ಕಿರುತೆರೆ ನಟ ಶ್ರೀಧರ್ ಕೊನೆಯುಸಿರೆಳೆದಿದ್ದಾರೆ. ಮ್ಯಾಕ್ಸ್ ಸಿನಿಮಾ, ಪಾರು ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ನಟಿಸಿರುವ ಅವರ ನಿನ್ನೆ ರಾತ್ರಿ ವಿಧಿವಶರಾಗಿದ್ದಾರೆ. ಅನಾರೋಗ್ಯ ಕಾರಣದಿಂದ ಅವರು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕಳೆದೊಂದು ತಿಂಗಳಿನಿಂದ ಚಿಕಿತ್ಸೆ ಪಡೆಯುತ್ತಿದ್ದರು. ಆದ್ರೆ ಚಿಕಿತ್ಸೆ ಫಲಿಸದೇ ಶ್ರೀಧರ್ ನಿಧನರಾಗಿದ್ದಾರೆ. ಶ್ರೀಧರ್ ನಿಧನರಾಗುತ್ತಿದ್ದಂತೆ ಅವರ ಪತ್ನಿ ಜ್ಯೋತಿ ಆಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಶ್ರೀಧರ್ ಹೇಳಿದ ಮಾತು ಕೇಳಿ ಬೇಸರ ಆಗಿದೆ. ಶ್ರೀಧರ್ ನಾನು ಪ್ರೀತಿಸಿ ಮದುವೆ ಆಗಿದ್ವಿ. ಮದುವೆ ಆಗಿ ಒಂದು ತಿಂಗಳ ನಂತರ ಶ್ರೀಧರ್ ರಿಸ್ಟ್ರಿಕ್ಷನ್ ಮಾಡೋಕೆ ಶುರು ಮಾಡಿದ. ನಮ್ ನಡುವೆ ಹಲವು ಸನ್ನಿವೇಶದಲ್ಲಿ ಜಗಳ ಆಗಿದೆ ಎಂದು ಮಾತನಾಡಿರುವ ಆಡಿಯೋ ವೈರಲ್ ಆಗಿದೆ.
ಶ್ರೀಧರ್ ಅವರ ಪತ್ನಿ ಎನ್ನಲಾದ ಆಡಿಯೋ?
ಮದುವೆಯಾದ ಎರಡೇ ವರ್ಷದಲ್ಲಿ ನನ್ನಿಂದ ದೂರವಾದರು. ಇಬ್ಬರು ಬಡತನದಿಂದ ಬಂದವರು , ಒಟ್ಟಿಗೆ ಆದರ್ಶ ಫಿಲಂ ಸಂಸ್ಥೆಯಲ್ಲಿ ಪರಿಚಯವಾಗಿ ಮದುವೆಯಾಗಿದ್ದೆವು. ಮದುವೆಯಾದ ನಂತರ ಶ್ರೀಧರ್ ಸಣ್ಣ ಪುಟ್ಟ ವಿಚಾರಕ್ಕೆ ಗಲಾಟೆ ತೆಗೀತಿದ್ದ. ಶ್ರೀಧರ್ ಗೆ ಹುಡುಗಿಯರ ಸಹವಾಸ ಇತ್ತು. ಶ್ರೀಧರ್ HIV induces Informa ಕಾಯಿಲೆಯಿಂದ ಬಳಲುತ್ತಿದ್ದರೂ, ಮತ್ತು ಕ್ಯಾನ್ಸರ್ ಕೂಡ ಇತ್ತು. ನನಗೆ ಬೇರೆ ಅವರ ಜೊತೆ ಸಂಬಂಧ ಇದೆ ಅಂತ ಶ್ರೀಧರ್ ನನ್ನಿಂದ ದೂರವಾಗಿದ್ದ. ಆದರೆ ನಾನು ಈಗಲೂ ಒಂಟಿಯಾಗಿಯೇ ನನ್ನ ಜೀವನವನ್ನ ನಡೆಸುತ್ತಿದ್ದೇನೆ. ನನಗೆ ನನ್ನ ಮತ್ತು ಮಗನ ಜೀವನ ಮುಖ್ಯ ಎಂದು ಹೇಳಿರುವ ಆಡಿಯೋ ವೈರಲ್ ಆಗಿದೆ.
“ನಾನು ಮೂವತ್ತು ವರ್ಷದಿಂದ ಒಬ್ಬನೇ ಇರೋದು. ಮದುವೆ ಆಗಿ ಹನ್ನೊಂದು ವರ್ಷ ಆಗಿತ್ತು. ಅವಳು ಇಂಡಿಪೆಂಡೆಂಟ್ ಲೈಫ್ ಬೇಕು ಅಂತೇಳಿ, ಮಗನಿಗೆ ಐದು ವರ್ಷ ಆಗುವುದನ್ನೇ ಕಾದು, ನಾನು ಹೀಗೊಂದು ದಿನ ಬೆಳಗ್ಗೆಯೇ ಶೂಟ್‌ಗೆ ಹೋಗಿದ್ದೆ. ನನ್ನ ದುಡ್ಡು ಮತ್ತು ಜಾಗವನ್ನೆಲ್ಲಾ ತೆಗೆದುಕೊಂಡು ನನ್ನ ಹೆಸರಿಗೆ ಮಾಡಿಸುತ್ತೀನಿ ಅಂತೇಳಿ ಅವರ ಅಪ್ಪನ ಹೆಸರಿಗೆ ಮಾಡಿಸಿ, ಪಕ್ಕಾ ಪ್ಲ್ಯಾನ್ ಮಾಡಿಕೊಂಡು, ನಾನು ಶೂಟಿಂಗ್ ಹೋಗಿದ್ದ ಸಮಯದಲ್ಲಿ ಗ್ಯಾಸ್ ಸ್ಟವ್ ಕೂಡ ಬಿಡದೇ ಮಗನನ್ನು ಕರೆದುಕೊಂಡು ಎಲ್ಲವನ್ನು ಎತ್ತುಕೊಂಡು ಹೋಗಿಬಿಟ್ಟಿದ್ದಳು. “ನನ್ನ ಲೈಫ್‌ನಲ್ಲಿ ಆ ತರಹದ ಹೆಂಗಸನ್ನು ನಾನು ನೋಡಿಯೇ ಇಲ್ಲ. ಹನ್ನೊಂದು ವರ್ಷ ನನಗೆ ಊಟ ಹಾಕಲಿಲ್ಲ. ತುಂಬಾ ಕಷ್ಟ ಪಟ್ಟೆ, ಯಾರ ಹತ್ತಿರ ಹೇಳಲಿ ನಾನು? ಚೆನ್ನಾಗಿತ್ತು ಲೈಫ್ ಐದು ನಿಮಿಷವೂ ನಾನು ವೇಸ್ಟ್ ಮಾಡುತ್ತಿರಲಿಲ್ಲ. ಈಗ ಈ ಪರಿಸ್ಥಿತಿ ಬಂದಿದೆ” ಎಂದು ನಟ ಶ್ರೀಧರ್ ಅವರು ಮಾತನಾಡಿರುವ ವಿಡಿಯೋ ಒಂದು ವೈರಲ್ ಆಗಿತ್ತು.
ಶ್ರೀಧರ್ ‘ಪಾರು’, ‘ವಧು’, ‘ಮಂಗಳ ಗೌರಿ’, ‘ಮನೆಯೇ ಮಂತ್ರಾಲಯ’ ಸೇರಿದಂತೆ 40ಕ್ಕೂ ಹೆಚ್ಚು ಸೀರಿಯಲ್‌ಗಳಲ್ಲಿ ನಟಿಸಿದ್ದಾರೆ. ಕಿಚ್ಚ ಸುದೀಪ್ ನಟನೆಯ ‘ಮ್ಯಾಕ್ಸ್’ ಚಿತ್ರದಲ್ಲೂ ಅವರು ಅವಕಾಶ ಪಡೆದಿದ್ದರು. ಈ ಚಿತ್ರ ಸೂಪರ್ ಹಿಟ್ ಆಯಿತು. ಅವರು ಕೆಲವು ತಮಿಳು ಸಿನಿಮಾಗಳನ್ನು ಕೂಡ ಮಾಡಿದ್ದರು. ಅನಾರೋಗ್ಯದಿಂದ ಹಾಸಿಗೆ ಹಿಡಿದ್ದ ಅವರು ಸಹಾಯಕ್ಕಾಗಿ ಸಹಾಯ ಹಸ್ತ ಚಾಚಿದ್ದರು. ಸಾಕಷ್ಟು ತಾರೆಯರು ಅವರಿಗೆ ಸಹಾಯ ಮಾಡಿದ್ದರು.