ಜಮ್ಮುಕಾಶ್ಮೀರದ ಪಹಲ್ಗಾಮ್ ದಾಳಿಗೆ ಭಾರತ ಸೇಡು ತೀರಿಸಿಕೊಂಡಿದೆ. ಪಾಪಿಸ್ತಾನಕ್ಕೆ ಆಪರೇಷನ್ ಸಿಂಧೂರ ಕಾರ್ಯಾಚರಣೆ ಮೂಲಕ ತಕ್ಕ ಉತ್ತರ ಕೊಟ್ಟಿದೆ. ಪಾಕ್ ನೆಲೆಗಳನ್ನು ಧ್ವಂಸಗೊಳಿಸಿರುವ ಭಾರತ ಈಗ ಸಿಹಿ ಯುದ್ಧ ಆರಂಭಿಸಿದೆ. ಭಾರತದ ಅತಿಜನಪ್ರಿಯ ಸಿಹಿತಿಂಡಿ ಮೈಸೂರು ಪಾಕ್ ಈಗ ಮೈಸೂರು ಶ್ರೀ ಆಗಿ ಬದಲಾಗಿದೆ.
ಮೈಸೂರು ಶ್ರೀ ಆಗಿ ಬದಲಾಗಲು ಕಾರಣವೇನು?
ಮೈಸೂರು ಪಾಕ್ ಹೆಸರಿನಲ್ಲಿ ಪಾಕ್ ಎಂಬ ಹೆಸರು ಇದು. ಹೀಗಾಗಿ ರಾಜಸ್ಥಾನದ ರಾಜಧಾನಿ ಜೈಪುರ ನಗರದ ಸ್ವೀಟ್ಸ್ ಆಂಗಡಿಯ ಮಾಲೀಕರೊಬ್ಬರು ಪಾಕ್ ಎನ್ನುವ ಹೆಸರನ್ನು ಬದಲಿಸಿ ಆಪರೇಷನ್ ಸಿಂಧೂರ್ಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಬರೀ ಮೈಸೂರು ಪಾಕ್ ಗೆ ಮೈಸೂರು ಶ್ರೀ, ಆಮ್ ಪಾಕ್ ಗೆ ಆಮ್ ಶ್ರೀ, ಗೊಂದ್ ಪಾಕ್ ಗೆ ಗೊಂದ್ ಶ್ರೀ ಎಂದು ಹೆಸರನ್ನು ಬದಲಾವಣೆ ಮಾಡಲಾಗಿದೆ. ಭಾರತದ ಕೆಲವು ಪ್ರಸಿದ್ಧ ಸಿಹಿತಿಂಡಿಗಳ ಮೇಲೆ ಪಾಕ್ ಎನ್ನುವ ಪದ ಸಾಮಾನ್ಯವಾಗಿ ಬರುತ್ತದೆ. ಇದೇ ಹೆಸರನ್ನು ಬದಲಾವಣೆ ಮಾಡಿದ್ದಾರೆ ಅಂಗಡಿ ಮಾಲೀಕ.
ಪಾಕಮ್ ಇದ್ದಿದ್ದು ಪಾಕ್ ಆಗಿದ್ದೇಗೆ?
ಮೈಸೂರು ಪಾಕ್ ಮತ್ತು ದಕ್ಷಿಣ ಭಾರತದ ಹೆಚ್ಚಿನ ಸಿಹಿತಿಂಡಿಗಳ ಮೂಲ ಹೆಸರು ಪಾಕ್ ಅಲ್ಲ. ಪಾಕಮ್ ನಿಂದ ಕೊನೆಗೊಳ್ಳುತ್ತದೆ. ನಿಧಾನವಾಗಿ ಜನರು ಅದನ್ನು ಕತ್ತರಿಸಿ #ಮೈಸೂರುಪಾಕ್ ಎಂದು ಕರೆಯಲು ಆರಂಭಿಸಿದರು. ಪಾಕಮ್ ಎಂಬುದು ಸಂಸ್ಕೃತ ಪದ. ಈಗಲೂ ಆಂಧ್ರ ಮತ್ತು ತಮಿಳುನಾಡಿನಲ್ಲಿ ಇದನ್ನು ಮೈಸೂರು ಪಾಕಮ್, ಬೆಲ್ಲಂ ಪಾಕಮ್ ಎಂದು ಕರೆಯುತ್ತೇವೆ. ಇದಕ್ಕೆ ಪಾಕ್ಗೂ ಯಾವುದೇ ಸಂಬಂಧವಿಲ್ಲ ಎಂಬ ಚರ್ಚೆ ಸೋಷಿಯಲ್ ಮೀಡಿಯಾದಲ್ಲಿ ಶುರುವಾಗಿದೆ.