ಆಗಾಗ ಚಹಾ ಮತ್ತು ಕಾಫಿ ಸೇವನೆ ಮಾಡುವುದರಿಂದ ಹೆಚ್ಚಿನ ಜನರಿಗೆ ಸಾಮಾನ್ಯವಾಗಿ ಆರೋಗ್ಯಕರವೆನಿಸಿದರೂ ಸಹ ಅನೇಕರು ಕಾಫಿ ಮತ್ತು ಟೀಗೆ ಅಡಿಕ್ಟ್ ಆಗಿರುತ್ತಾರೆ. ಆದರೆ, ದಿನಕ್ಕೆ 3-4ಕ್ಕಿಂತ ಹೆಚ್ಚು ಬಾರಿ ಕಾಫಿ ಅಥವಾ ಚಹಾ ಕುಡಿಯುವ ಅಭ್ಯಾಸ ನಿಮಗಿದ್ದರೆ ಅದರಿಂದಾಗುವ ಅಪಾಯಗಳ ಬಗ್ಗೆಯೂ ನೀವು ತಿಳಿದಿರುವುದು ಒಳ್ಳೆಯದು. ತಜ್ಞರ ಪ್ರಕಾರ, ಅತಿಯಾಗಿ ಕಾಫಿ, ಟೀ ಕುಡಿಯುವುದು ಅಡ್ಡ ಪರಿಣಾಮಗಳಿಗೆ ಕಾರಣವಾಗಬಹುದು. ಉದಾಹರಣೆಗೆ ಆತಂಕ, ನಿದ್ರೆಯ ಸಮಸ್ಯೆ ಮತ್ತು ತಲೆನೋವು ಉಂಟಾಗಬಹುದು
ಜಾತಿ ನಿಂದನೆ ಕೇಸ್ ದಾಖಲಾದ ಬೆನ್ನಲ್ಲೇ ತಮ್ಮ ಹೇಳಿಕೆಗೆ ವಿಷಾದ ವ್ಯಕ್ತಡಿಸಿದ ಬಿಜೆಪಿ MLC ರವಿಕುಮಾರ್!
ಕಾಫಿ ಮತ್ತು ಟೀ ಕುಡಿಯುವುದು ಒಂದು ಬಗೆಯ ಆಹಾರ ಪದ್ಧತಿ. ಆದರೆ ಕೆಲವರು ಆಗಾಗ ಕಾಫಿ/ಟೀ ಕುಡಿಯುವುದರ ಮೂಲಕ ತಮ್ಮ ಚೈತನ್ಯವನ್ನು ಹಾಗೂ ಮಾನಸಿಕ ಸ್ಥಿತಿಯನ್ನು ತಾಜಾಗೊಳಿಸುತ್ತಾರೆ.
ಕಾಫೀ ಮತ್ತು ಟೀ ಅದ್ಭುತವಾದ ಸ್ವಾದ ಹಾಗೂ ಚೈತನ್ಯ ನೀಡುವ ಪಾನೀಯಗಳು. ಆದರೆ ಇವುಗಳಲ್ಲಿ ಆಮ್ಲೀಯತೆಯನ್ನು/ ಆಸಿಡಿಟಿ ಹೆಚ್ಚಿಸುವ ಗುಣವಿದೆ. ಖಾಲಿ ಹೊಟ್ಟೆಯಲ್ಲಿ ಹಾಗೂ ಪದೇ ಪದೇ ಈ ಪಾನೀಯಗಳನ್ನು ಕುಡಿಯುವುದರಿಂದ ದೇಹದಲ್ಲಿ ಆಮ್ಲೀಯತೆಯ ಪ್ರಮಾಣ ಹೆಚ್ಚುವುದು.
ಜೊತೆಗೆ ಆರೋಗ್ಯದಲ್ಲಿ ಸಾಕಷ್ಟು ತೊಂದರೆಯನ್ನು ಅನುಭವಿಸಬೇಕಾಗುತ್ತದೆ. ಹಾಗಾಗಿ ಈ ಪಾನೀಯ ಕುಡಿಯುವುದಕ್ಕೂ ಮುಂಚೆ ಒಂದು ಗ್ಲಾಸ್ ನೀರನ್ನು ಕುಡಿಯಬೇಕು ಎಂದು ಹೇಳಲಾಗುವುದು. ಈ ಪಾನೀಯಗಳನ್ನು ಸೇವಿಸುವ ಮೊದಲು ಒಂದು ಲೋಟ ನೀರನ್ನು ಪೂರ್ವಭಾವಿಯಾಗಿ ಸೇವಿಸಿದರೆ ಯಾವೆಲ್ಲಾ ಅದ್ಭುತಗಳಾಗುತ್ತವೆ ಎನ್ನುವುದನ್ನು ಮುಂದಿನ ವಿರಣೆಯಲ್ಲಿ ಪರಿಶೀಲಿಸಿ.
ಕಾಫಿ ಮತ್ತು ಚಹಾದಲ್ಲಿ ಟ್ಯಾನಿನ್ ಎನ್ನುವ ರಾಸಾಯನಿಕ ಅಂಶ ಅಧಿಕವಾಗಿರುತ್ತದೆ. ಇದು ಹಲ್ಲಿನ ಬಣ್ಣವನ್ನು ಬದಲಿಸುವುದು. ಈ ಪಾನೀಯಗಳನ್ನು ಕುಡಿದಾಗ ಇದರಲ್ಲಿ ಇರುವ ರಾಸಾಯನಿಕ ಅಂಶವು ಹಲ್ಲುಗಳ ಮೇಲೆ ಪದರಗಳನ್ನು ಸೃಷ್ಟಿಸುತ್ತದೆ. ಜೊತೆಗೆ ಹಲ್ಲಿನ ಮೇಲೆ ಬಣ್ಣವನ್ನು ಉಂಟುಮಾಡುತ್ತದೆ.
ಕಾಫಿ ಮತ್ತು ಚಹಾ ಕುಡಿಯುವ ಮೊದಲು 15 ನಿಮಿಷ ಮುಂಚಿತವಾಗಿ ನೀರನ್ನು ಕುಡಿದರೆ ಹಲ್ಲುಗಳ ಮೇಲೆ ಸೃಷ್ಟಿಸುವ ಪದರ ಮತ್ತು ಬಣ್ಣ ಬದಲಾವಣೆಯನ್ನು ತಡೆಯಲು ಸಾಧ್ಯವಾಗುತ್ತದೆ.
ಬೆಳಿಗ್ಗೆ ಒಂದು ಕಪ್ ಬೆಡ್ ಟೀ ಅಥವಾ ಕಾಫಿ ಕುಡಿಯುವುದರಿಂದ ದೈಹಿಕವಾಗಿ ಹಾಗೂ ಮಾನಸಿಕವಾಗಿ ಹೆಚ್ಚು ಪುನಃಶ್ಚೇತನವನ್ನು ಪಡೆದುಕೊಳ್ಳಬಹುದು ಎಂದು ಬಹುತೇಕ ಮಂದಿ ಅಂದುಕೊಂಡಿರುತ್ತಾರೆ. ಆದರೆ ಇದು ತಪ್ಪು ಕಲ್ಪನೆ. ಖಾಲಿ ಹೊಟ್ಟೆಯಲ್ಲಿ ಕಾಫಿ/ ಚಹಾ ಸೇವಿಸುವುದರಿಂದ ದೇಹವು ಇನ್ನಷ್ಟು ನಿರ್ಜಲೀಕರಣಕ್ಕೆ ಒಳಗಾಗುವುದು.
ಪರಿಣಾಮದಿಂದಾಗಿ ವಿವಿಧ ಆರೋಗ್ಯ ಸಮಸ್ಯೆಯು ಹುಟ್ಟಿಕೊಳ್ಳುತ್ತದೆ. ಚಹಾ/ ಕಾಫಿ ಕುಡಿಯುವ ಮೊದಲು ಒಂದು ಲೋಟ ನೀರನ್ನು ಕುಡಿಯುವುದರಿಂದ ದೇಹದೊಳಗೆ ಪೋಷಕಾಂಶಗಳು ಹಾಗೇ ಇರುವಂತೆ ಹಿಡಿದಿಡುತ್ತದೆ.
ಕಾಫಿ ಮತ್ತು ಚಹಾ ಆಮ್ಲೀಯತೆಯನ್ನು ಹೆಚ್ಚಿಸುತ್ತವೆ. ಇವುಗಳನ್ನು ಕುಡಿಯುವ ಮೊದಲು ಒಂದು ಗ್ಲಾಸ್ ನೀರನ್ನು ಕುಡಿದರೆ ದೇಹದಲ್ಲಿ ಉಂಟಾಗುವ ಆಮ್ಲೀಯತೆಯನ್ನು ತಡೆಯುವುದು. ಆಮ್ಲೀಯತೆಯಿಂದ ಉಂಟಾಘುವ ಹಾನಿಯನ್ನು ಹಾಗೂ ಅನಾರೋಗ್ಯ ಸಮಸ್ಯೆಯನ್ನು ತಡೆಯಲು ಸಹಾಯ ಮಾಡುವುದು. ಜೊತಗೆ ಹೊಟ್ಟೆಯಲ್ಲಿ ಉಂಟಾಗುವ ಉರಿಯ ಸಂವೇದನೆಯನ್ನು ನಿಯಂತ್ರಣದಲ್ಲಿ ಇಡುತ್ತದೆ
ಕಾಫಿ ಮತ್ತು ಚಹಾ ಕುಡಿಯುವುದರಿಂದ ಆಮ್ಲೀಯತೆ ಉಂಟಾಗಿ ಹೊಟ್ಟೆ ಹುಣ್ಣು ಆಗುವ ಸಾಧ್ಯತೆಗಳು ಹೆಚ್ಚು. ವೈದ್ಯರ ಪ್ರಕಾರ ಅಧಿಕ ಕಾಫಿ ಮತ್ತು ಟೀ ಕುದಿಸಿ ಕುಡಿಯುವುದರಿಂದ ಆಮ್ಲೀಯತೆಯ ಮಟ್ಟವು ಹೆಚ್ಚುವುದು. ಇವು ಹೊಟ್ಟೆಯ ಒಳ ಪದರದಲ್ಲಿ ಹುಣ್ಣನ್ನು ಪ್ರಚೋದಿಸುತ್ತವೆ. ಪೂರ್ವದಲ್ಲಿ ನೀರನ್ನು ಕುಡಿದರೆ ಕಾಫಿ ಮತ್ತು ಚಹಾದ ಪರಿಣಾಮವನ್ನು ದುರ್ಬಲಗೊಳಿಸುವುದು. ಜೊತೆಗೆ ಹೊಟ್ಟೆ ಹುಣ್ಣು ಸೇರಿದಂತೆ ಇತರ ಆರೋಗ್ಯ ಸಮಸ್ಯೆಯನ್ನು ನಿಯಂತ್ರಣದಲ್ಲಿ ಇಡುವುದು.
ಖಾಲಿ ಹೊಟ್ಟೆಯಲ್ಲಿ ಚಹಾ ಮತ್ತು ಕಾಫಿ ಕುಡಿಯುವುದು ಆರೋಗ್ಯಕರವಾದ ಅಭ್ಯಾಸವಲ್ಲ. ಆದರೆ ಕೆಲವರು ಆಗಾಗ ಚಹಾ ಮತ್ತು ಕಾಫಿ ಕುಡಿಯುವುದರ ಮೂಲಕ ವ್ಯಸನಿಗಳಾಗಿ ಬಿಡುತ್ತಾರೆ. ಇದನ್ನು ಬಿಟ್ಟು ಬದುಕುವುದು ಅಂತಹವರಿಗೆ ಕಷ್ಟ ಸಾಧ್ಯದ ಮಾತಾಗುವುದು. ಹಾಗಾಗಿ ಇವುಗಳನ್ನು ಕುಡಿಯುವ ಮೊದಲು ಒಂದು ಲೋಟ ನೀರನ್ನು ಕುಡಿದರೆ ಉಂಟಾಗುವ ಕೆಟ್ಟ ಪರಿಣಾಮಗಳನ್ನು ಸುಲಭವಾಗಿ ತಡೆಯಬಹುದು.