Close Menu
Ain Live News
    Facebook X (Twitter) Instagram YouTube
    Friday, May 30
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ರಾಜಕೀಯ
    • ಜಿಲ್ಲೆ
    • ಸಿನಿಮಾ
    • ಲೈಫ್ ಸ್ಟೈಲ್
    • ಜ್ಯೋತಿಷ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    Facebook X (Twitter) Instagram YouTube
    Ain Live News

    RCBಗೆ ಆಘಾತ: ಮತ್ತೋರ್ವ ಪ್ರಮುಖ ಆಟಗಾರ ತವರಿಗೆ ಮರಳೋ ಸಾಧ್ಯತೆ!

    By AIN AuthorMay 26, 2025
    Share
    Facebook Twitter LinkedIn Pinterest Email
    Demo

    ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಬಿಗ್ ಶಾಕ್ ಎದುರಾಗಿದ್ದು, ತಂಡದ ಪ್ರಮುಖ ಆಟಗಾರ ನಿರ್ಣಾಯಕ ಪಂದ್ಯಗಳಿಗೂ ಮುನ್ನ ತವರಿಗೆ ತೆರಳಿದ್ದಾರೆ ಎಂದು ವರದಿ ಆಗಿದೆ.

    ಇಂದು ಗದಗ ಬಂದ್ ಗೆ ಕರೆ: ಪ್ರತಿಬಂಧಕಾಜ್ಞೆ ಜಾರಿ… ತೋಂಟದಾರ್ಯ ಮಠದ ಸುತ್ತಲೂ ಖಾಕಿ ಅಲರ್ಟ್!

    ಆರ್​ಸಿಬಿ ತಂಡದ ಸ್ಪೋಟಕ ದಾಂಡಿಗ ಫಿಲ್ ಸಾಲ್ಟ್ ಐಪಿಎಲ್​ನ ಪ್ಲೇಆಫ್ ಪಂದ್ಯಗಳಿಗೆ ಅಲಭ್ಯರಾಗುವ ಸಾಧ್ಯತೆಯಿದೆ. ಇದಕ್ಕೆ ಮುಖ್ಯ ಕಾರಣ ಸಾಲ್ಟ್ ತಂದೆಯಾಗುತ್ತಿರುವುದು. ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಸಾಲ್ಟ್ ಶೀಘ್ರದಲ್ಲೇ ಇಂಗ್ಲೆಂಡ್​ಗೆ ಮರಳಲಿದ್ದು, ಈ ಮೂಲಕ ದೀರ್ಘಕಾಲದ ಗೆಳತಿ ಅಬಿ ಮೆಕ್‌ಲಾವೆನ್ ಅವರ ಆರೈಕೆಗೆ ಆದ್ಯತೆ ನೀಡಲು ನಿರ್ಧರಿಸಿದ್ದಾರೆ ಎಂದು ವರದಿಯಾಗಿದೆ. ಹೀಗಾಗಿ ಫಿಲ್ ಸಾಲ್ಟ್ ಆರ್​ಸಿಬಿ ತಂಡದ ಪ್ಲೇಆಫ್ ಪಂದ್ಯಗಳಿಗೆ ಅಲಭ್ಯರಾಗುವ ಸಾಧ್ಯತೆಯಿದೆ. ಇತ್ತ ಸಾಲ್ಟ್ ಅಲಭ್ಯರಾದರೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಟಿಮ್ ಸೈಫರ್ಟ್ ಅವರನ್ನು ಆರಂಭಿಕನಾಗಿ ಕಣಕ್ಕಿಳಿಸಲಿದೆ.

    ನ್ಯೂಝಿಲೆಂಡ್ ಪರ ಸೈಫರ್ಟ್ ಆರಂಭಿಕನಾಗಿ ಕಣಕ್ಕಿಳಿಯುವ ದಾಂಡಿಗ. ಹೀಗಾಗಿ ಫಿಲ್ ಸಾಲ್ಟ್ ಬದಲಿಯಾಗಿ ಕಿವೀಸ್ ಬ್ಯಾಟರ್ ಕಣಕ್ಕಿಳಿಯುವುದು ಬಹುತೇಕ ಖಚಿತ ಎನ್ನಬಹುದು. ಹಾಗೆಯೇ ಆರ್​ಸಿಬಿ ತಂಡದ ಪ್ಲೇಆಫ್ ಪಂದ್ಯಗಳಿಗೆ ಲುಂಗಿ ಎನ್​ಗಿಡಿ ಹಾಗೂ ಜೇಕಬ್ ಬೆಥೆಲ್ ಕೂಡ ಅಲಭ್ಯರಾಗಿದ್ದಾರೆ. ವಿಶ್ವ ಟೆಸ್ಟ್ ಚಾಪಿಯನ್​ಶಿಪ್ ಫೈನಲ್ ಪಂದ್ಯಕ್ಕಾಗಿ ಸೌತ್ ಆಫ್ರಿಕಾ ತಂಡವನ್ನು ಕೂಡಿಕೊಳ್ಳಲು ಎನ್​ಗಿಡಿ ತವರಿಗೆ ಹಿಂತಿರುಗಿದರೆ, ಬೆಥೆಲ್ ವೆಸ್ಟ್ ಇಂಡೀಸ್ ವಿರುದ್ಧದ ಸರಣಿಗಾಗಿ ಇಂಗ್ಲೆಂಡ್​ಗೆ ಮರಳಲಿದ್ದಾರೆ.

    ಇತ್ತ ಲುಂಗಿ ಎನ್​ಗಿಡಿ ಬದಲಿಗೆ ಝಿಂಬಾಬ್ವೆ ವೇಗಿ ಬ್ಲೆಸಿಂಗ್ ಮುಝರಬಾನಿ ಎಂಟ್ರಿ ಕೊಟ್ಟರೆ, ಜೇಕಬ್ ಬೆಥೆಲ್ ಬದಲಿಯಾಗಿ ನ್ಯೂಝಿಲೆಂಡ್​ನ ಟಿಮ್ ಸೈಫರ್ಟ್ ಆರ್​ಸಿಬಿ ತಂಡಕ್ಕೆ​ ಆಯ್ಕೆಯಾಗಿದ್ದಾರೆ. ಈ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯು ಪ್ಲೇಆಫ್ ಪಂದ್ಯಗಳಿಗೂ ಮುನ್ನ ಬದಲಿ ಆಟಗಾರರನ್ನು ಆಯ್ಕೆ ಮಾಡಿಕೊಂಡಿದ್ದಾರೆ.

    Demo
    Share. Facebook Twitter LinkedIn Email WhatsApp

    Related Posts

    IPL 2025: ಫೈನಲ್ ತಲುಪಿದ ಆರ್ ಸಿಬಿಗೆ ವಿಶ್ ಮಾಡಿದ ವಿಜಯ್ ಮಲ್ಯ!

    May 30, 2025

    ಪಂಜಾಬ್ ಮಣಿಸಿ ಫೈನಲ್ ತಲುಪಿದ RCB: ಕ್ಯಾಪ್ಟನ್ ರಜತ್ ಗೆಲುವಿನ ಕ್ರೆಡಿಟ್ ಯಾರಿಗೆ ಕೊಟ್ರೂ!

    May 30, 2025

    IPL 2025: ಫೈನಲ್​ಗೇರಿದ ಆರ್ ಸಿಬಿ: ಸ್ಟೇಡಿಯಂ ನಲ್ಲಿ ಕುಣಿದು ಕುಪ್ಪಳಿಸಿದ ಆಟಗಾರರು!

    May 30, 2025

    IPL 2025: ಐಪಿಎಲ್ ಇತಿಹಾಸದಲ್ಲಿ ನಾಲ್ಕನೇ ಬಾರಿಗೆ ಫೈನಲ್​ಗೇರಿದ ಆರ್​ಸಿಬಿ: ಪಂಜಾಬ್ ಬೆಂಗಳೂರು ಕೊಟ್ಟ ಪಂಚ್ ಹೀಗಿತ್ತು!

    May 29, 2025

    RCB ಬೌಲರ್ ಗಳ ಆರ್ಭಟ: ಫೈನಲ್‌ಗೇರಲು ಬೆಂಗಳೂರಿಗೆ ಜಸ್ಟ್ 102 ರನ್‌ ಗುರಿ!

    May 29, 2025

    IPL 2025: ಇಂದು ಪಂಜಾಬ್-ಬೆಂಗಳೂರು ಫೈನಲ್ ಫೈಟ್: RCBಗೆ ಹೆಚ್ಚಿದ ಗಾಯದ ಚಿಂತೆ!

    May 29, 2025

    Jitesh Sharma: ನನ್ನ ಸ್ಪೋಟಕ ಆಟಕ್ಕೆ ಆರ್‌ಸಿಬಿಯಲ್ಲಿರುವ ಅಣ್ಣ ಕಾರಣ: ಜಿತೇಶ್!

    May 28, 2025

    ಲಕ್ನೋ ವಿರುದ್ಧ 6 ವಿಕೆಟ್ ಗಳ ಜಯ: ಐಪಿಎಲ್ ನಲ್ಲಿ ಹೊಸ ಇತಿಹಾಸ ಸೃಷ್ಟಿಸಿದ ಆರ್ ಸಿಬಿ!

    May 28, 2025

    IPL 2025: ಈ ಬಾರಿಯ ಐಪಿಎಲ್ ನಲ್ಲಿ ಫೈನಲ್ ತಂಡಗಳನ್ನು ಹೆಸರಿಸಿದ ರಾಬಿನ್ ಉತ್ತಪ್ಪ!

    May 27, 2025

    ಸಂಭಾವನೆ ಪಡೆಯದೇ ಅರಣ್ಯ ಇಲಾಖೆ ರಾಯಭಾರಿಯಾದ ಅನಿಲ್‌ ಕುಂಬ್ಳೆ

    May 27, 2025

    ಇಂದು RCB Vs LSG ಹೈ ವೋಲ್ಟೇಜ್ ಮ್ಯಾಚ್: ಮಳೆಯಿಂದ ಪಂದ್ಯ ರದ್ದಾದ್ರೆ ಯಾರಿಗೆ ಲಾಭ!?

    May 27, 2025

    IPL 2025: ಮುಂಬೈ ವಿರುದ್ಧ ಭರ್ಜರಿ ಗೆಲುವು: ಟೇಬಲ್ ಟಾಪರ್ ಆದ ಪಂಜಾಬ್‌ ಕಿಂಗ್ಸ್‌!

    May 27, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.