ಸಾಮಾನ್ಯವಾಗಿ ಹಸಿ ಮೆಣಸಿನಕಾಯಿಯನ್ನು ಹೆಚ್ಚಾಗಿ ಮಸಾಲೆ ಪದಾರ್ಥಗಳನ್ನು ತಯಾರಿಸಲು ಬಳಸಲಾಗುತ್ತದೆ. ಹಸಿ ಮೆಣಸಿನಕಾಯಿ ಗಾಢ ಹಸಿರು ಬಣ್ಣ ಹಾಗೂ ರುಚಿಯಲ್ಲಿ ಖಾರದಿಂದ ಕೂಡಿರುತ್ತದೆ. ಇದನ್ನು ಬಳಸಿದ ಆಹಾರ ಪದಾರ್ಥಗಳ ರುಚಿಯು ಕೂಡ ಖಾರದಿಂದ ಕೂಡಿರುತ್ತದೆ. ಖಾರದ ರುಚಿಗಾಗಿ ಬಳಸುವುದನ್ನು ಬಿಟ್ಟರೆ ಯಾವುದೇ ಪ್ರಮುಖ ಖಾದ್ಯವನ್ನು ಇದರಿಂದ ತಯಾರಿಸುವುದಿಲ್ಲ.
ಅಪ್ಪಿತಪ್ಪಿಯೂ ಮಾವಿನಹಣ್ಣಿನ ಜೊತೆ ಇವುಗಳನ್ನು ತಿನ್ನಬಾರದಂತೆ! ಯಾಕೆ ಗೊತ್ತಾ?
ಹಸಿ ಮೆಣಸಿನಕಾಯಿ ರುಚಿಯಲ್ಲಿ ಖಾರವಾಗಿದ್ದರೂ ಸಮೃದ್ಧವಾದ ಜೀವಸತ್ವಗಳನ್ನು ಹಾಗೂ ಪೋಷಕಾಂಶಗಳನ್ನು ಒಳಗೊಂಡಿದೆ. ಇದರಿಂದ ಆರೋಗ್ಯಕ್ಕೆ ಹಲವಾರು ಲಾಭಗಳಿವೆ. ಹೀಗಾಗಿ ಹಸಿರು ಮೆಣಸಿನಕಾಯಿಯನ್ನು ಆಹಾರವಾಗಿ ಸೇವಿಸುವಂತೆ ತಜ್ಞರು ಸಲಹೆ ನೀಡುತ್ತಾರೆ. ಹಾಗಾದ್ರೆ ಹಸಿರು ಮೆಣಸಿನಕಾಯಿ ತಿನ್ನುವುದರಿಂದ ಸಿಗುವ ಆರೋಗ್ಯ ಪ್ರಯೋಜನಗಳೇನು ತಿಳಿಯೋಣ.
ನಿಮ್ಮ ಆರೋಗ್ಯಕ್ಕೆ ಯಾವ ಆಹಾರ ಒಳ್ಳೆಯದು ಮತ್ತು ಯಾವುದು ಕೆಟ್ಟದ್ದು ಎಂದು ನಿಮಗಲ್ಲದೆ ಬೇರೆ ಯವರಿಗೆ ಗೊತ್ತಿರಲು ಸಾಧ್ಯವಿಲ್ಲ. ಆದರೆ ಕೆಲವೊಂದು ಆಹಾರಗಳು ನಿಮ್ಮ ಊಹೆಗೂ ಮೀರಿ ನಿಮಗೆ ಒಳ್ಳೆಯ ಪ್ರಯೋಜನಗಳನ್ನು ಕೊಡುತ್ತವೆ. ನಿಮ್ಮ ಮನಸ್ಸು ಬೇಡ ಎನ್ನುವ ಅಂತಹ ಆಹಾರಗಳನ್ನು ನಿಮ್ಮ ಆರೋಗ್ಯ ಬೇಕು ಎಂದುಕೊಳ್ಳುತ್ತದೆ.
ಇದಕ್ಕೆ ಒಳ್ಳೆಯ ಉದಾಹರಣೆ ಎಂದರೆ ಅದು ಹಸಿ ಮೆಣಸಿನಕಾಯಿ. ಹೌದು, ಹಸಿಮೆಣಸಿನಕಾಯಿಯನ್ನು ತುಂಬಾ ಜನರು ದೂರವೇ ಇಡುತ್ತಾರೆ. ಆದರೆ ಇದರ ಪ್ರಯೋಜನಗಳು ಮಾತ್ರ ಸಾಕಷ್ಟಿದೆ. ಮಿತ ಪ್ರಮಾಣದಲ್ಲಿ ಸೇವನೆ ಮಾಡುವ ಅಭ್ಯಾಸ ಇಟ್ಟುಕೊಂಡರೆ ನಿಮ್ಮ ಬಹುತೇಕ ಕಾಯಿಲೆಗಳು ನಿಮ್ಮಿಂದ ದೂರವಾಗುತ್ತವೆ. ಹಸಿಮೆಣಸಿನಕಾಯಿಯಿಂದ ಸಿಗುವ ಆರೋಗ್ಯ ಪ್ರಯೋಜನಗಳನ್ನು ನೋಡುವುದಾದರೆ,
ಒಣ ಮೆಣಸಿನಕಾಯಿಗಳಿಗೆ ಹೋಲಿಸಿದರೆ ಹಸಿಮೆಣಸಿನಕಾಯಿಯಲ್ಲಿ ವಿಟಮಿನ್ ಮತ್ತು ಖನಿಜಾಂಶಗಳ ಪ್ರಮಾಣ ಹೇರಳವಾಗಿ ಕಂಡು ಬರುತ್ತದೆ. ಮುಖ್ಯವಾಗಿ ನಮ್ಮ ದೇಹಕ್ಕೆ ಅಗತ್ಯವಾಗಿ ಬೇಕಾದ ವಿಟಮಿನ್ ಅಂಶಗಳು ಎನ್ನಲಾದ ವಿಟಮಿನ್ ಎ, ವಿಟಮಿನ್ ಸಿ, ವಿಟಮಿನ್ ಬಿ6, ಪೊಟ್ಯಾಶಿಯಂ ಮತ್ತು ಕಬ್ಬಿಣದ ಪ್ರಮಾಣ ಇದರಲ್ಲಿ ಹೆಚ್ಚಾಗಿ ಸಿಗುತ್ತದೆ.
ಹಸಿಮೆಣಸಿನಕಾಯಿ ತಿನ್ನುವವರಿಗೆ ದೇಹದಲ್ಲಿ ಸ್ವಲ್ಪ ಪ್ರಮಾಣದಲ್ಲಿ ಉಷ್ಣಾಂಶ ಉಂಟಾಗುತ್ತದೆ. ಇದು ಮೆಟಬಾಲಿಸಂ ಪ್ರಕ್ರಿಯೆಯನ್ನು ನಡೆಸಲು ಸಹಾಯವಾಗಿ ದೇಹದ ಕೊಬ್ಬಿನ ಅಂಶವನ್ನು ಕರಗಿಸುತ್ತದೆ. ಇದರಿಂದ ದೇಹದ ತೂಕ ನಿರ್ವಹಣೆ ಚೆನ್ನಾಗಿ ನಡೆಯುತ್ತದೆ ಕ್ಯಾಲೋರಿಗಳ ಪ್ರಮಾಣ ಕೂಡ ತಗುತ್ತದೆ.
ನಿಮಗೆ ಗೊತ್ತಿದೆಯೋ ಇಲ್ಲವೋ ತಿಳಿದಿಲ್ಲ.ನೀವು ಬಳಸುವ ಬಹುತೇಕ ನೋವು ನಿವಾರಕ ಆಯಿಂಟ್ಮೆಂಟ್ ಅಥವಾ ಕ್ರೀಮ್ ಗಳಲ್ಲಿ ಹಸಿಮೆಣಸಿನಕಾಯಿಯ ಸಾರವನ್ನು ಬಳಸುತ್ತಾರೆ. ಏಕೆಂದರೆ ಇದು ನೋವು ನಿವಾರಕ ಗುಣವನ್ನು ಹೆಚ್ಚಾಗಿ ಹೊಂದಿದೆ.ಹಾಗಾಗಿ ಎಂತಹದೇ ನೋವನ್ನು ತಕ್ಷಣ ಉಪಶಮನ ಮಾಡು ವಂತಹ ಲಕ್ಷಣ ಹಸಿಮೆಣಸಿನಕಾಯಿಯಲ್ಲಿ ಹೇರಳವಾಗಿ ಕಂಡುಬರುತ್ತದೆ. ಹೀಗಾಗಿ ಅರ್ಥ್ರೈಟಿಸ್ ಕೀಲು ನೋವು ಮತ್ತು ಬೇರೆ ಯಾವುದೇ ನೋವುಗಳಿಗೆ ಹಸಿಮೆಣಸಿನಕಾಯಿ ರಾಮಬಾಣವಾಗಿ ಕೆಲಸ ಮಾಡುತ್ತದೆ.
ಹಸಿಮೆಣಸಿನಕಾಯಿಯನ್ನು ನಿಯಮಿತ ಪ್ರಮಾಣದಲ್ಲಿ ಸೇವನೆ ಮಾಡುವುದರಿಂದ ದೇಹದ ಜೀರ್ಣಶಕ್ತಿ ವೃದ್ಧಿಸುತ್ತದೆ. ಏಕೆಂದರೆ ಇದು ಹೊಟ್ಟೆಯ ಭಾಗಕ್ಕೆ ರಕ್ತ ಸಂಚಾರವನ್ನು ಹೆಚ್ಚಿಸುತ್ತದೆ. ಹೀಗಾಗಿ ಸೇವಿಸಿದ ಆಹಾರ ಚೆನ್ನಾಗಿ ಜೀರ್ಣವಾಗುವಂತೆ ಇದು ಮಾಡಬಲ್ಲದು. ಮಲಬದ್ಧತೆ ಸಮಸ್ಯೆಗೂ ಕೂಡ ಇದು ಒಂದು ರೀತಿಯ ಔಷಧಿಯಾಗಿ ಕೆಲಸ ಮಾಡುತ್ತದೆ.
ರಕ್ತದ ಒತ್ತಡವನ್ನು ಕಡಿಮೆ ಮಾಡುವಂತಹ ಗುಣ ಹಸಿಮೆಣಸಿನಕಾಯಿಯಲ್ಲಿ ಕಂಡುಬರುತ್ತದೆ. ಹೀಗಾಗಿ ಸಂಶೋಧನೆ ಹೇಳುವಂತೆ ಹೃದಯಕ್ಕೂ ಕೂಡ ಇದು ತುಂಬಾ ಒಳ್ಳೆಯದು. ಹೃದಯ ರಕ್ತ ನಾಳಗಳನ್ನು ಹಿಗ್ಗಿಸಿ ಸರಾಗವಾಗಿ ರಕ್ತ ಸಂಚಾರ ಆಗುವಂತೆ ಮಾಡುತ್ತದೆ. ಹೃದಯ ರಕ್ತನಾಳದ ಕಾಯಿಲೆಗಳನ್ನು ನಿವಾರಿಸುತ್ತದೆ.
ನಮ್ಮ ದೇಹದಲ್ಲಿ ಉರಿಯುತವನ್ನು ಉಂಟುಮಾಡುವ ಫ್ರೀ ರಾಡಿಕಲ್ ಅಂಶಗಳನ್ನು ಕಡಿಮೆ ಮಾಡುವ ಶಕ್ತಿ ಇರುವುದು ಆಂಟಿ ಆಕ್ಸಿಡೆಂಟ್ ಗಳಿಗೆ.ಅಂತಹ ಸಮರ್ಥ ಆಂಟಿ ಆಕ್ಸಿಡೆಂಟ್ ಅಂಶಗಳು ಹಸಿಮೆಣಸಿನಕಾಯಿ ಯಲ್ಲಿ ಹೆಚ್ಚಾಗಿ ಸಿಗುತ್ತವೆ. ದೀರ್ಘಕಾಲದ ಕಾಯಿಲೆಗಳನ್ನು ನಿವಾರಣೆ ಮಾಡುವ ಮತ್ತು ಆರೋಗ್ಯವನ್ನು ಕಾಪಾಡುವ ಲಕ್ಷಣ ಇದರಲ್ಲಿದೆ.