ಆರ್ ಸಿಬಿ ಕಪ್ ಗೆದ್ದು ಬೀಗಿದೆ. ಅಭಿಮಾನಿಗಳ 18 ವರ್ಷದ ಕನಸು ನನಸಾಗಿದೆ. ಕರುನಾಡಿನ ತುಂಬೆಲ್ಲಾ ಸಂಭ್ರಮ ಮನೆ ಮಾಡಿದೆ. ನಿನ್ನೆ ಅಹಮದಾಬಾದ್ ನಲ್ಲಿ ಪಂಜಾಬ್ ಮಣಿಸಿ ಆರ್ ಸಿಬಿ ಕಪ್ ಗೆ ಮುತ್ತಿಟ್ಟಿದೆ.
ಕಪ್ ಗೆಲ್ಲುತ್ತಿದ್ದಂತೆ ಪಟೀದಾರ್ ಪಡೆ ಮನೆ ಅಂಗಳಕ್ಕೆ ಬಂದಿಳಿದೆ. ರೆಡ್ ಆರ್ಮಿಗೆ ರೆಡ್ ಕಾರ್ಪೆಟ್ ಹಾಕಿ ಬೆಂಗಳೂರು ಸ್ವಾಗತಿಸಿದೆ.
ಬೆಂಗಳೂರಿನ ಹೆಚ್ ಎಲ್ ಏರ್ ಪೋರ್ಟ್ ಗೆ ಬಂದಿಳಿದ ಆರ್ ಸಿಬಿ ತಂಡ ನೋಡೋದಿಕ್ಕೆ ಅಭಿಮಾನಿಗಳ ದಂಡು ನೆರೆದಿತ್ತು. ಬಸ್ ಒಳಗಡೆ ಕಪ್ ಹಿಡಿದು ಕುಳಿತ ಕ್ಯೂಟ್ ವಿಡಿಯೋವನ್ನು ಪತ್ನಿ ಅನುಷ್ಕಾ ಶರ್ಮಾ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ನಮ್ಮ ಬೆಂಗಳೂರು ಅಂತಾ ಕ್ಯಾಪ್ಷನ್ ಕೊಟ್ಟು ವಿಡಿಯೋ ಶೇರ್ ಮಾಡಿದ್ದಾರೆ.