ಚಿಕ್ಕಮಗಳೂರು:- ಭಾರೀ ಮಳೆಯಿಂದ ಹಳ್ಳಕ್ಕೆ ಕಾರುಗಳು ಉರುಳಿ ಬಿದ್ದಿರುವ ಘಟನೆ ಚಿಕ್ಕಮಗಳೂರಿನ ಮೂಡಿಗೆರೆಯಲ್ಲಿ ಜರುಗಿದೆ. ಒಂದು ಕಾರು ಚಕ್ಕಮಕ್ಕಿ ಗ್ರಾಮದ ಬಳಿ ನದಿಗೆ ಬಿದ್ದಿದೆ. ಇನ್ನೊಂದು ಕಾರು ಬಣಕಲ್ ಸಮೀಪದ ಹಳ್ಳಕ್ಕೆ ಬಿದ್ದಿದೆ.
ಚಾಲಕರ ನಿಯಂತ್ರಣ ತಪ್ಪಿ ಕಾರುಗಳು ಪಲ್ಟಿಯಾಗಿವೆ. ಕಾರಿನಲ್ಲಿದ್ದವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಸಮಾಜ ಸೇವಕ ಆರೀಫ್ ಸೊಂಟಕ್ಕೆ ಹಗ್ಗ ಕಟ್ಟಿ ಹಳ್ಳಕ್ಕೆ ಇಳಿದು ಕಾರಿನಲ್ಲಿದ್ದವರನ್ನು ರಕ್ಷಿಸಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಸಂಬಂಧ ಬಣಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ