ಬೆಂಗಳೂರು: ಕ್ರಿಕೆಟ್ ಪಂದ್ಯ ನೋಡುತ್ತಾ ಸಮೋಸಾ ತಿನ್ನಲು ಸಿದ್ದರಾಮಯ್ಯಗೆ ಸಮಯವಿದೆ, ನೀತಿ ಆಯೋಗದ ಸಭೆಯಲ್ಲಿ ಭಾಗಿಯಾಗಲು ಇಲ್ಲ ಎಂದು ವಿಪಕ್ಷ ನಾಯಕ ಆರ್ ಅಶೋಕ್ ಕಿಡಿಕಾರಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯನವರಿಗೆ ವಿಜಯನಗರದಲ್ಲಿ ಸಮಾವೇಶ ನಡೆಸಲು ಸಮಯವಿದೆ,
ರಾಜಸ್ತಾನದಲ್ಲಿ ಅಯೋಜಿಸಿದ ಕಾಂಗ್ರೆಸ್ ಸಭೆಯಲ್ಲಿ ಪಾಲ್ಗೊಳ್ಳಲು ಸಮಯವಿದೆ, ಐಪಿಎಲ್ ಮ್ಯಾಚ್ ನೋಡುತ್ತಾ ಪಾಪ್ಕಾರ್ನ್ ಮತ್ತು ಸಮೋಸಾ ತಿನ್ನಲು ಸಮಯವಿದೆ, ದೆಹಲಿಗೆ ಹೋಗಿ ಸೋನಿಯ ಮತ್ತು ರಾಹುಲ್ ಗಾಂಧಿಯವರನ್ನು ಭೇಟಿಯಾಗಲು 2-3 ದಿನ ಕಾಯುವಷ್ಟು ಸಮಯವಿದೆ, ಆದರೆ ಪ್ರಧಾನ ಮಂತ್ರಿಯವರು ಕರೆದ ನೀತಿ ಆಯೋಗದ ಸಬೆಯಲ್ಲಿ ಪಾಲ್ಗೊಳ್ಳಲು ಇವರಿಗೆ ಸಮಯವಿಲ್ಲ ಎಂದು ಗೇಲಿ ಮಾಡಿದ್ದಾರೆ.