ಗದಗ: ‘ಜಗದ್ಗುರು ತೋಂಟದಾರ್ಯ ಮಠದ ಜಾತ್ರಾ ಮಹೋತ್ಸವದ ಅಂಗವಾಗಿ ರಥಬೀದಿಯಲ್ಲಿ ವ್ಯಾಪಾರ ಮಳಿಗೆ ಹಾಕಲಾಗಿದೆ. ಅನ್ಯ ರಾಜ್ಯದ ವ್ಯಾಪಾರಸ್ಥರನ್ನು ಕೈ ಬಿಟ್ಟು ಕನ್ನಡಿಗರಿಗೆ ವ್ಯಾಪಾರ ಮಾಡಲು ಅವಕಾಶ ಮಾಡಿಕೊಡುವಂತೆ ಒತ್ತಾಯಿಸಿ ಶ್ರೀರಾಮ ಸೇನೆಯ ಸಂಘಟನೆ ಸೇರಿದಂತೆ ವಿವಿಧ ಸಂಘಟನೆಗಳು ಇಂದು ಗದಗ ಬಂದ್‌ಗೆ ಕರೆ ನೀಡಿವೆ.
ಅನ್ನಭಾಗ್ಯ ಯೋಜನೆ: 250ಕ್ಕೂ ಅಧಿಕ ಮೂಟೆಗಳಲ್ಲಿ ಅಕ್ಕಿ ಸಂಗ್ರಹ, ಗ್ರಾಮಸ್ಥರ ಆರೋಪ!
ಆದರೆ ಬಂದ್ ಗೆ ಜಿಲ್ಲಾಡಳಿತ ನಿಷೇಧಾಜ್ಞೆ ಹೊರಡಿಸಿದೆ. ಹೀಗಾಗಿ ತಹಶೀಲ್ದಾರ್ ಅವರು ಪ್ರತಿಬಂಧಕಾಜ್ಞೆ ಜಾರಿಗೋಳಿಸಿ ಆದೇಶ ಹೊರಡಿಸಿದ್ದಾರೆ. ಈ ಬಗ್ಗೆ ಗದಗನಲ್ಲಿ ಎಸ್ಪಿ ಬಿ.ಎಸ್ ನೇಮಗೌಡ ಹೇಳಿಕೆ ಕೊಟ್ಟಿದ್ದಾರೆ. ಬಂದ್ ಬಗ್ಗೆ ಪರ ವಿರೋಧಗಳು ಇರುವುದರಿಂದ
ಕಾನೂನು ಸುವ್ಯವಸ್ಥೆ ಹಿತದೃಷ್ಟಿಯಿಂದ ಬಂದ್ ನಿಷೇಧಿಸಿ ಪ್ರತಿಬಂಧಕಾಜ್ಞೆ ಜಾರಿಗೊಳಿಸಲಾಗಿದೆ.
ಬಂದ್ ಗೆ ಯಾವುದೇ ರೀತಿಯ ಅವಕಾಶ ಇರುವುದಿಲ್ಲ. ಸಂಘಟಿಕರು, ಸಾರ್ವಜನಿಕರು ಬಂದ್ ನಲ್ಲಿ ಭಾಗವಹಿಸುವಂತಿಲ್ಲ. ಬಂದ್ ಸಂಬಂಧಿಸಿದ ಚಟುವಟಿಕೆಗಳು ನಡೆದ್ರೆ ಕಾನೂನು ಕ್ರಮ ಜರುಗಿಸಲಾಗುವುದು. ಕಾನೂನು ಪ್ರಕಾರ ಸೂಕ್ತ ವೇದಿಕೆಯಲ್ಲಿ ಸಮಸ್ಯೆ ಬಗೆಹರಿಸಿಕೊಳ್ಳಬೇಕಿದೆ. ಗದಗ ಬಂದ್ ಗೆ ಅವಕಾಶ ಕೊಡಬಾರದು. ದಿನನಿತ್ಯದಂತೆ ವ್ಯಾಪಾರ ವಹಿವಾಟು, ದಿನನಿತ್ಯದ ಚಟುವಟಿಕೆಗಳು ನಡೆಯಲಿವೆ. ಒತ್ತಾಯ ಪೂರ್ವಕವಾಗಿ ಬಂದ್ ಮಾಡಿದವರ ಮೇಲೆ ನಿರ್ದಾಕ್ಷಣ್ಯವಾಗಿ ಕ್ರಮ ಜರುಗಿಸಲಾಗುತ್ತೆ. ಬಂದೋಬಸ್ತ್ ಗಾಗಿ 2 ಎಸ್ಪಿ, 4 ಡಿವೈಎಸ್ಪಿ, 2 ಕೆ.ಎಸ್.ಆರ್.ಪಿ, 6 ಡಿ.ಆರ್ ತುಕಡಿ, ಸುಮಾರು 200 ಜನ ಸಿಬ್ಬಂದಿಗಳ ನಿಯೋಜನೆ ಮಾಡಲಾಗಿದೆ.
ಮುಂಜಾಗ್ರತಾ ಕ್ರಮವಾಗಿ ಯಾರನ್ನೂ ಬಂಧಿಸಿಲ್ಲ.
ನಿಷೇಧಾಜ್ಞೆ ಜಾರಿ ಪ್ರತಿ ನೀಡಲಾಗಿದೆ. ನಿಷೇಧಾಜ್ಞೆ ಉಲ್ಲಂಘನೆ ಮಾಡಿದ್ರೆ ಮುಂದೆ ಕಾನೂನು ಪ್ರಕಾರ ಕ್ರಮ ಜರುಗಿಸಲಾಗುತ್ತೆ ಎಂದು ಪ್ರತಿಭಟನಾಕಾರರಿಗೆ ಎಸ್.ಪಿ ಬಿ.ಎಸ್ ನೇಮಗೌಡ ಎಚ್ಚರಿಕೆ ಕೊಟ್ಟಿದ್ದಾರೆ.