Close Menu
Ain Live News
    Facebook X (Twitter) Instagram YouTube
    Thursday, June 5
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ರಾಜಕೀಯ
    • ಜಿಲ್ಲೆ
    • ಸಿನಿಮಾ
    • ಲೈಫ್ ಸ್ಟೈಲ್
    • ಜ್ಯೋತಿಷ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    Facebook X (Twitter) Instagram YouTube
    Ain Live News

    IPL 2025: ಫೈನಲ್ ತಲುಪಿರುವ ಆರ್ ಸಿಬಿಗೆ ಮುಂಬೈನದ್ದೇ ಟೆನ್ಷನ್..!

    By AIN AuthorJune 1, 2025
    Share
    Facebook Twitter LinkedIn Pinterest Email
    Demo

    2025ರ ಐಪಿಎಲ್ ಆವೃತ್ತಿಯಲ್ಲಿ ಅಮೋಘ ಪ್ರದರ್ಶನ ನೀಡಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಕ್ವಾಲಿಫೈಯರ್ 1 ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ 8 ವಿಕೆಟ್‌ಗಳ ಅಮೋಘ ಗೆಲುವು ಸಾಧಿಸುವ ಮೂಲಕ 9 ವರ್ಷಗಳ ನಂತರ ಫೈನಲ್‌ಗೆ ಲಗ್ಗೆಯಿಟ್ಟಿದೆ. ಬ್ಯಾಟಿಂಗ್, ಬೌಲಿಂಗ್ ಎಲ್ಲಾ ವಿಭಾಗದಲ್ಲೂ ಅಮೋಘ ಪ್ರದರ್ಶನ ನೀಡಿರುವ ಆರ್ ಸಿಬಿ ಈ ಬಾರಿ ಕಪ್ ಗೆಲ್ಲುವ ನೆಚ್ಚಿನ ತಂಡವಾಗಿದೆ.

    ಭೂಕುಸಿತ: ಅರುಣಾಚಲ ಪ್ರದೇಶದಲ್ಲಿ ಕೊಚ್ಚಿ ಹೋದ ವಾಹನ – 7 ಮಂದಿ ಸಾವು!

    2025ರ ಐಪಿಎಲ್ ನಲ್ಲಿ ಆರ್‌ಸಿಬಿಗೆ ಮೊದಲ ಬಾರಿಗೆ ಪ್ರಶಸ್ತಿ ಗೆಲ್ಲುವ ಅವಕಾಶವಿದೆ. ಅಲ್ಲದೆ ಇದುವರೆಗೆ ನಡೆದಿರುವ ಐಪಿಎಲ್ ಇತಿಹಾಸ ಹಾಗೂ ಅಂಕಿಅಂಶಗಳೆಲ್ಲ ಆರ್​ಸಿಬಿ ಪರವಾಗಿವೆ. ಏಕೆಂದರೆ ಐಪಿಎಲ್‌ನಲ್ಲಿ ಕ್ವಾಲಿಫೈಯರ್ -1 ಗೆದ್ದ ತಂಡವೇ ಅಧಿಕ ಬಾರಿ ಪ್ರಶಸ್ತಿ ಗೆದ್ದಿದೆ.

    ಐಪಿಎಲ್ ಆರಂಭದಲ್ಲಿ, ಅಂದರೆ 2008 ರಿಂದ 2010 ರವರೆಗೆ, ಲೀಗ್‌ನ ನಾಕೌಟ್ ಪಂದ್ಯಗಳನ್ನು ಸೆಮಿಫೈನಲ್ ಸ್ವರೂಪದಲ್ಲಿ ಆಡಲಾಗುತ್ತಿತ್ತು. ಆದಾಗ್ಯೂ, 2011 ರಿಂದ ಅದರ ನಿಯಮಗಳನ್ನು ಬದಲಾಯಿಸಿ ಪ್ಲೇಆಫ್‌ಗಳನ್ನು ಪರಿಚಯಿಸಲಾಯಿತು. ಕ್ವಾಲಿಫೈಯರ್-1, ಕ್ವಾಲಿಫೈಯರ್-2 ಮತ್ತು ಎಲಿಮಿನೇಟರ್ ಪಂದ್ಯಗಳನ್ನು ಜಾರಿಗೆ ತರಲಾಯಿತು. ಅಂದಿನಿಂದ 2024 ರವರೆಗೆ, ಒಟ್ಟು 14 ಸೀಸನ್‌ಗಳು ನಡೆದಿವೆ. ಈ ಪೈಕಿ 11 ಬಾರಿ ಕ್ವಾಲಿಫೈಯರ್ -1 ಗೆದ್ದ ತಂಡವೇ ಫೈನಲ್ ಗೆದ್ದಿದೆ

    ಇತ್ತ ಕ್ವಾಲಿಫೈಯರ್-1 ಗೆದ್ದ ತಂಡವು ಪ್ರಶಸ್ತಿಯನ್ನು ವಶಪಡಿಸಿಕೊಳ್ಳಲು ವಿಫಲವಾದದ್ದು ಕೇವಲ ಮೂರು ಬಾರಿ ಮಾತ್ರ. ಈ ಅಂಕಿ ಅಂಶ ಕೂಡ ಆರ್‌ಸಿಬಿಗೆ ಕೊಂಚ ತಲೆನೋವು ತಂದಿದೆ. ಇದಕ್ಕೆ ಪೂರಕವಾಗಿ ಇದು ಆರ್‌ಸಿಬಿಗೆ ನಾಲ್ಕನೇ ಫೈನಲ್. ಇದಕ್ಕೂ ಮೊದಲು, ತಂಡವು 2009, 2011 ಮತ್ತು 2016 ರಲ್ಲಿ ಫೈನಲ್ ತಲುಪಿತ್ತು. 2016 ರಲ್ಲಿ, ಆರ್‌ಸಿಬಿ ಕ್ವಾಲಿಫೈಯರ್ -1 ಗೆದ್ದ ನಂತರ ಫೈನಲ್ ತಲುಪಿತು, ಆದರೆ ಫೈನಲ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಸೋಲನುಭವಿಸಿತ್ತು.

    ಇದು ಮಾತ್ರವಲ್ಲದೆ 2013, 2016 ಮತ್ತು 2017 ರಲ್ಲಿ, ಕ್ವಾಲಿಫೈಯರ್ -1 ಗೆದ್ದ ತಂಡ ಫೈನಲ್‌ನಲ್ಲಿ ಸೋತಿತ್ತು. ಇತ್ತ ಕ್ವಾಲಿಫೈಯರ್ 2 ಗೆದ್ದ ತಂಡ ಮೂರು ಬಾರಿ ಪ್ರಶಸ್ತಿ ಗೆದ್ದಿದೆ. 2013 ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಕ್ವಾಲಿಫೈಯರ್-1 ರಲ್ಲಿ ಮುಂಬೈ ತಂಡವನ್ನು ಸೋಲಿಸುವ ಮೂಲಕ ಫೈನಲ್‌ಗೆ ತಲುಪಿತು. ಆದಾಗ್ಯೂ, ಆ ನಂತರ ಮುಂಬೈ ಕ್ವಾಲಿಫೈಯರ್ -2 ಗೆದ್ದು ಫೈನಲ್ ತಲುಪಿ, ಸಿಎಸ್​ಕೆ ತಂಡವನ್ನು ಸೋಲಿಸುವ ಮೂಲಕ ಚಾಂಪಿಯನ್ ಆಯಿತು. 2017 ರಲ್ಲಿಯೂ ರೈಸಿಂಗ್ ಪುಣೆ ಸೂಪರ್‌ಜೈಂಟ್ಸ್ ತಂಡವು ಕ್ವಾಲಿಫೈಯರ್ -1 ರಲ್ಲಿ ಮುಂಬೈ ತಂಡವನ್ನು ಸೋಲಿಸಿತ್ತು. ಆದಾಗ್ಯೂ, ಮುಂಬೈ ತಂಡವು ಕ್ವಾಲಿಫೈಯರ್-2 ಗೆದ್ದುಕೊಂಡಿದಲ್ಲದೆ, ಫೈನಲ್‌ನಲ್ಲಿ ರೈಸಿಂಗ್ ಪುಣೆ ಸೂಪರ್‌ಜೈಂಟ್ಸ್ ತಂಡವನ್ನು ಒಂದು ರನ್‌ನಿಂದ ಸೋಲಿಸಿ ಪ್ರಶಸ್ತಿಯನ್ನು ಗೆದ್ದುಕೊಂಡಿತು.

    ಹೀಗಾಗಿ ಮುಂಬೈ ತಂಡಕ್ಕೆ ಮತ್ತೊಮ್ಮೆ ಇತಿಹಾಸವನ್ನು ಪುನರಾವರ್ತಿಸುವ ಅವಕಾಶವಿದೆ. ಅಲ್ಲದೆ ಕ್ವಾಲಿಫೈಯರ್ 1 ರಲ್ಲಿ ಆರ್‌ಸಿಬಿ ವಿರುದ್ಧದ ಸೋಲಿಗೆ ಸೇಡು ತೀರಿಸಿಕೊಳ್ಳಲು ಪಂಜಾಬ್‌ಗೆ ಮತ್ತೊಂದು ಅವಕಾಶವಿದೆ. ಏಕಂದರೆ 2013 ಮತ್ತು 2017 ರಲ್ಲಿ, ಕ್ವಾಲಿಫೈಯರ್ -1 (ಮುಂಬೈ) ನಲ್ಲಿ ಸೋತ ತಂಡವು ಪ್ರಶಸ್ತಿಯನ್ನು ಗೆದ್ದುಕೊಂಡಿದೆ. ಇತ್ತ 2018 ರಿಂದ 2024 ರವರೆಗೆ ಕ್ವಾಲಿಫೈಯರ್ -1 ಗೆದ್ದ ತಂಡವೇ ಚಾಂಪಿಯನ್ ಆಗಿರುವುದರಿಂದ ಈ ಅಂಕಿ ಅಂಶ ಆರ್​ಸಿಬಿಗೆ ಮತ್ತಷ್ಟು ಬಲ ತುಂಬಿದೆ.

    Demo
    Share. Facebook Twitter LinkedIn Email WhatsApp

    Related Posts

    RCB ತಂಡದ ವಿಜಯೋತ್ಸವದಲ್ಲಿ ನಡೆದ ಅವ್ಯವಸ್ಥೆಗೆ ಬಿಸಿಸಿಐ ಬೇಸರ!

    June 4, 2025

    ಆರ್ ಸಿಬಿಯ ಸಂಭ್ರಮಾಚರಣೆಯ ಆಘಾತ: ವಿಧಾನಸೌಧ- ಕಬ್ಬನ್ ಪಾರ್ಕ್ ಮೆಟ್ರೋ ಸ್ಟೇಷನ್​ಗಳು ಬಂದ್!

    June 4, 2025

    IPL Winners: ಕಿಂಗ್ ಕೊಹ್ಲಿಗೆ ಕನ್ನಡ ಧ್ವಜ ನೀಡಿ ಬೆಂಗಳೂರಿಗೆ ಸ್ವಾಗತ ಮಾಡಿದ ಡಿಕೆಶಿ..!

    June 4, 2025

    RCB ಅಭಿಮಾನಿಗಳ ಪ್ರೀತಿಗೆ ಕೊಹ್ಲಿ ಭಾವುಕ..ಬಸ್‌’ನಲ್ಲಿ ಕಿಂಗ್‌ ಕ್ಯೂಟ್‌ ಮೂಮೆಂಟ್‌ video ವೈರಲ್!

    June 4, 2025

    RCB ವಿಕ್ಟರಿ ಎಫೆಕ್ಟ್.. ರಾಜ್ಯದಲ್ಲಿ ಒಂದೇ ದಿನ ಎಷ್ಟು ಕೋಟಿ ಮದ್ಯ ಮಾರಾಟವಾಯ್ತು ಗೊತ್ತಾ..?

    June 4, 2025

    Virat Kohli: RCBಯ ಗೆಲುವಿನ ದಡ ದಾಟಿಸಿದ ನಾಯಕ ರಜತ್ ಪಾಟಿದಾರ್’ಗೆ ಗಿಫ್ಟ್ ಕೊಟ್ಟ ಕೊಹ್ಲಿ..!

    June 4, 2025

    IPL Prize Money: IPL ಟ್ರೋಫಿಗೆ ಮುತ್ತಿಟ್ಟ RCB: ಚಾಂಪಿಯನ್ ಆರ್’ಸಿಬಿಗೆ ಸಿಕ್ಕ ಹಣವೆಷ್ಟು ಗೊತ್ತಾ..?

    June 4, 2025

    RCB ಕನಸು ನನಸು..ಚಿಕ್ಕ ಮಕ್ಕಳಂತೆ ಕುಣಿದು ಕುಪ್ಪಳಿಸಿದ KGF ಪ್ರಶಾಂತ್‌ ನೀಲ್‌ Video ವೈರಲ್!‌

    June 4, 2025

    RCB ತಂಡಕ್ಕೆ ಸರ್ಕಾರದಿಂದ ಸನ್ಮಾನ ಮಾಡಲು ಸಿದ್ಧತೆ: ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದೇನು..?

    June 4, 2025

    RCB ಗೆದ್ದ ಖುಷಿಯಲ್ಲಿ ಕುಣಿದು ಕುಪ್ಪಳಿಸುತ್ತಿದ್ದ ಅಭಿಮಾನಿ ಹೃದಯಾಘಾತದಿಂದ ಸಾವು..!

    June 4, 2025

    ʼRCBʼ ವಿಜಯಪತಾಕೆ: ಗಳಗಳ ಕಣ್ಣೀರಿಟ್ಟ ವಿಜಯ ಮಲ್ಯ ಪುತ್ರ ಸಿದ್ದಾರ್ಥ್‌ ಮಲ್ಯ! Video ವೈರಲ್!

    June 4, 2025

    ಈ ಸಲ ಕಪ್ ನಮ್ದು: RCB ತಂಡವನ್ನು ಅಭಿನಂದಿಸಿದ ಕೇಂದ್ರ ಸಚಿವ HDK

    June 4, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.