ಬೆಂಗಳೂರು: ಬೆಂಗಳೂರಿನಲ್ಲಿ ಪ್ರಿಯಕರನಿಂದಲೇ ಪ್ರಿಯತಮೆಯ ಬರ್ಬರ ಹತ್ಯೆಯಾಗಿದೆ. ಪ್ರಿಯಕರನೇ ಬರೋಬ್ಬರಿ 17 ಬಾರಿ ಇರಿದು ಹರಿಣಿಯನ್ನು ಹತ್ಯೆ ಮಾಡಿದ್ದಾನೆ. ಬೆಂಗಳೂರಿನ ಪೂರ್ಣ ಪ್ರಜ್ಞಾಲೇಔಟ್ ಹೋಟೆಲ್ ಓಯೋ ರೂಮ್ ನಲ್ಲಿ ಈ ಘಟನೆ ನಡೆದಿದೆ.
ವೃತ್ತಿಯಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಆಗಿರುವ ಯಶಸ್ ಹಾಗೂ ಇಬ್ಬರು ಮಕ್ಕಳ ತಾಯಿ ಹರಿಣಿ ಇಬ್ಬರೂ ಕೆಂಗೇರಿ ನಿವಾಸಿಗಳು. ಆರೋಪಿ ಯಶಸ್ ನಿನ್ನ ಜೊತೆ ಮಾತಾಡಬೇಕು ಬಾ ಎಂದು ಓಯೋ ರೂಂಗೆ ಕರೆದು ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ.
ಬೆಂಗಳೂರಿನ ಪೂರ್ಣ ಪ್ರಜ್ಞಾ ಲೇಔಟ್ನಲ್ಲಿ ಓಯೋ ರೂಮಿನಲ್ಲಿ ಹತ್ಯೆಗೀಡಾದ ಗೃಹಿಣಿ ಹರಿಣಿ ವಯಸ್ಸು 35 ಆದ್ರೂ ನೋಡೋಕೆ ರೂಪವತಿ. ಮನೆ ಕಡೆಯೂ ಸಾಕಷ್ಟು ಸ್ಥಿತಿವಂತರಾಗಿದ್ರು. ಕೋಟಿ ಕೋಟಿ ಆಸ್ತಿ ಇರೋ ಈ ಹರಿಣಿಗೆ ಊರ ಜಾತ್ರೆಯಲ್ಲಿ 25 ವರ್ಷದ ಟೆಕ್ಕಿ ಯಶಸ್ ಪರಿಚಯವಾಗಿದ್ದ. ಇದೇ ವೇಳೆ ಇಬ್ಬರ ಪರಿಚಯ ಸ್ನೇಹಕ್ಕೆ ತಿರುಗಿತ್ತು.
ನಿಮ್ಮ ಲ್ಯಾಪ್ ಟಾಪ್ ನಲ್ಲಿ ಬೇಗ ಚಾರ್ಜ್ ಕಡಿಮೆ ಆಗುತ್ತಾ!? ಹಾಗಿದ್ರೆ ಈ ರೀತಿ ಮಾಡಿ!
ಜಾತ್ರೆಯಲ್ಲೇ ನಂಬರ್ ಎಕ್ಸ್ಚೇಂಜ್ ಮಾಡಿಕೊಂಡು ಚಾಟಿಂಗ್, ಡೇಟಿಂಗ್ ಶುರು ಮಾಡಿದ್ರು. ಇವರಿಬ್ಬರ ಪ್ರೀತಿ ಮಂಚದವರೆಗೂ ತಲುಪಿತ್ತು. ಹೆಮ್ಮಿಗೆಪುರದ ಹರಿಣಿಯ ಗಂಡ ಸ್ಥಳೀಯ ಜಮಿನ್ದಾರ. ಹಣಕಾಸಿಗೆ ಕೊರತೆ ಇರ್ಲಿಲ್ಲ. ಇಬ್ಬರು ಹೆಣ್ಣು ಮಕ್ಕಳನ್ನ ಓದಿಸಿಕೊಂಡು ಹೆಂಡತಿಯನ್ನ ಚೆನ್ನಾಗಿ ನೋಡಿಕೊಂಡಿದ್ದನಂತೆ. ಇತ್ತಿಚೇಗೆ ದೊಡ್ಡ ಮನೆ ಕಟ್ಟಲು ಪಾಯ ಪೂಜೆ ಸಹ ಮಾಡಿದ್ರಂತೆ.
ಹೀಗಿರುವಾಗಲೇ ಪತ್ನಿ ಹರಿಣಿ ಹಾಗೂ ಯಶಸ್ ನಡುವಿನ ಅನೈತಿಕ ಸಂಬಂಧ ಗಂಡನಿಗೆ ಗೊತ್ತಾಗಿದೆ. ಗಂಡ ಪತ್ನಿಗೆ ಬುದ್ಧಿ ಹೇಳಿ ಹರಿಣಿಯ ಫೋನ್ ಕೂಡ ಕಿತ್ಕೊಂಡು ಮನೆಯಲ್ಲೇ ಕೂಡಿ ಹಾಕಿದ್ದರಂತೆ ಪತಿ ದಾಸೇಗೌಡ. ಇದಾದ ನಂತರ ಪತ್ನಿ ಸರಿ ಹೋಗ್ತಾಳೆ ಅಂತ ಹೊರಗಡೆ ಬಿಟ್ಟಿದ್ದಾನೆ.
ಈ ವೇಳೆ ಹರಿಣಿ ತನ್ನ ಬಾಯ್ಫ್ರೆಂಡ್ ಯಶಸ್ನ ಮತ್ತೆ ಸಂಪರ್ಕಿಸಿದ್ದಾಳೆ. ಇತ್ತ ಹರಿಣಿ ಸಂಪರ್ಕಕ್ಕೆ ಸಿಗದೇ ಹುಚ್ಚನಂತಾಗಿದ್ದ ಯಶಸ್, ಹರಿಣಿ ಸಿಕ್ಕರೇ ಸಾಯಿಸಲು ನಿರ್ಧಾರ ಮಾಡಿದ್ನಂತೆ. ಕೊಲೆ ಮಾಡೋ ಉದ್ದೇಶದಿಂದ ಚಾಕು ಕೂಡ ಖರೀದಿ ಮಾಡಿದ್ನಂತೆ.
ಇದೇ ಸಮಯಕ್ಕೆ ಹರಿಣಿ ಯಶಸ್ಗೆ ಕಾಲ್ ಮಾಡಿದ್ದು ಇಬ್ಬರು ಓಯೋ ರೂಮ್ನಲ್ಲಿ ಸೇರೋದಾಗಿ ಮಾತು ಕತೆ ನಡೆಸಿದ್ದಾರೆ. ಸುಬ್ರಹ್ಮಣ್ಯಪುರ ಠಾಣಾ ವ್ಯಾಪ್ತಿಯ ಓಯೊ ರೂಂ ನಲ್ಲಿ ಕಳೆದ ಶುಕ್ರವಾರ ಇಬ್ಬರೂ ಸೇರಿದ್ದಾರೆ. ಲೈಗಿಂಕ ಸಂಪರ್ಕ ಮುಗಿಸಿದ ಬಳಿಕ ಯಶಸ್ ಸೈಕೋ ವರ್ತನೆ ತಾಳಿದ್ದಾನೆ. ನನಗೆ ಸಿಕ್ಕವಳು ಬೇರೆ ಯಾರಿಗೂ ಸಿಗಬಾರದು ಅಂತ ಮೊದಲೇ ಪ್ಲಾನ್ ಮಾಡಿದಂತೆ ಚಾಕುನಿಂದ ಬರ್ಬರವಾಗಿ ಇರಿದು ಕೊಂದೇಬಿಟ್ಟಿದ್ದಾನೆ.
ನಂತರ ಟೆಕ್ಕಿ ತಾನೂ ಕೂಡ ಎದೆಗೆ ಚಾಕು ಚುಚ್ಚಿಕೊಂಡು ಆತ್ಮಹತ್ಯೆಗೆ ಪ್ರಯತ್ನ ಮಾಡಿದ್ದಾನೆ. ಆದ್ರೆ ನೋವಾಯ್ತು ಅಂತ ಚಾಕು ಅಲ್ಲೆ ಬಿಟ್ಟು ನೇರವಾಗಿ ಕೆಂಗೇರಿ ಠಾಣೆಗೆ ಹೋಗಿ ಕೊಲೆ ವಿಚಾರ ಹೇಳಿದ್ದಾನೆ.ಕೊನೆಗೆ ಕೆಂಗೇರಿ ಪೊಲೀಸ್ರು ಕೊಲೆ ನಡೆದ ಸ್ಥಳ ಸುಬ್ರಹ್ಮಣ್ಯಪುರ ಠಾಣಾವ್ಯಾಪ್ತಿಗೆ ಬರೋದಾಗಿ ಟೆಕ್ಕಿ ಯಶಸ್ನ ಪೊಲೀಸರಿಗೆ ಒಪ್ಪಿಸಿದ್ದಾರೆ.