ಮಾಸ್ಕೋ: ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಹತ್ಯೆ ಮಾಡಲು ಯತ್ನಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ. ರಷ್ಯಾದ ಗಡಿಯ ಸಮೀಪದಲ್ಲಿ ನಡೆದ ಈ ದಾಳಿಯಲ್ಲಿ ಉಕ್ರೇನ್ ಡ್ರೋನ್‌ಗಳು ರಷ್ಯಾದ ಸೇನಾ ಹೆಲಿಕಾಪ್ಟರ್‌ವೊಂದನ್ನು ಗುರಿಯಾಗಿಸಿವೆ.
ಈ ಹೆಲಿಕಾಪ್ಟರ್‌ನಲ್ಲಿ ಪುಟಿನ್ ಆಪ್ತ ಕಮಾಂಡರ್ ಇದ್ದರು ಎಂದು ತಿಳಿದುಬಂದಿದೆ. ದಾಳಿಯಿಂದ ಕಮಾಂಡರ್ ಗಾಯಗೊಂಡಿದ್ದು, ಆತನ ಸ್ಥಿತಿ ಗಂಭೀರವಾಗಿದೆ ಎಂದು ರಷ್ಯಾದ ಅಧಿಕಾರಿಗಳು ದೃಢಪಡಿಸಿದ್ದಾರೆ. ಈ ದಾಳಿಯನ್ನು ಉಕ್ರೇನ್ ಸೇನೆಯ ವಿಶೇಷ ಡ್ರೋನ್ ತಂಡವು ಯೋಜಿಸಿತ್ತು.
ನೀವು ಖಾಲಿ ಹೊಟ್ಟೆಯಲ್ಲಿ ಪಪ್ಪಾಯಿ ಹಣ್ಣು ತಿನ್ನುತ್ತೀರಾ!? ಹಾಗಿದ್ರೆ ಈ ಸುದ್ದಿ ನೋಡಿ!
ಇದು ರಷ್ಯಾದ ಸೇನಾ ಚಟುವಟಿಕೆಗಳಿಗೆ ತಕ್ಕ ಪ್ರತಿಕ್ರಿಯೆ ಎಂದು ಉಕ್ರೇನ್‌ನ ಸೇನಾ ವಕ್ತಾರರೊಬ್ಬರು ಹೇಳಿದ್ದಾರೆ. ರಷ್ಯಾದ ಕ್ರೆಮ್ಲಿನ್ ಈ ದಾಳಿಯನ್ನು ಖಂಡಿಸಿದ್ದು, ಉಕ್ರೇನ್‌ನ ಈ ಕೃತ್ಯಕ್ಕೆ ತಕ್ಕ ಉತ್ತರ ನೀಡಲಾಗುವುದು ಎಂದು ಎಚ್ಚರಿಕೆ ನೀಡಿದೆ. ಈ ಘಟನೆಯಿಂದ ಎರಡೂ ರಾಷ್ಟ್ರಗಳ ನಡುವಿನ ಉದ್ವಿಗ್ನತೆ ಮತ್ತಷ್ಟು ತೀವ್ರಗೊಂಡಿದೆ.