೋಕ ಹಸಬಿ, ರಾಘವೇಂದ್ರಗೌಡ ಪಾಟೀಲ ,ಬಸಯ್ಯ ಹಿರೇಮಠ,ಚನ್ನವೀರಗೌಡ ಪಾಟೀಲ, ಮಂಜುನಾಥ ಹಳ್ಳೂರ,ಕಲ್ಲಪ್ಪ ಹರಕುಣಿ ಹಾಗೂ ಗ್ರಾಮದ ಗುರು ಹಿರಿಯರು ಇದ್ದರು.