ಬೆಂಗಳೂರು: ಕರ್ನಾಟಕ ರಾಜಧಾನಿ ಬೆಂಗಳೂರಿನಲ್ಲಿ ಮತ್ತೆ ಹಿಂದಿ vs ಕನ್ನಡ ಸಂಘರ್ಷ ವ್ಯಾಪಕ ಸುದ್ದಿಗೆ ಗ್ರಾಸವಾಗಿದ್ದು, ಹಿಂದಿ ಮಹಿಳೆಯೊಬ್ಬರು ಆಟೋ ಚಾಲಕನೊಂದಿಗೆ ಗಲಾಟೆ ಮಾಡಿಕೊಂಡಿರುವ ವಿಡಿಯೋ ಇದೀಗ ವ್ಯಾಪಕ ವೈರಲ್ ಆಗುತ್ತಿದೆ. ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮತ್ತೊಂದು ಹಿಂದಿ ಮಹಿಳೆಯ ಮಾತಿನ ಚಕಮಕಿ ವಿಡಿಯೋ ವೈರಲ್ ಆಗಿದ್ದು,
ನಿಮ್ಮ ಲ್ಯಾಪ್ ಟಾಪ್ ನಲ್ಲಿ ಬೇಗ ಚಾರ್ಜ್ ಕಡಿಮೆ ಆಗುತ್ತಾ!? ಹಾಗಿದ್ರೆ ಈ ರೀತಿ ಮಾಡಿ!
ಆಟೋ ಬಾಡಿಗೆ ವಿಚಾರಕ್ಕೆ ಬೆಂಗಳೂರಿನ ಆಟೋ ಚಾಲಕನ ಜೊತೆಗೆ ಜಗಳಕ್ಕೆ ಇಳಿದ ಘಟನೆ ನಡೆದಿದೆ. ಸದ್ಯ ಆಟೋ ಚಾಲಕನೊಂದಿಗೆ ಜಗಳಕ್ಕಿಳಿದ ಘಟನೆಯ ವಿಡಿಯೋ ವೈರಲ್ ಆಗಿದೆ. @VigilntHindutva ಹೆಸರಿನ ಖಾತೆಯಲ್ಲಿ ಶೇರ್ ಮಾಡಲಾದ ವಿಡಿಯೋದಲ್ಲಿ ಹಿಂದಿ ಮಾತನಾಡುವ ಮಹಿಳೆಯೊಬ್ಬರು ಆಟೋ ಚಾಲಕನ ಜೊತೆಗೆ ಆಟೋ ಬಾಡಿಗೆ ವಿಚಾರವಾಗಿ ಜಗಳ ಆಡುತ್ತಿರುವುದನ್ನು ಕಾಣಬಹುದು.
https://twitter.com/VigilntHindutva/status/1931207255111750021
ಆಟೋ ಹತ್ತುವ ಸಮಯದಲ್ಲಿ 296 ರೂ ತೋರಿಸುತ್ತಿತ್ತು, ಈಗ 390 ರೂ ಆಟೋ ಬಾಡಿಗೆ ಕೇಳ್ತಾ ಇದ್ದೀರಾ ಎಂದು ಪ್ರಶ್ನೆ ಮಾಡಿದ್ದಾಳೆ. ಈ ವೇಳೆಯಲ್ಲಿ ಆಟೋ ಅಪ್ಲಿಕೇಶನ್ ನಲ್ಲಿ ಎಷ್ಟು ತೋರಿಸುತ್ತಿದೆ ನೋಡಿ ಎಂದು ಆಟೋ ಚಾಲಕನು ತೋರಿಸಿದ್ದು, ಆದರೆ ಮಾತಿಗೆ ಮಾತು ಬೆಳೆದು ಈ ಜಗಳವು ಅತಿರೇಕಕ್ಕೆ ತಲುಪಿದೆ.
ಆಟೋ ಚಾಲಕನು ಏನೇ ಹೇಳಿದ್ರೂ ಕೂಡ ಕ್ಯಾರೇ ಎನ್ನದೇ ಹಿಂದಿ ಮಹಿಳೆಯೂ ಮಾತನಾಡಿದ್ದಾಳೆ. ಈ ವೇಳೆಯಲ್ಲಿ ಕೋಪಗೊಂಡ ಆಟೋ ಚಾಲಕನು ಕನ್ನಡದಲ್ಲಿ ಮಾತನಾಡು ಎಂದಿದ್ದಾನೆ. ಹೀಗೆನ್ನುತ್ತಿದ್ದಂತೆ ಸಿಟ್ಟಿನಿಂದ ಮಹಿಳೆಯೂ ನಾವು ಬೆಂಗಳೂರಿನ ಆರ್ಥಿಕತೆಗೆ ಕೊಡುಗೆ ನೀಡುತ್ತಿದ್ದೇವೆ, ನಿನಗೇನಾದರೂ ಗೊತ್ತಿದೆಯಾ ಎಂದು ಪ್ರಶ್ನಿಸಿರುವುದನ್ನು ಕಾಣಬಹುದು.