ಹಬ್ಬದ ಸಂಭ್ರಮ ಹೆಚ್ಚಿಸುವ ಬಂಗಾರ, ಬೆಳ್ಳಿಯನ್ನು ಖರೀದಿಸಲು ತಮ್ಮ ಅಳಿದುಳಿದ ಉಳಿತಾಯಗಳನ್ನು ಬಳಸಿ ಗ್ರಾಹಕರು ಆಭರಣಗಳು, ಪೂಜಾಪರಿಕರಗಳ ಖರೀದಿ ಮಾಡುತ್ತಾರೆ. ಇಂಧನಗಳಂತೆ, ಬಂಗಾರ, ಬೆಳ್ಳಿ ಕೂಡ ಹಲವಾರು ವಿದ್ಯಮಾನಗಳ ಕಾರಣದಿಂದ ಬೆಲೆ ಏರಿಕೆಯ ಬಿಸಿಗೆ ಒಳಗಾಗಿದ್ದು,
ಗ್ರಾಹಕರ ಪಾಲಿಗೆ ನುಂಗಲಾರದ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಆದರೂ ಗ್ರಾಹಕರು ಕೊಂಚವಾದರೂ ಚಿನ್ನದ ಬೆಲೆ ತಗ್ಗಿದರೆ ಅದನ್ನು ಸದುಪಯೋಗಪಡಿಸಿಕೊಳ್ಳಲು ತುದಿಗಾಲಲ್ಲಿ ಕಾಯುತ್ತಿದ್ದಾರೆ. ಸರಿ ಹಾಗಿದ್ದರೆ ಇಂದಿನ ಚಿನ್ನ ಬೆಳ್ಳಿ ಬೆಲೆಗಳ ಬಗ್ಗೆ ತಿಳಿದುಕೊಳ್ಳೋಣ..
ನೀವು ಖಾಲಿ ಹೊಟ್ಟೆಯಲ್ಲಿ ಪಪ್ಪಾಯಿ ಹಣ್ಣು ತಿನ್ನುತ್ತೀರಾ!? ಹಾಗಿದ್ರೆ ಈ ಸುದ್ದಿ ನೋಡಿ!
ಚಿನ್ನದ ಬೆಲೆ ಇಂದು ಸೋಮವಾರ ಸ್ವಲ್ಪ ಕಡಿಮೆಗೊಂಡಿದೆ. ಆಭರಣ ಚಿನ್ನದ ಬೆಲೆ ಗ್ರಾಮ್ಗೆ 40 ರೂನಷ್ಟು ತಗ್ಗಿದೆ. ಅಪರಂಜಿ ಚಿನ್ನದ ಬೆಲೆ 44 ರೂ ಇಳಿಕೆಯಾದರೆ, 18 ಕ್ಯಾರಟ್ನ ಚಿನ್ನದ ಬೆಲೆ 37 ರೂಗಳಷ್ಟು ಕಡಿಮೆಗೊಂಡಿದೆ. ಭಾರತದಂತೆ ಹಲವು ದೇಶಗಳಲ್ಲೂ ಚಿನ್ನದ ಬೆಲೆ ಸ್ವಲ್ಪ ತಗ್ಗಿದೆ. ಅಮೆರಿಕ ಮೊದಲಾದ ಕೆಲ ದೇಶಗಳಲ್ಲಿ ಬೆಲೆ ಸ್ವಲ್ಪ ಏರಿಕೆ ಆಗಿದೆ.
ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 89,500 ರುಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 97,640 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 10,000 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್ಗೆ 89,500 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್ಗೆ 10,000 ರುಪಾಯಿಯಲ್ಲಿ ಇದೆ.
ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ (ಮೇ 26ಕ್ಕೆ)
- 22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 89,500 ರೂ
- 24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 97,640 ರೂ
- 18 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 73,230 ರೂ
- ಬೆಳ್ಳಿ ಬೆಲೆ 10 ಗ್ರಾಂಗೆ: 1,000 ರೂ
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ
- 22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 89,500 ರೂ
- 24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 97,640 ರೂ
- ಬೆಳ್ಳಿ ಬೆಲೆ 10 ಗ್ರಾಂಗೆ: 1,000 ರೂ
ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ)
- ಬೆಂಗಳೂರು: 89,500 ರೂ
- ಚೆನ್ನೈ: 89,500 ರೂ
- ಮುಂಬೈ: 89,500 ರೂ
- ದೆಹಲಿ: 89,650 ರೂ
- ಕೋಲ್ಕತಾ: 89,500 ರೂ
- ಕೇರಳ: 89,500 ರೂ
- ಅಹ್ಮದಾಬಾದ್: 89,550 ರೂ
- ಜೈಪುರ್: 89,650 ರೂ
- ಲಕ್ನೋ: 89,650 ರೂ
- ಭುವನೇಶ್ವರ್: 89,500 ರೂ