ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಂಭವಿಸಿದ್ದ ಕಾಲ್ತುಳಿತದಲ್ಲಿ 11 ಜನ ಜೀವ ಬಿಟ್ಟಿದ್ದರು. ಇದೇ ಕಾರಣಕ್ಕೆ ರಾತ್ರೋರಾತ್ರಿ ಪೊಲೀಸ್ ಅಧಿಕಾರಿಗಳನ್ನ ಅಮಾನತು ಕೂಡ ಮಾಡಲಾಗಿತ್ತು. ಬಳಿಕ ಪೊಲೀಸರು ನಾಲ್ವರನ್ನು ಬಂಧಿಸಿದ್ದು, ಜೂನ್ 19ರವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಸದ್ಯ ಈ ದುರಂತಕ್ಕೆ ಸಂಬಂಧಿಸಿದಂತೆ ನಟಿ ರಮ್ಯಾ ಪ್ರತಿಕ್ರಿಯೇ ನೀಡಿದ್ದಾರೆ.
‘ಆರ್ಸಿಬಿ ಗೆದ್ದ ರಾತ್ರಿ ಕರ್ನಾಟಕದಾದ್ಯಂತ ಸಂಭ್ರಮಾಚರಣೆಗಳು ನಡೆದವು. ಮಾಲ್ಗಳಲ್ಲಿ ಮತ್ತು ಬೀದಿಗಳಲ್ಲಿ ಜನರು ಖುಷಿಯಿಂದ ಕುಣಿದರು. ಆಗ ಒಂದೇ ಒಂದು ಅಹಿತಕರ ಘಟನೆಯೂ ನಡೆದಿಲ್ಲ. ಕಾಲ್ತುಳಿತಗಳು ಸುಮ್ಮನೆ ಸಂಭವಿಸುವುದಿಲ್ಲ, ಅವುಗಳನ್ನು ಸೃಷ್ಟಿ ಮಾಡಲಾಗುತ್ತದೆ. ಸರ್ಕಾರ, ಅಧಿಕಾರಿಗಳು, ಆರ್ಸಿಬಿ, ಪೊಲೀಸರು, ಕೆಎಸ್ಸಿಎ ಮತ್ತು ಸಾರ್ವಜನಿಕರ ಸಾಮೂಹಿಕ ವೈಫಲ್ಯದಿಂದ ಈ ಕಾಲ್ತುಳಿತ ನಡೆದಿದೆ’ ಎಂದು ರಮ್ಯಾ ಹೇಳಿದ್ದಾರೆ.
ನಿತ್ಯ ನೀವು ಟಾಯ್ಲೆಟ್ ಗೆ ಹೋದ ಬಳಿಕ ಈ ಲಕ್ಷಣಗಳು ಕಾಣುತ್ತಾ!? ಹಾಗಿದ್ರೆ ಇದು ಹೊಟ್ಟೆ ಕ್ಯಾನ್ಸರ್!
‘ಕ್ರೀಡೆಯ ಗೆಲುವನ್ನು ಆಚರಿಸಲು ಬಂದ ಮುಗ್ಧರು ಮೃತಪಟ್ಟಿದ್ದಾರೆ. ಈ ಸಾವಿಗೆ ಕಾರಣಗಳನ್ನು ಕಂಡುಹಿಡಿಯಲು ಮತ್ತು ನ್ಯಾಯ ಒದಗಿಸಲು ಪ್ರಾಮಾಣಿಕ ಆತ್ಮಾವಲೋಕನದ ಅಗತ್ಯವಿದೆ. ಇಲ್ಲಿ ಅಧಿಕಾರಿಗಳನ್ನು ಅಮಾನತುಗೊಳಿಸಿರುವ ನಿರ್ಧಾರವು ಯೋಚಿಸದೇ ತೆಗೆದುಕೊಂಡ ನಿರ್ಧಾರದಂತೆ ಕಾಣುತ್ತದೆ. ಈ ನಿರ್ಧಾರ ತೆಗೆದುಕೊಳ್ಳುವ ಮೊದಲು ವರದಿಗಾಗಿ ಕಾಯಬೇಕಿತ್ತು’ ಎಂದು ರಮ್ಯಾ ಅಭಿಪ್ರಾಯ ಹೊರಹಾಕಿದ್ದಾರೆ.