ದಕ್ಷಿಣ ಭಾರತದಲ್ಲಿ ಇಡ್ಲಿ ಮತ್ತು ದೋಸೆ ಫೇಮಸ್ ತಿಂಡಿಯಾಗಿದೆ. ಬಹಳ ಸುಲಭವಾಗಿ ತಯಾರಿಸಬಹುದಾದ ತಿಂಡಿ ಅಂದರೆ ಅದು ಇಡ್ಲಿ ಮತ್ತು ದೋಸೆ. ಆಫಿಸ್ಗೆ ಹೋಗುವವರಿಂದ ಮನೆಯಲ್ಲಿ ಇರುವ ಪ್ರತಿಯೊಬ್ಬರಿಗೂ ಇಡ್ಲಿ-ದೋಸೆ ಫೆವರೇಟ್ ತಿಂಡಿಯಾಗಿದೆ.
ಯಾವುದೇ ಕಾರಣಕ್ಕೂ ಮಾವಿನಹಣ್ಣು ತಿಂದ್ಮೇಲೆ ಈ ತಪ್ಪನ್ನು ಮಾತ್ರ ಮಾಡ್ಬೇಡಿ: ಹೀಗಾದ್ರೆ ಜೀವಕ್ಕೆ ಅಪಾಯ ಫಿಕ್ಸ್!
ಆದರೆ ಈ ತಿಂಡಿಗೆ ಹಿಟ್ಟನ್ನು ತಯಾರಿಸಲು ಪ್ರತಿದಿನ ಅನೇಕ ಮಂದಿಗೆ ಸಮಯವಿರುವುದಿಲ್ಲ. ಹೀಗಾಗಿ ಮೊದಲೇ ಹಿಟ್ಟನ್ನು ತಯಾರಿಸಿಟ್ಟುಕೊಂಡು ವಾರಕ್ಕೆ ಆಗುವಷ್ಟು ಸಂಗ್ರಹಿಸುತ್ತಾರೆ. ಸಾಮಾನ್ಯವಾಗಿ ಹಿಟ್ಟು ಹುದುಗಿದಷ್ಟು ಒಳ್ಳೆಯದು ಎಂದು ಹೇಳಲಾಗುತ್ತದೆ. ಆದರೆ ಎಷ್ಟೋ ಬಾರಿ ಈ ಹಿಟ್ಟನ್ನು ಫ್ರಿಡ್ಜ್ನಲ್ಲಿ ಸಂಗ್ರಹಿಸುವುದರಿಂದ ಅದು ಹುಳಿಯಾಗಬಹುದು.
ದೋಸೆ ಹಿಟ್ಟು ರುಬ್ಬಿಕೊಳ್ಳುವಾಗ ಹಾಗೂ ಸಂಗ್ರಹಿಸುವಾಗ ಕೆಲವೊಂದು ಟಿಪ್ಸ್ಗಳನ್ನು ಅನುಸರಿಸಿದರೆ, ಒಂದು ವಾರದವರೆಗೆ ಕೆಡದಂತೆ ಇಡಬಹುದು. ತಜ್ಞರು ತಿಳಿಸಿರುವಂತಹ ಕೆಲವು ಸಲಹೆಗಳನ್ನು ಪಾಲಿಸಿದರೆ ದೋಸೆ ಹಿಟ್ಟು ಹುಳಿಯಾಗುವುದಿಲ್ಲ.
ಕಾಯಿಸಿ ಆರಿಸಿದ ನೀರು:ದೋಸೆ ಹಿಟ್ಟಿಗಾಗಿ ಅಕ್ಕಿ ಹಾಗೂ ಉದ್ದಿನಬೇಳೆಯನ್ನು ನೆನಸಿಟ್ಟಾಗ ಈ ನಡುವೆ ಒಂದು ಬಾರಿ ನೀರು ಬದಲಾಯಿಸಬೇಕಾಗುತ್ತದೆ. ಅಕ್ಕಿ ಹಾಗೂ ಉದ್ದಿನ ಬೇಳೆಯನ್ನು 8 ರಿಂದ 9 ಗಂಟೆವರೆಗೆ ನೆನಸಿಡಬೇಕು. ಹಿಟ್ಟು ರುಬ್ಬಿಕೊಳ್ಳುವಾಗ ತಣ್ಣೀರು ಅನ್ನು ಉಪಯೋಗಿಸಬಾರದು. ಕಾಯಿಸಿ ಆರಿಸಿದ ನೀರನ್ನು ಹಾಕಿ ರುಬ್ಬಿಕೊಳ್ಳುವುದರಿಂದ ಈ ಹಿಟ್ಟು ಹುಳಿ ಬರುವುದಿಲ್ಲ.
ಮೆಂತ್ಯೆ ಕಾಳು ಸೇರಿಸಿ:ಹಿಟ್ಟು ರುಬ್ಬಿಕೊಳ್ಳುವಾಗ ಯಾವುದೇ ಕಾರಣಕ್ಕೂ ತೆಂಗಿನಕಾಯಿ ತುರಿಯನ್ನು ಇದಕ್ಕೆ ಮಿಕ್ಸ್ ಮಾಡಬಾರದು. ಬೇಕಾದರೆ, ದೋಸೆ ಮಾಡಿಕೊಳ್ಳುವಾಗ ಅದರ ಮೇಲೆ ತೆಂಗಿನಕಾಯಿ ತುರಿಯನ್ನು ಸೇರಿಸಬೇಕಾಗುತ್ತದೆ. ಆದ್ರೆ, ರುಬ್ಬಿಕೊಳ್ಳುವಾಗ ಯಾವುದೇ ಕಾರಣಕ್ಕೆ ಹಾಕಬಾರದು. ಅಕ್ಕಿ, ಉದ್ದಿನ ಬೇಳೆಯೊಂದಿಗೆ ನೆನಸಿದ ಮೆಂತ್ಯೆ ಕಾಳು ಸೇರಿಸಿದರೆ, ಹಿಟ್ಟು ಹದವಾಗಿ ಬರುತ್ತದೆ. ನೆನೆಸಿದ ಮೆಂತ್ಯೆ ಕಾಳು ದೋಸೆಯ ರುಚಿ ದುಪ್ಪಟ್ಟು ಮಾಡುತ್ತದೆ.
ಉಪ್ಪು, ಬೇಕಿಂಗ್ ಸೋಡಾ ಬಳಸುವಾಗ ಗಮನಹರಿಸಿ:ದೋಸೆ ಹಿಟ್ಟು ರುಬ್ಬುವಾಗ ಉಪ್ಪು, ಬೇಕಿಂಗ್ ಸೋಡಾ ಹಾಕಿ ಮಿಕ್ಸ್ ಮಾಡಬಾರದು. ಬೇಕಿಂಗ್ ಸೋಡಾ ಹಾಕಿ ಮಿಶ್ರಣ ಮಾಡಿ ಹಿಟ್ಟು ರುಬ್ಬಿಕೊಂಡರೆ ಉಬ್ಬು ಬಂದು ಹಿಟ್ಟು ಹಾಳಾಗುತ್ತದೆ. ದೋಸೆ ಸಿದ್ಧಪಡಿಸಿಕೊಳ್ಳುವಾಗ ಬೇಕಿಂಗ್ ಸೋಡಾ ಮಿಶ್ರಣ ಮಾಡಿಕೊಳ್ಳಬಹುದು. ದೋಸೆ ಹಿಟ್ಟಿಗೆ ಪದೇ ಪದೇ ಸ್ಪೂನ್ ಬಳಿಸಿ ಮಿಕ್ಸ್ ಮಾಡಬಾರದು. ಹಿಟ್ಟು ರುಬ್ಬಿ ಇಟ್ಟುಕೊಂಡ ನಂತರ, ಉಪಹಾರಕ್ಕೆ ದೋಸೆ ಎಷ್ಟು ಬೇಕು ಅಷ್ಟು ಹಿಟ್ಟು ಮಾತ್ರ ಪಾತ್ರೆಯೊಂದಕ್ಕೆ ಹಾಕಿಕೊಂಡು ಉಪಯೋಗಿಬೇಕು.
ಫ್ರಿಡ್ಜ್ ಇಲ್ಲದಿದ್ದರೆ ಹೀಗೆ ಮಾಡಿ:ಚೆನ್ನಾಗಿ ರುಬ್ಬಿಕೊಂಡಿರುವ ದೋಸೆ ಹಿಟ್ಟನ್ನು ಫ್ರಿಡ್ಜ್‌ನಲ್ಲಿ ಇಟ್ಟು ದೀರ್ಘ ಕಾಲದವರೆಗೆ ಸ್ಟೋರ್ ಮಾಡಿಕೊಳ್ಳಬೇಕಾಗುತ್ತದೆ. ನಿಮ್ಮ ಮನೆಯಲ್ಲಿ ಫ್ರಿಡ್ಜ್ ಇಲ್ಲದಿದ್ದರೆ ಅಗಲವಾದ ಪಾತ್ರೆಯಲ್ಲಿ ನೀರು ಹಾಕಿಕೊಂಡು ಅದರದಲ್ಲಿ ದೋಸೆ ಹಿಟ್ಟಿನ ಪಾತ್ರೆ ಅರ್ಧದಷ್ಟು ಮುಳುಗುವಷ್ಟು ಇಡಬೇಕು. ಆಗ ಈ ಹಿಟ್ಟನ್ನು ಒಂದು ವಾರದವರೆಗೆ ಸಂಗ್ರಹಿಸಿ ಇಡಬಹುದು. ಕೆಳಗಿನ ಪಾತ್ರೆಯಲ್ಲಿರುವ ಈ ನೀರನ್ನು ದಿನಕ್ಕೆ ಎರಡು ಬಾರಿ ಬದಲಿಸಬೇಕಾಗುತ್ತದೆ.
ಹಿಟ್ಟನ್ನು ಗಾಳಿಯಾಡದಂತೆ ಮುಚ್ಚಿಡಿ:ನೀವು ಸಿದ್ಧಪಡಿಸಿದ ದೋಸೆ ಹಿಟ್ಟನ್ನು ಗಾಳಿಯಾಡದಂತೆ ಸರಿಯಾಗಿ ಮುಚ್ಚಿ ಇಡಬೇಕು. ಈ ಹಿಟ್ಟಿನ ಪಾತ್ರೆ ಯಾವಾಗಲೂ ಸರಿಯಾಗಿ ಮುಚ್ಚಿರುವಂತೆ ಗಮನಹರಿಸಬೇಕು. ಹಿಟ್ಟಿನ ಪಾತ್ರೆ ಗಾಳಿಗೆ ತೆರದಿಟ್ಟರೆ ಇದು ಬೇಗನೇ ಹುಳಿಯಾಗುತ್ತದೆ. ರುಬ್ಬಿಕೊಂಡಿರುವಂತಹ ದೋಸೆ ಹಿಟ್ಟಿನಲ್ಲಿ ಒಂದೆರಡು ಕರೀಬೇವಿನ ಎಲೆಗಳನ್ನು ಸೇರಿಸಿಕೊಂಡು ಸಂಗ್ರಿಹಿಸಿ ಇಟ್ಟರೆ ಉತ್ತಮ ಎಂದು ಅಡುಗೆ ತಜ್ಞರು ತಿಳಿಸುತ್ತಾರೆ.