Close Menu
Ain Live News
    Facebook X (Twitter) Instagram YouTube
    Monday, June 2
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ರಾಜಕೀಯ
    • ಜಿಲ್ಲೆ
    • ಸಿನಿಮಾ
    • ಲೈಫ್ ಸ್ಟೈಲ್
    • ಜ್ಯೋತಿಷ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    Facebook X (Twitter) Instagram YouTube
    Ain Live News

    ಥಿಯೇಟರ್‌ಗಳಿಗೆ ಬೆಂಕಿ ಹಚ್ಚಬೇಕಾಗುತ್ತದೆ ಹುಷಾರ್: ನಾರಾಯಣಗೌಡ ಎಚ್ಚರಿಕೆ!

    By AIN AuthorMay 31, 2025
    Share
    Facebook Twitter LinkedIn Pinterest Email
    Demo

    ,,

    ಬೆಂಗಳೂರು:- ತಮಿಳಿನಿಂದ ಕನ್ನಡ ಹುಟ್ಟಿದ್ದು ಎಂಬ ಕಮಲ್ ಹಾಸನ್ ಹೇಳಿಕೆಗೆ ಎಲ್ಲೆಡೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಅಲ್ಲದೇ ಕನ್ನಡಪರ ಹೋರಾಟಗಾರರು ಸೇರಿ ಹಲವರು ಅವರ ಹೇಳಿಕೆ ಖಂಡಿಸಿದ್ದಾರೆ.

    ಈ ರಾಶಿಯವರಿಗೆ ಎಲ್ಲಾ ಇದ್ದು ಏನೂ ಕೈಗೂಡುತ್ತಿಲ್ಲ: ಶನಿವಾರದ ರಾಶಿ ಭವಿಷ್ಯ 31 ಮೇ 2025! 

    ಇದೇ ವಿಚಾರವಾಗಿ ಮಾತನಾಡಿದ ನಾರಾಯಣಗೌಡ, ಒಂದು ವೇಳೆ ಕಮಲ್ ಹಾಸನ್ ಸಿನಿಮಾ ರಿಲೀಸ್ ಆದ್ರೆ ಥಿಯೇಟರ್‌ಗಳಿಗೆ ಬೆಂಕಿ ಹಚ್ಚೋದು ಗ್ಯಾರಂಟಿ. ನಟ ಕಮಲ್ ಹಾಸನ್ ಚಿತ್ರ ಬಿಡುಗಡೆ ಮಾಡಿದರೆ ಥಿಯೇಟರ್‌ಗಳಿಗೆ ಬೆಂಕಿ ಹಚ್ಚುತ್ತೇವೆ. ಆಗಾಗ ಕನ್ನಡಿಗರ ವಿಚಾರದಲ್ಲಿ ಮಾತು ಜಾಸ್ತಿ ಆಗಿದೆ. ಹೊರಗಿಂದ ಬಂದವರು ಕರ್ನಾಟಕ, ಕನ್ನಡದವರ ವಿರುದ್ಧ ಮಾತು ಆಡುತ್ತಿದ್ದಾರೆ. ತಮಿಳುನಾಡು ಆಗಾಗ ಕಾವೇರಿ ವಿಚಾರದಲ್ಲಿ ಸಂಘರ್ಷ ನಡೆಸುತ್ತಿತ್ತು. ಸಂಘರ್ಷಕ್ಕೆ ನಾಂದಿ ಹಾಡುವ ನಿಟ್ಟಿನಲ್ಲಿ ದ್ರಾವಿಡ ರಾಜ್ಯದ ಪ್ರಮುಖ ಸಾಹಿತ್ಯ ಜೊತೆ ಮಾತನಾಡಿದ್ದೆ. ಆದರೆ ಇದೇ ಸಂದರ್ಭದಲ್ಲಿ ಕಮಲ್ ಹಾಸನ್ ಈ ರೀತಿ ಹೇಳಿದ್ದಾರೆ. ನಟನ ಬಗ್ಗೆ ಅಭಿಮಾನ ಇತ್ತು. ಆದರೆ ಮೊನ್ನೆ ಆಡಿದ ಮಾತು ಕನ್ನಡಿಗರನ್ನ ಕೆರಳಿಸುವ, ಕನ್ನಡಿಗರನ್ನ ಒಗ್ಗೂಡಿಸುವ, ಪ್ರತಿಭಟಿಸುವ ಸಂದರ್ಭಕ್ಕೆ ಬಂದಿದ್ದಾರೆ. ಯಾವ ಆಧಾರದಲ್ಲಿ ಹೇಳಿಕೆ ಕೊಟ್ಟಿದ್ದಾರೋ ಗೊತ್ತಿಲ್ಲ. ಏಕಾಏಕಿ ತಮಿಳುಗರನ್ನ ಓಲೈಸುವ ನಿಟ್ಟಿನಲ್ಲಿ ದುರಹಂಕಾರ, ದುರಾಭಿಮಾನದ ಹೇಳಿಕೆ ಕೊಟ್ಟಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

    ತಮಿಳಿನ ಬಗ್ಗೆ ಅವರು ಏನು ಬೇಕಾದರೂ ಹೇಳಲಿ. ಇನ್ನೊಂದು ಭಾಷೆ ಬಗ್ಗೆ ಮಾತನಾಡುವಾಗ ಕನಿಷ್ಠ ಅರಿವು ಇರಬೇಕಿತ್ತು. ಅದೇ ಸಂದರ್ಭದಲ್ಲಿ ಕನ್ನಡಿಗರನ್ನ ಒಗ್ಗೂಡಿಸುವ ನಿಟ್ಟಿನಲ್ಲಿ ಹೋರಾಟ ಮಾಡಿದವರ ಸುಪುತ್ರ ಶಿವರಾಜ್ ಕುಮಾರ್ ಇದ್ದರು. ಅವರು ಅಲ್ಲಿಯೇ ಹೇಳಬಹುದಾಗಿತ್ತು. ಕನ್ನಡಕ್ಕೆ ತನ್ನದೇ ಸ್ವಂತಿಕೆ ಇದೆ ಅಂತ ಹೇಳಬಹುದಾಗಿತ್ತು. ವಿಶ್ವದ ಲಿಪಿ ರಾಣಿ ಅಂತ ಕರೆದಿರೋದು ಕನ್ನಡ ಅಂತ ಹೇಳಬಹುದಾಗಿತ್ತು. ಆ ಸಂದರ್ಭದಲ್ಲಿ ಅವರಿಗೆ ಮಾಹಿತಿ ಇಲ್ಲದೆ ಇದ್ದಿರಬಹುದು. ಆದರೆ ಇವತ್ತಿಗೂ ಶಿವರಾಜ್ ಕುಮಾರ್ ಕಮಲ್ ಹಾಸನ್‌ರನ್ನ ವಹಿಸಿಕೊಳ್ಳುತ್ತಿರೋದನ್ನ ಸಹಿಕೊಳ್ಳೋಕೆ ಆಗಲ್ಲ. ಶಿವರಾಜ್ ಕುಮಾರ್ ಆಗಿದ್ದರೆ ದೊಡ್ಡ ವಿಷಯ ಯಾವುದು? ಏಳೂವರೆ ಕೋಟಿ ಕನ್ನಡಿಗರ ಭಾವನೆ ದೊಡ್ಡದು ಅನ್ನಿಸಲಿಲ್ಲವಾ? ಅಥವಾ ಇದನ್ನ ನೇರವಾಗಿ ಹೇಳುವ ಧೈರ್ಯ ಇಲ್ಲವಾ ಎಂದು ಶಿವರಾಜ್‌ಕುಮಾರ್ ನಡೆಗೂ ಅಸಮಾಧಾನ ವ್ಯಕ್ತಪಡಿಸಿದರು.

    Demo
    Share. Facebook Twitter LinkedIn Email WhatsApp

    Related Posts

    ಕನ್ನಡ ನಾಡಿನಲ್ಲಿ ತಮಿಳು ಸಿನಿಮಾಗಳು ನೂರಕ್ಕಿಂತ ಹೆಚ್ಚು ದಿನ ಓಡುತ್ತವೆ: ಶಿವರಾಮೇಗೌಡ

    June 2, 2025

    RCB ಗೆಲ್ಲಲಿ ಎಂದು ತಾಯಿ ಚಾಮುಂಡೇಶ್ವರಿಯಲ್ಲಿ ವಿಶೇಷ ಪ್ರಾರ್ಥನೆ ಮಾಡುತ್ತೇನೆ: ಲಕ್ಷ್ಮಿ ಹೆಬ್ಬಾಳ್ಕರ್

    June 2, 2025

    ಗುಡ್ ನ್ಯೂಸ್: LPG ಗ್ಯಾಸ್ ಬೆಲೆ ಇಳಿಕೆ..! ಯಾವ ನಗರಗಳಲ್ಲಿ ಎಷ್ಟು.? ಇಲ್ಲಿದೆ ಮಾಹಿತಿ

    June 2, 2025

    ಸೀತಾರಾಮ ಸೀರಿಯಲ್‌ ಮುಕ್ತಾಯಗೊಳ್ಳುತ್ತಿದ್ದಂತೆ ಗುಡ್‌ ನ್ಯೂಸ್‌ ಕೊಟ್ಟ ನಟಿ ವೈಷ್ಣವಿ ಗೌಡ!

    June 2, 2025

    ಫ್ರೀ.. ಫ್ರೀ.. ಫ್ರೀ.. RCB ಕಪ್ ಗೆದ್ದರೆ ಮಸಾಲಪುರಿ, ಪಾನಿಪುರಿ, ಭೇಲ್ ಪುರಿ ಉಚಿತ..!

    June 2, 2025

    ʼಥಗ್‌ ಲೈಫ್‌ʼ ಬಿಡುಗಡೆಗೆ ಸಂಕಷ್ಟ: ಕಾನೂನು ಮೊರೆ ಹೋದ ಕಮಲ್ ಹಾಸನ್!

    June 2, 2025

    ಅಯ್ಯೋ ವಿಧಿಯೇ? ಸ್ಕ್ರೀಪ್ಟ್‌ ಹೇಳಿ ಬರುವಾಗ ಎದೆ ನೋವಿನಿಂದ ಖ್ಯಾತ ನಿರ್ದೇಶಕ ಸಾವು!

    June 2, 2025

    ವಿರಾಟ್ ಕೊಹ್ಲಿ-ಶ್ರೇಯರ್ ಅಯ್ಯರ್‌ನ್ನು ಶ್ಲಾಘಿಸಿದ ಬಾಹುಬಲಿ ನಿರ್ದೇಶಕ…ಯಾರಿಗೆ ʼಕಪ್ʼ ರಾಜಮೌಳಿ ಹೇಳಿದ್ದೇನು?

    June 2, 2025

    Cardamom: ನಿಮ್ಮ ಮನೆಯ ಬಾಲ್ಕನಿಯಲ್ಲಿ “ಮಸಾಲೆಗಳ ರಾಣಿ” ಬೆಳೆಯಬಹುದು..! ಹೇಗೆ ಗೊತ್ತಾ..?

    June 2, 2025

    ಕನ್ನಡ ವಿರೋಧಿ ಕಮಲ್ ಹಾಸನ್‌ಗೆ ಕನ್ನಡ ಪುಸ್ತಕ ಕೊಟ್ಟ ʼಕನ್ನಡತಿʼ! Video ವೈರಲ್!

    June 2, 2025

    ಆಭರಣ ಪ್ರಿಯರಿಗೆ ಬಿಗ್ ಶಾಕ್: ಇಂದು ಮತ್ತೆ ಭಾರಿ ಏರಿಕೆಯಾದ ಬಂಗಾರದ ಬೆಲೆ: ಎಷ್ಟಿದೆ ನೋಡಿ ಇಂದಿನ ದರ

    June 2, 2025

    ಬೆಳಗಾವಿಯಲ್ಲಿ ಗ್ಯಾಂಗ್ ರೇಪ್ ಪ್ರಕರಣ: ಸಚಿವ ಪರಮೇಶ್ವರ್ ಹೇಳಿದ್ದೇನು..?

    June 2, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.