Close Menu
Ain Live News
    Facebook X (Twitter) Instagram YouTube
    Saturday, June 7
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ರಾಜಕೀಯ
    • ಜಿಲ್ಲೆ
    • ಸಿನಿಮಾ
    • ಲೈಫ್ ಸ್ಟೈಲ್
    • ಜ್ಯೋತಿಷ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    Facebook X (Twitter) Instagram YouTube
    Ain Live News

    ಈ ಎಲ್ಲಾ ಸಮಸ್ಯೆಗಳಿಗೆ ಕರಿಬೇವು ವರದಾನವಂತೆ: ಆದ್ರೆ ತಿನ್ನೋದು ಮಾತ್ರ ಹೀಗಿರಲಿ!

    By AIN AuthorJune 7, 2025
    Share
    Facebook Twitter LinkedIn Pinterest Email
    Demo

    ಅಡುಗೆ ಮನೆಯ ಕೆಲವು ಆಹಾರ ಪದಾರ್ಥಗಳು ನಮಗೆ ಅದ್ಭುತವಾಗಿ ಕೆಲಸ ಮಾಡುತ್ತವೆ ಎನ್ನುವುದಕ್ಕೆ ಕರಿಬೇವಿನ ಸೊಪ್ಪು ಒಂದು ಉದಾಹರಣೆ. ಕರಿಬೇವಿನ ಎಲೆಗಳನ್ನು ನಾವು ಪ್ರತಿದಿನ ಅಡುಗೆಗೆ ಬಳಕೆ ಮಾಡುತ್ತೇವೆ ಮತ್ತು ಇದಕ್ಕೆ ಸಂಬಂಧಪಟ್ಟ ಆರೋಗ್ಯ ಲಾಭಗಳನ್ನು ನಮಗೆ ಗೊತ್ತಿಲ್ಲದೆ ಪಡೆದು ಕೊಳ್ಳು ತ್ತಿದ್ದೇವೆ.ಆದರೆ ಕರಿಬೇವಿನ ಎಲೆಗಳನ್ನು ನೆನೆಸಿ ಅದರ ನೀರು ಕುಡಿಯುವುದರಿಂದ ಮತ್ತಷ್ಟು ಲಾಭಗಳನ್ನು ನಾವು ಕಂಡುಕೊಳ್ಳಬಹುದು.ನಮ್ಮ ಆರೋಗ್ಯಕ್ಕೆ ಕರಿಬೇವಿನ ಸೊಪ್ಪು ಒಂದು ರೀತಿಯ ರಕ್ಷಾ ಕವಚವಿ ದ್ದಂತೆ!ಹಲವು ಆಯಾಮಗಳಲ್ಲಿ ಇದರಿಂದ ನಾವು ಆರೋಗ್ಯಕ್ಕೆ ಸಹಕಾರವನ್ನು ನಿರೀಕ್ಷಿಸಬಹುದು.

    ಡಿವೈಡರ್ ಗೆ ಕಾರು ಡಿಕ್ಕಿ: ಕೂದಲೆಳೆ ಅಂತರದಲ್ಲಿ ಪಾರಾದ ಕುಟುಂಬ!

    ಹೊಟ್ಟೆಯ ಸಮಸ್ಯೆಗಳಿಗೆ ಹಲವು ಔಷಧಿಗಳಿವೆ. ಆದರೆ ಕೆಲವು ನೈಸರ್ಗಿಕ ಮತ್ತು ಸರಳ ಪರಿಹಾರಗಳು ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಹೋಗಲಾಡಿಸಲು ಸಹಾಯಕವಾಗಿವೆ. ಕರಿಬೇವಿನ ಎಲೆಯನ್ನು ಪ್ರತಿದಿನ ತಿನ್ನುವುದರಿಂದ ಅನೇಕ ಪ್ರಯೋಜನಗಳಿವೆ

    ನಾವು ಬೆಳಗ್ಗೆ ಎದ್ದಾಗ ಏನು ತಿನ್ನುತ್ತೇವೆ ಮತ್ತು ಕುಡಿಯುತ್ತೇವೆ ಎಂಬುದರ ಮೇಲೆ ನಮ್ಮ ಆರೋಗ್ಯವು ಅವಲಂಬಿತವಾಗಿರುತ್ತದೆ. ಹಾಗಾಗಿ ಆರೋಗ್ಯಕ್ಕೆ ಪ್ರಯೋಜನಕಾರಿಯಾದ ಹೆಚ್ಚಿನ ಪದಾರ್ಥಗಳನ್ನು ಆಹಾರದಲ್ಲಿ ಸೇರಿಸಲು ಪ್ರಯತ್ನಿಸಿ. ಕರಿಬೇವಿನ ಎಲೆಗಳನ್ನು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದು.

    ಕರಿಬೇವಿನ ಎಲೆಗಳು ಆಂಟಿ-ಆಕ್ಸಿಡೆಂಟ್ಗಳನ್ನು ಹೊಂದಿದ್ದು, ಇದು ದೇಹದಿಂದ ಹಾನಿಕಾರಕ ವಿಷವನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಕರಿಬೇವಿನ ಎಲೆಗಳಲ್ಲಿ ವಿಟಮಿನ್ ಎ, ಬಿ, ಸಿ, ಇ, ಕ್ಯಾಲ್ಸಿಯಂ, ಕಬ್ಬಿಣ, ರಂಜಕ, ಬೀಟಾ ಕ್ಯಾರೋಟಿನ್, ಪ್ರೊಟೀನ್, ಉರಿಯೂತದ ಗುಣಲಕ್ಷಣಗಳು ಮತ್ತು ಆಂಟಿಮೈಕ್ರೊಬಿಯಲ್ ಗುಣಲಕ್ಷಣಗಳಿವೆ. ಈ ಅಂಶಗಳಿಂದಾಗಿ ಕರಿಬೇವಿನ ಎಲೆಗಳು ದೇಹಕ್ಕೆ ಹೆಚ್ಚು ಪ್ರಯೋಜನಕಾರಿಯಾಗಿದೆ.

    ಕರಿಬೇವಿನ ಎಲೆಗಳು ದೇಹದಲ್ಲಿ ಕಬ್ಬಿಣದ ಕೊರತೆಯಿಂದ ಉಂಟಾಗುವ ರಕ್ತಹೀನತೆಯನ್ನು ತಡೆಯುತ್ತದೆ. ಕರಿಬೇವು ತಿನ್ನುವುದರಿಂದ ದೃಷ್ಟಿಗೆ ಒಳ್ಳೆಯದು. ಹಲವು ಸೋಂಕಿನ ವಿರುದ್ಧ ಹೋರಾಡಲು ಕರಿಬೇವು ಉಪಯುಕ್ತವಾಗಿದೆ. ಕರಿಬೇವು ತೂಕ ನಷ್ಟಕ್ಕೆ ವರವೆಂದು ಪರಿಗಣಿಸಲಾಗಿದೆ. ಖಾಲಿ ಹೊಟ್ಟೆಯಲ್ಲಿ ಕರಿಬೇವಿನ ಎಲೆಗಳನ್ನು ತಿನ್ನುವುದು ಚಯಾಪಚಯವನ್ನು ಸುಧಾರಿಸುತ್ತದೆ. ಕರಿಬೇವಿನ ಎಲೆಗಳು ಕೂಡ ತೂಕ ಇಳಿಕೆಗೆ ಸಹಕಾರಿ ಆಗಿದೆ. ಇದರಿಂದ ದೇಹದ ತೂಕ ಹೆಚ್ಚಾಗುವುದಿಲ್ಲ.

    ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಉಪಯುಕ್ತ: ಕರಿಬೇವಿನ ಎಲೆಗಳು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುವಲ್ಲಿ ಪ್ರಯೋಜನಕಾರಿ. ಈ ಎಲೆಗಳನ್ನು ಅಗಿಯುವುದರಿಂದ ರಕ್ತದಲ್ಲಿನ ಗ್ಲೂಕೋಸ್ ಮಟ್ಟವು ನಿಯಂತ್ರಿಸಲ್ಪಡುತ್ತದೆ. ಮಧುಮೇಹ ನಿರ್ವಹಣೆಗೆ, ಕರಿಬೇವಿನ ಎಲೆಗಳನ್ನು ಪ್ರತಿದಿನ ಖಾಲಿ ಹೊಟ್ಟೆಯಲ್ಲಿ ಅಗಿಯುವುದು ಒಳ್ಳೆಯದು.

    ಕೂದಲು ಬಲಗೊಳ್ಳುತ್ತದೆ: ಕರಿಬೇವಿನ ಎಲೆಗಳಲ್ಲಿ ಕಂಡುಬರುವ ಬೀಟಾ-ಕ್ಯಾರೋಟಿನ್ ಮತ್ತು ಪ್ರೋಟೀನ್ ಕೂದಲಿನ ಬೆಳವಣಿಗೆಗೆ ಪ್ರಯೋಜನಕಾರಿಯಾಗಿದೆ. ಇದು ಕೂದಲನ್ನು ಬಲಪಡಿಸುತ್ತದೆ ಮತ್ತು ಕೂದಲು ಉದುರುವಿಕೆಯನ್ನು ಕಡಿಮೆ ಮಾಡುತ್ತದೆ.

    ಉತ್ತಮ ಮೌಖಿಕ ನೈರ್ಮಲ್ಯ: ಬಾಯಿಯ ಆರೋಗ್ಯವನ್ನು ಕಾಪಾಡಿಕೊಳ್ಳಲು ಕರಿಬೇವಿನ ಎಲೆಗಳನ್ನು ಜಗಿಯಬಹುದು. ಕರಿಬೇವಿನ ಎಲೆಗಳನ್ನು ಅಗಿಯುವುದರಿಂದ ಬಾಯಿಯಲ್ಲಿರುವ ಬ್ಯಾಕ್ಟೀರಿಯಾವನ್ನು ಹೋಗಲಾಡಿಸುತ್ತದೆ ಮತ್ತು ಬಾಯಿಯನ್ನು ಸ್ವಚ್ಛವಾಗಿಡುತ್ತದೆ

    ಚರ್ಮದ ಸಮಸ್ಯೆ: ಚರ್ಮ ಮತ್ತು ಕೂದಲಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ಕರಿಬೇವು ಕಣ್ಣುಗಳು ಮತ್ತು ಯಕೃತ್ತಿಗೆ ಸಹ ಪ್ರಯೋಜನಕಾರಿಯಾಗಿದೆ. ಕರಿಬೇವು ಎಲೆ ನೆಗಡಿ ಮತ್ತು ಕೆಮ್ಮಿನಿಂದ ಪರಿಹಾರ ನೀಡುತ್ತದೆ. ಕರಿಬೇವನ್ನು ಹಾಗೆಯೇ ತಿನ್ನಲು ಇಷ್ಟವಿಲ್ಲದಿದ್ದರೆ, ಚಟ್ನಿ ಮಾಡಿ ಕೂಡ ಸೇವಿಸಬಹುದು. ಹಾಗಾಗಿ ಕರಿಬೇವನ್ನು ಆಹಾರದಲ್ಲಿ ಸೇರಿಸಲಾಗುತ್ತದೆ

    Demo
    Share. Facebook Twitter LinkedIn Email WhatsApp

    Related Posts

    ನಿಮ್ಮ ಮನೆಯಲ್ಲೂ ಜಿರಳೆ ಕಾಟ ಜಾಸ್ತಿ ಆಗಿದ್ಯಾ!? ಡೋಂಟ್ ವರಿ, ಈ ಸಿಂಪಲ್ ಟ್ರಿಕ್ಸ್ ಫಾಲೋ ಮಾಡಿ!

    June 7, 2025

    ಬಿಳಿ ಕೂದಲು ಕಪ್ಪಾಗಬೇಕಾ!? ಹಾಗಿದ್ರೆ ರಾತ್ರಿ ಮಲಗುವ ಮುನ್ನ ಈ ಎಣ್ಣೆ ಹಚ್ಚಿ.. ಆಮೇಲೆ ನೋಡಿ ಚಮತ್ಕಾರ!

    June 6, 2025

    ಖಾರ ಅಂತ ಹಸಿಮೆಣಸಿನಕಾಯಿ ತಿನ್ನೋದು ಬಿಡಬೇಡಿ.. ಇದರಿಂದ ಸಿಗುವ ಬೆನಿಫಿಟ್ ಸಾಕಷ್ಟು!

    June 6, 2025

    ಅಪ್ಪಿತಪ್ಪಿಯೂ ಮಾವಿನಹಣ್ಣಿನ ಜೊತೆ ಇವುಗಳನ್ನು ತಿನ್ನಬಾರದಂತೆ! ಯಾಕೆ ಗೊತ್ತಾ?

    June 6, 2025

    ಅನುಭವದ ಮೇರೆಗೆ ಕ್ಯಾನ್ಸರ್ ಪತ್ತೆ: ರೋಗಿಯ ಜೀವ ರಕ್ಷಿಸಿದ ಡಾ. ಕೌಶಿಕ್ ಸುಬ್ರಮಣಿಯನ್

    June 6, 2025

    ನಿತ್ಯ ಖಾಲಿ ಹೊಟ್ಟೆಯಲ್ಲಿ ಒಂದು ಚಿಕ್ಕ ಪೀಸ್ ಬೆಳ್ಳುಳ್ಳಿ ತಿಂದ್ರೆ ಎಷ್ಟೆಲ್ಲಾ ಬೆನಿಫಿಟ್ ಗೊತ್ತಾ!?

    June 5, 2025

    ಬಿಳಿ ಕೂದಲಿನ ಸಮಸ್ಯೆಯೇ!? ವಾರದಲ್ಲಿ 2 ಬಾರಿ ಹಚ್ಚಿದರೆ ಬಿಳಿ ಕೂದಲು ಶಾಶ್ವತವಾಗಿ ಕಪ್ಪಾಗುತ್ತಂತೆ!

    June 5, 2025

    ಮುಖ-ತೋಳುಗಳಲ್ಲಿ ಈ ಲಕ್ಷಣಗಳು ಕಾಣ್ತಿದ್ಯಾ!? ಹಾಗಿದ್ರೆ ಇದು ಲಿವರ್ ಡ್ಯಾಮೇಜ್ ಆಗ್ತಿದೆ ಎಂದರ್ಥ!

    June 5, 2025

    Periods: ಮಹಿಳೆಯರೇ ಗಮನಿಸಿ: ಮುಟ್ಟಿನ ಸಮಯದಲ್ಲಿ ಈ ಆಹಾರಗಳನ್ನ ಸೇವಿಸಬೇಡಿ!

    June 5, 2025

    World Environment Day: ಈ ದಿನದ ಇತಿಹಾಸ, ಮಹತ್ವ ಮತ್ತು ಥೀಮ್ ಏನು? ಇಲ್ಲಿದೆ ಮಾಹಿತಿ

    June 5, 2025

    ನಿತ್ಯ ಮೊಸರಿಗೆ ಈ ಪುಡಿ ಬೆರೆಸಿ ತಿಂದ್ರೆ ವಾರದಲ್ಲೇ ಕರಗುತ್ತೆ ಬೊಜ್ಜು! ನೀವು ಒಮ್ಮೆ ಟ್ರೈ ಮಾಡಿ!

    June 4, 2025

    ನಿತ್ಯ ಬೆಳಿಗ್ಗೆ ಎದ್ದಾಕ್ಷಣ ತಲೆನೋವು ಬರುತ್ತಾ!? ಹಾಗಿದ್ರೆ ಇದು ಈ ಕಾಯಿಲೆಯ ಸಂಕೇತ!

    June 3, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.