ಐಪಿಎಲ್ ಸೀಸನ್ 18 ತೆರೆ ಬೀಳೋದಿಕ್ಕೆ ಇನ್ನೇನೂ ಕೆಲ ದಿನಗಳಷ್ಟೇ ಬಾಕಿ ಇದೆ. ಈ ಸಲ ಕಪ್ ಆರ್ ಸಿಬಿ ತಂಡ ಕಪ್ ಗೆ ಮುತ್ತಿಡುವ ತವಕದಲ್ಲಿದೆ. ನಾಳೆ LSG ವಿರುದ್ಧ ಪಾಟೀದರ್ ಪಡೆ ಗೆದ್ದರೆ RCB ಟೇಬಲ್ ಟಾಪ್1ನಲ್ಲಿ ಸ್ಥಾನಗಿಟ್ಟಿಸಿಕೊಳ್ಳಲಿದೆ. ಹೇಳಿಕೇಳಿ ಐಪಿಎಲ್ ನಲ್ಲಿ ಅತಿ ಹೆಚ್ಚು ಫ್ಯಾನ್ ಫಾಲೋಯಿಂಗ್ ಇರುವ ಏಕೈಕ ಟೀಂ ಅಂದ್ರೆ ಅದು RCB. ಡೈಹಾರ್ಡ್ ಫ್ಯಾನ್ಸ್, ರಾಯಲ್ ಫ್ಯಾನ್ಸ್ ಪಡೆದಿರುವ ತಂಡ ರಾಯಲ್ ಚಾಲೆಂಜೆರ್ಸ್ ಬೆಂಗಳೂರು. ಈ ತಂಡವೀಗ ಹೊಸ ರೆಕಾರ್ಡ್ ಬರೆದಿದೆ.
ರಾಯಲ್ ಚಾಲೆಂಜೆರ್ಸ್ ಬೆಂಗಳೂರು ಸೋಷಿಯಲ್ ಮೀಡಿಯಾದಲ್ಲಿ ನಯಾ ದಾಖಲೆ ಸೃಷ್ಟಿಸಿದೆ. ಇನ್ ಸ್ಟಾಗ್ರಾಂನಲ್ಲಿ RCB ಬರೋಬ್ಬರಿ 20 ಮಿಲಿಯನ ಫಾಲೋವರ್ಸ್ ತನ್ನದಾಗಿಸಿಕೊಂಡಿದ್ದು, ಈ ಮೂಲಕ ಹೊಸ ರೆಕಾರ್ಡ್ ನ್ನು ತನ್ನ ಬುಟ್ಟಿಗೆ ಹಾಕಿಕೊಂಡಿದೆ. ಚೆನ್ನೈ ಸೂಪರ್ ಕಿಂಗ್ಸ್ 18.6 ಮಿಲಿಯನ್ಸ್ ಫಾಲೋವರ್ಸ್ ಹೊಂದಿದ್ದು, ಮುಂಬೈ 18 ಮಿಲಿಯನ್ಸ್, ಶಾರುಖ್ ಖಾನ್ ಒಡೆತನದ ಕೆಕೆಆರ್ ತಂಡ 7.5 ಮಿಲಿಯನ್ಸ್ ಹಾಗೂ ಪ್ರೀತಿ ಜಿಂಟಾ ಒಡೆತನದ ಪಂಜಾಬ್ ಕಿಂಗ್ಸ್ 4.1 ಮಿಲಿಯನ್ಸ್ ಹಾಗೂ ಶಿಲ್ಪಾ ಶೆಟ್ಟಿ ಮಾಲೀಕರಾಗಿರುವ RR ತಂಡ 5.2 ಮಿಲಿಯನ್ಸ್ ಹೊಂದಿದೆ.
RCB becomes first IPL team to reach 20 million Instagram followers pic.twitter.com/BMzu704Vc4
— RCBIANS OFFICIAL (@RcbianOfficial) May 26, 2025
ಬೆಥಲ್ ಔಟ್ ಮುಜರಬಾನಿ ಇನ್!
ಹೋಮ್ ಡ್ಯೂಟಿಗೆ ಹಾಜರಾಗಿರುವ ಆರ್ ಸಿಬಿ ಸ್ಫೋಟಕ ಬ್ಯಾಟರ್ ಬೆಥಲ್ ಬದಲು ಈಗ ಮತ್ತೊಂದು ಆಟಗಾರ ಎಂಟ್ರಿ ಕೊಟ್ಟಿದ್ದಾರೆ. ಜಿಂಬಾಬ್ವೆ ವೇಗಿ ಬ್ಲೆಸ್ಸಿಂಗ್ ಮುಜರಬಾನಿ ಇಂದು ಆರ್ ಸಿಬಿ ಟೀಂ ಸೇರಿಕೊಂಡಿದ್ದಾರೆ. ಸದ್ಯ ಲಕ್ನೋದಲ್ಲಿ ನಡೆಯುತ್ತಿರುವ ಏಕಾನ್ ಸ್ಟೇಡಿಯಂನಲ್ಲಿ ಅಭ್ಯಾಸದಲ್ಲಿ ಆರ್ ಸಿಬಿ ತಂಡ ನಿರತವಾಗಿದೆ.