ಕಾರವಾರ:- ಬೈಕ್ ಹಾಗೂ ಸ್ಕೂಟಿ ನಡುವೆ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಬೈಕ್‌ನಲ್ಲಿದ್ದ ಇಬ್ಬರೂ ಮಕ್ಕಳು ಸೇರಿ ನಾಲ್ವರು ಗಂಭೀರವಾಗಿ ಗಾಯಗೊಂಡ ಘಟನೆ ದಾಂಡೇಲಿ ನಗರದ ಅಂಬೇವಾಡಿಯಲ್ಲಿ ಜರುಗಿದೆ.
ಇಮ್ತಿಯಾಜ್ ಶಾಹೀದ್ ಪಟೇಲ್, ಆತನ ಇಬ್ಬರೂ ಮಕ್ಕಳು ಗಂಭೀರ ಗಾಯಗೊಂಡವರು. ಇಮ್ತಿಯಾಜ್ ಮಕ್ಕಳೊಂದಿಗೆ ಬೈಕಿನಲ್ಲಿ ಹೋಗುತ್ತಿದ್ದ ವೇಳೆ ಘಟನೆ ಜರುಗಿದೆ. ಸ್ಕೂಟಿ ಚಾಲಕ ಭೀಮರಾವ್ ಮಲ್ಲಪ್ಪ ಕೆಂಬಾವಿ ಎಂಬಾತನಿಗೂ ಗಂಭೀರ ಗಾಯವಾಗಿದ್ದು, ಗಾಯಾಳುಗಳಿಗೆ ಧಾರವಾಡ ಆಸ್ಪತ್ರೆಗೆ ಚಿಕಿತ್ಸೆ ನೀಡಲಾಗುತ್ತಿದೆ.