ದುಡಿಯುವ ಜನರು ರಜಾದಿನಗಳ ಬಗ್ಗೆ ಹೆಚ್ಚು ಗಮನವಿಟ್ಟುಕ್ಕೊಳ್ಳುತ್ತಾರೆ. ಇದಕ್ಕಾಗಿಯೇ ಹೊಸ ಕ್ಯಾಲೆಂಡರ್ ಬಂದಾಗ ಮೊದಲು ಪರಿಶೀಲಿಸುವುದು ರಜಾದಿನಗಳ ಪಟ್ಟಿಯನ್ನು. ರಿಸರ್ವ್ ಬ್ಯಾಂಕ್ ಕ್ಯಾಲೆಂಡರ್ ಪ್ರಕಾರ ಬ್ಯಾಂಕ್ ರಜಾದಿನಗಳನ್ನು ನಿರ್ಧರಿಸಲಾಗುತ್ತದೆ. ಬ್ಯಾಂಕ್ ರಜಾದಿನಗಳು ಎಲ್ಲರ ಮೇಲೂ ಪರಿಣಾಮ ಬೀರುತ್ತವೆ.
ರೋಡ್ರೇಜ್ ಪ್ರಕರಣ: ಕಬ್ಬನ್ ಪಾರ್ಕ್ ವಾಕರ್ಸ್ ಅಸೋಸಿಯೇಷನ್ ಅಧ್ಯಕ್ಷನ ಮೇಲೆ ಹಲ್ಲೆ!
ಒಂದೆಡೆ, ರಜೆ ಇದ್ದಾಗ ಬ್ಯಾಂಕ್ ಉದ್ಯೋಗಿಗಳು ನಿರಾಳರಾದರೆ, ಮತ್ತೊಂದೆಡೆ ಬ್ಯಾಂಕಿಗೆ ಸಂಬಂಧಿಸಿದ ಜನರ ಎಲ್ಲಾ ಕೆಲಸಗಳು ಹಾಗೆಯೇ ಬಾಕಿ ಉಳಿಯುತ್ತದೆ. ಇನ್ನು ಕೆಲವೇ ದಿನಗಳಲ್ಲಿ ಹೊಸ ತಿಂಗಳು, ಅಂದರೆ ಜೂನ್ ತಿಂಗಳು ಪ್ರಾರಂಭವಾಗಲಿದೆ. ಜೂನ್ ತಿಂಗಳಲ್ಲಿ ಬ್ಯಾಂಕುಗಳು 12 ದಿನಗಳ ಕಾಲ ಮುಚ್ಚಲ್ಪಡುತ್ತವೆ
2025ರ ಜೂನ್ ತಿಂಗಳಲ್ಲಿ ಬ್ಯಾಂಕ್ ರಜಾದಿನಗಳು
ಜೂನ್ 1: ಭಾನುವಾರದ ರಜೆ
ಜೂನ್ 6, ಶುಕ್ರವಾರ: ಈದ್ ಉಲ್ ಅಧಾ – ಬಕ್ರೀದ್ (ಕೇರಳದಲ್ಲಿ ರಜೆ)
ಜೂನ್ 7, ಶನಿವಾರ: ಬಕ್ರೀದ್ (ಹೆಚ್ಚಿನ ರಾಜ್ಯಗಳಲ್ಲಿ ರಜೆ)
ಜೂನ್ 8: ಭಾನುವಾರ
ಜೂನ್ 11, ಬುಧವಾರ: ಸಂತ ಗುರು ಕಬೀರ್ ಜಯಂತಿ ಮತ್ತು ಸಾಗಾ ದವಾ ಹಬ್ಬ (ಸಿಕ್ಕಿಂ ಮತ್ತು ಮೇಘಾಲಯದಲ್ಲಿ ರಜೆ)
ಜೂನ್ 12, ಗುರುವಾರ: ಗುರು ಹರಗೋಬಿಂದ್ಜಿ ಜಯಂತಿ (ಜಮ್ಮು ಮತ್ತು ಕಾಶ್ಮೀರದಲ್ಲಿ ರಜೆ)
ಜೂನ್ 14: ಎರಡನೇ ಶನಿವಾರ
ಜೂನ್ 15: ಭಾನುವಾರ
ಜೂನ್ 22: ಭಾನುವಾರ
ಜೂನ್ 27, ಶುಕ್ರವಾರ: ರಥಯಾತ್ರಾ ಮತ್ತು ಕಾಂಗ್ ಹಬ್ಬ (ಒಡಿಶಾ, ಮಣಿಪುರದಲ್ಲಿ ರಜೆ)
ಜೂನ್ 28: ನಾಲ್ಕನೇ ಶನಿವಾರ
ಜೂನ್ 29: ಭಾನುವಾರ
ಜೂನ್ 30, ಸೋಮವಾರ: ರೆಮ್ನಾ ನೀ ಅಥವಾ ಶಾಂತಿ ದಿನಾಚರಣೆ (ಮಿಝೋರಾಂನಲ್ಲಿ ರಜೆ)
ಕರ್ನಾಟಕದಲ್ಲಿ ಜೂನ್ನಲ್ಲಿ ಬ್ಯಾಂಕ್ ರಜೆಗಳ ಪಟ್ಟಿ
ಜೂನ್ 1: ಭಾನುವಾರ
ಜೂನ್ 7, ಶನಿವಾರ: ಬಕ್ರೀದ್
ಜೂನ್ 8: ಭಾನುವಾರ
ಜೂನ್ 14: ಎರಡನೇ ಶನಿವಾರ
ಜೂನ್ 15: ಭಾನುವಾರ
ಜೂನ್ 22: ಭಾನುವಾರ
ಜೂನ್ 28: ನಾಲ್ಕನೇ ಶನಿವಾರ
ಜೂನ್ 29: ಭಾನುವಾರ
ಬ್ಯಾಂಕುಗಳು ಬಂದ್ ಆಗಿದ್ದರೂ ಹೆಚ್ಚಿನ ಬ್ಯಾಂಕಿಂಗ್ ಚಟುವಟಿಕೆಗಳಿಗೆ ಅಡ್ಡಿ ಇರುವುದಿಲ್ಲ. ಕ್ಯಾಷ್ ಪಡೆಯಲು ಎಟಿಎಂಗಳು ಸದಾ ತೆರೆದಿರುತ್ತವೆ. ಆನ್ಲೈನ್ ಮತ್ತು ಡಿಜಿಟಲ್ ಪ್ಲಾಟ್ಫಾರ್ಮ್ಗಳು ಸದಾ ಇರುತ್ತವೆ. ಹಣ ವರ್ಗಾವಣೆಗೆ ಯಾವ ಸಮಸ್ಯೆಯೂ ಇರುವುದಿಲ್ಲ. ಬ್ಯಾಂಕ್ ಕಚೇರಿಗೆ ಹೋಗಿಯೇ ಮಾತ್ರ ಮಾಡಬಹುದಾದ ಕೆಲಸಗಳಿಗೆ ರಜಾ ದಿನ ಅಡಚಣೆ ಆಗಬಹುದು. ಅಂಥವರು ಮುಂಚಿತವಾಗಿ ರಜಾ ದಿನಗಳನ್ನು ಗುರುತಿಟ್ಟುಕೊಂಡರೆ ಪ್ಲಾನ್ ಮಾಡಬಹುದು