ಉಡುಪಿ:- ಜಿಲ್ಲೆಯಲ್ಲಿ ಭಾರೀ ಮಳೆ ಸುರಿಯುತ್ತಿರುವ ಹಿನ್ನೆಲೆ ಇಲ್ಲಿ ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಿದೆ.
ಕೋಲ್ಕತ್ತಾ ವಿರುದ್ಧ ಗೆದ್ದು ಬೀಗಿದ ಹೈದರಾಬಾದ್: ಸೋಲಿನೊಂದಿಗೆ ಪ್ರಯಾಣ ಮುಗಿಸಿದ ಕೆಕೆಆರ್!
ಜಿಲ್ಲೆಯಾದ್ಯಂತ ನಿರಂತರ ಮಳೆಯಾಗುತ್ತಿದೆ. ಚಂಡಮಾರುತ ವಾಯುಭಾರ ಕುಸಿತದ ಜೊತೆ ಪೂರ್ವ ಮುಂಗಾರು ಮಳೆ ಅಬ್ಬರ ಶುರು ಮಾಡಿದೆ. ಜಿಲ್ಲಾಡಳಿತ ಹವಾಮಾನ ಇಲಾಖೆ ಸಾರ್ವಜನಿಕರಿಗೆ ಪ್ರವಾಸಿಗರಿಗೆ ನಿಯಮಗಳನ್ನು ಜಾರಿಗೊಳಿಸಿದೆ. ನದಿ ಸಮುದ್ರ ಪಾತ್ರದಲ್ಲಿ ಓಡಾಡಬಾರದು ನೀರಿಗೆ ಇಳಿಯಬಾರದು ಎಂಬ ಸೂಚನೆ ನೀಡಿದೆ.
ಉಡುಪಿಯ ಕಾಪು ಬೀಚಿನಲ್ಲಿ ಕೂಡ ಕಟ್ಟೆಚ್ಚರವಹಿಸಲಾಗಿದೆ. ಸಮುದ್ರ ತೀರಕ್ಕೆ ದೀಪ ಸ್ತಂಭದ ಕೆಳಭಾಗದಲ್ಲಿರುವ ಬಂಡೆ ಮೇಲೆ ಹತ್ತಬಾರದು, ಮೋಜು-ಮಸ್ತಿ ಮಾಡಬಾರದು ಎಂಬ ನಿಯಮವಿದೆ. ನಿಯಮವನ್ನ ಮೀರಿ ಜನ ಬಂಡೆ ಹತ್ತಿ ಸಮುದ್ರದ ಅಬ್ಬರವನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ.
ಇಡೀ ವರ್ಷದಲ್ಲಿ ಏಪ್ರಿಲ್, ಮೇ ತಿಂಗಳು ಪ್ರವಾಸಿಗರ ಆಗಮನವಾಗುತ್ತದೆ. ಮೇ ತಿಂಗಳಲ್ಲಿ ಮಳೆ ಶುರುವಾಗಿರುವ ಕಾರಣ ಪ್ರವಾಸಿಗರಿಗೆ ರಜೆಯನ್ನು ಎಂಜಾಯ್ ಮಾಡಲು ಸಾಧ್ಯವಾಗಿಲ್ಲ. ಟೂರಿಸ್ಟ್‌ಗಳನ್ನೇ ನಂಬಿರುವ ವ್ಯಾಪಾರಿಗಳಿಗೂ ಮಳೆ ನಷ್ಟ ತಂದಿದೆ.