2025ರ ಐಪಿಎಲ್ ಫೈನಲ್ ಕದನಕ್ಕೆ ಕ್ಷಣಗಣನೆ ಆರಂಭವಾಗಿದ್ದು, RCB ಹಾಗೂ ಪಂಜಾಬ್ ತಂಡಗಳ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಇನ್ನೂ ಐಪಿಎಲ್ ಫೈನಲ್ನಲ್ಲಿ ಆರ್ಸಿಬಿ ಚಾಂಪಿಯನ್ ಪಟ್ಟ ಅಲಂಕರಿಸಿದರೆ 20 ಕೋಟಿ ರೂ. ನಗದು ಬಹುಮಾನವನ್ನು ಪಡೆಯಲಿದೆ.
IPL 2025: ಇಂದು IPL ಫೈನಲ್ ಫೈಟ್: RCBಯ 18 ವರ್ಷಗಳ ಕಾಯುವಿಕೆಗೆ ಇಂದು ಸಿಗುತ್ತಾ ಮುಕ್ತಿ!?
ಯಾವ ತಂಡಕ್ಕೆ ಎಷ್ಟು ಕೋಟಿ?
ಚಾಂಪಿಯನ್ ತಂಡ 20 ಕೋಟಿ ರೂ., ರನ್ನರ್ ಅಪ್ 13 ಕೋಟಿ ರೂ., ಕ್ವಾಲಿಫೈಯರ್ನಲ್ಲಿ 3ನೇ ಸ್ಥಾನ ಪಡೆದ ಮುಂಬೈಗೆ 7 ಕೋಟಿ ರೂ. ಎಲಿಮಿನೇಟರ್ನಲ್ಲಿ ಔಟ್ಗಿ ನಾಲ್ಕನೇ ಸ್ಥಾನ ಪಡೆದ ಗುಜರಾತ್ ಟೈಟಾನ್ಸ್ಗೆ 6.5 ಕೋಟಿ ರೂ. ಸಿಗಲಿದೆ. ತಂಡಗಳಿಗೆ ಮಾತ್ರ ಅಲ್ಲದೇ ವೈಯಕ್ತಿಕ ಪ್ರಶಸ್ತಿಗಳಿಗೂ ನಗದು ಬಹುಮಾನಗಳಿವೆ.
ಒಂದು ಸೀಸನ್ನಲ್ಲಿ ಅತಿ ಹೆಚ್ಚು ರನ್ ಹೊಡೆದ ಬ್ಯಾಟ್ಸ್ಮನ್, ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್, ಸೂಪರ್ ಸ್ಟ್ರೈಕರ್, ಪವರ್ ಪ್ಲೇಯರ್, ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಆಟಗಾರ, ಗೇಮ್ ಚೇಂಜರ್ ಪ್ರಶಸ್ತಿಗೆ 10 ಲಕ್ಷ ರೂ. ಸಿಗುತ್ತದೆ.