Close Menu
Ain Live News
    Facebook X (Twitter) Instagram YouTube
    Friday, June 13
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ರಾಜಕೀಯ
    • ಜಿಲ್ಲೆ
    • ಸಿನಿಮಾ
    • ಲೈಫ್ ಸ್ಟೈಲ್
    • ಜ್ಯೋತಿಷ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    Facebook X (Twitter) Instagram YouTube
    Ain Live News

    ವಿಮಾನ ದುರಂತ: ಕೊಹ್ಲಿ, ರೋಹಿತ್ ಸೇರಿ ಹಲವು ಕ್ರಿಕೆಟಿಗರಿಂದ ಸಂತಾಪ!

    By AIN AuthorJune 12, 2025
    Share
    Facebook Twitter LinkedIn Pinterest Email
    Demo

    ಅಹಮದಾಬಾದ್‌ನಲ್ಲಿ ನಡೆದ ಏರ್ ಇಂಡಿಯಾ ವಿಮಾನ ಅಪಘಾತದಲ್ಲಿ 241 ಜನರು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ರಿಕೆಟ್ ಜಗತ್ತು ಕಂಬನಿ ಮಿಡಿದಿದೆ.

    ವಿಮಾನ ದುರಂತ: ಕರ್ನಾಟಕ ಮೂಲದ ಕೋ ಪೈಲಟ್ ಸಾವು!

    ಟೀಂ ಇಂಡಿಯಾದ ಸ್ಟಾರ್ ಬ್ಯಾಟ್ಸ್‌ಮನ್‌ಗಳಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಸೇರಿದಂತೆ ಕ್ರಿಕೆಟ್ ಜಗತ್ತು ಕೂಡ ಈ ಅವಘಡದ ಬಗ್ಗೆ ತಮ್ಮ ದುಃಖವನ್ನು ವ್ಯಕ್ತಪಡಿಸಿದೆ.

    ಈ ದುರಂತ ಇಡೀ ಭಾರತವನ್ನು ಬೆಚ್ಚಿಬೀಳಿಸಿದ್ದು, ಪ್ರಧಾನಿ ನರೇಂದ್ರ ಮೋದಿಯಿಂದ ಹಿಡಿದು ಶ್ರೀಸಾಮಾನ್ಯನವರೆಗೆ ಎಲ್ಲರೂ ಈ ಅಪಘಾತಕ್ಕೆ ಕಂಬನಿ ಮಿಡಿದಿದ್ದಾರೆ. ಭಾರತೀಯ ಕ್ರಿಕೆಟ್ ತಂಡದ ಏಕದಿನ ನಾಯಕ ಮತ್ತು ಸ್ಟಾರ್ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ ಅಪಘಾತದಲ್ಲಿ ಮೃತಪಟ್ಟವರಿಗೆ ಸಂತಾಪ ಸೂಚಿಸಿ, ಈ ಘಟನೆಯನ್ನು ಹೃದಯವಿದ್ರಾವಕ ಎಂದು ಬಣ್ಣಿಸಿದ್ದಾರೆ.

    ಟೀಂ ಇಂಡಿಯಾದ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಕೂಡ ಈ ದುರಂತದಿಂದ ತುಂಬಾ ದುಃಖಿತರಾಗಿದ್ದು, ಸಾಮಾಜಿಕ ಮಾಧ್ಯಮದ ಮೂಲಕ ತಮ್ಮ ಸಂತಾಪ ವ್ಯಕ್ತಪಡಿಸಿದ್ದಾರೆ. ಅಹಮದಾಬಾದ್‌ನಲ್ಲಿ ನಡೆದ ಅಪಘಾತದಿಂದ ಆಘಾತಕ್ಕೊಳಗಾಗಿದ್ದೇನೆ ಎಂದು ಕೊಹ್ಲಿ ಬರೆದುಕೊಂಡಿದ್ದಾರೆ.

    ಅದೇ ಸಮಯದಲ್ಲಿ, ಮಾಜಿ ಸ್ಟಾರ್ ಬ್ಯಾಟ್ಸ್‌ಮನ್ ಶಿಖರ್ ಧವನ್ ಈ ಅಪಘಾತದಲ್ಲಿ ಸಾವನ್ನಪ್ಪಿದವರಿಗೆ ಮತ್ತು ಅವರ ಕುಟುಂಬಗಳಿಗೆ ಸಂತಾಪ ಸೂಚಿಸಿದ್ದಾರೆ. ಇವರ ಜೊತೆಗೆ ಸ್ಟಾರ್ ವೇಗಿ ಇಶಾಂತ್ ಶರ್ಮಾ, ಹಾರ್ದಿಕ್ ಪಾಂಡ್ಯ, ಸೂರ್ಯಕುಮಾರ್ ಯಾದವ್, ಐಪಿಎಲ್ ಫ್ರಾಂಚೈಸ್ ಪಂಜಾಬ್ ಕಿಂಗ್ಸ್, ಗುಜರಾತ್ ಟೈಟನ್ಸ್ ಕೂಡ ಅಪಘಾತದ ಬಗ್ಗೆ ದುಃಖ ವ್ಯಕ್ತಪಡಿಸಿದ್ದಾರೆ.

    ಇನ್ನೂ ಅಹಮದಾಬಾದ್‌ನಲ್ಲಿ ನಡೆದ ಏರ್ ಇಂಡಿಯಾ ವಿಮಾನ ಅಪಘಾತದ ಸುದ್ದಿ ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ. ಜೂನ್ 12, ಗುರುವಾರ, ಅಹಮದಾಬಾದ್ ವಿಮಾನ ನಿಲ್ದಾಣದಿಂದ ಲಂಡನ್‌ಗೆ ಹೊರಟ್ಟಿದ್ದ ಏರ್ ಇಂಡಿಯಾ ವಿಮಾನವು ಟೇಕ್ ಆಫ್ ಆದ 5 ನಿಮಿಷಗಳಲ್ಲಿ ಭೂಮಿಗಪ್ಪಳಿಸಿತು. ಈ ದುರಂತದಲ್ಲಿ 241 ಪ್ರಯಾಣಿಕರು ಸಾವನ್ನಪ್ಪಿದ್ದು, ಏಕೈಕ ಪ್ರಯಾಣಿಕ ಬದುಕುಳಿದಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ಆದಾಗ್ಯೂ 200 ಕ್ಕೂ ಅಧಿಕ ಪ್ರಯಾಣಿಕರನ್ನು ಬಲಿ ತೆಗೆದುಕೊಂಡ ಈ ಭಯಾನಕ ಘಟನೆ ಇಡೀ ಭಾರತವನ್ನೇ ಶೋಕ ಸಾಗರದಲ್ಲಿ ಮುಳುಗಿಸಿದೆ.

    Demo
    Share. Facebook Twitter LinkedIn Email WhatsApp

    Related Posts

    ಬೆಂಗಳೂರಿನ ಕ್ರಿಕೆಟ್ ವ್ಯವಸ್ಥೆ ಮೇಲೆ ಕೆಟ್ಟ ಹೆಸರು ಬಂದಿದೆ: ಕಾಲ್ತುಳಿತಕ್ಕೆ ಮೊಯ್ಲಿ ಅಸಮಾಧಾನ!

    June 13, 2025

    ವಿಮಾನದಲ್ಲಿ ಪ್ರಯಾಣಿಸೋ ಮುನ್ನ ಇದು ತಿಳಿದಿರಲಿ: ಈ ಸೀಟಲ್ಲಿ ಕೂರೋದು ಸೇಫ್!

    June 13, 2025

    ನಾವು ಆ ಮೂರು ದೇಶಗಳ ವಿದೇಶಾಂಗ ಸಚಿವರೊಂದಿಗೆ ಸಂಪರ್ಕದಲ್ಲಿದ್ದೇವೆ: ಜೈಶಂಕರ್

    June 13, 2025

    WTC Final: ವಿಮಾನ ದುರಂತ ಸಂತ್ರಸ್ಥರಿಗೆ ಕಪ್ಪು ಪಟ್ಟಿ ಧರಿಸಿ ಕ್ರಿಕೆಟಿಗರ ಸಂತಾಪ..!

    June 13, 2025

    ವಿಮಾನ ದುರಂತದ ಬಗ್ಗೆ ಭಯಾನಕ ಭವಿಷ್ಯ ನುಡಿದಿತ್ತಾ ಆ ಪತ್ರಿಕೆ? ವೈರಲ್‌ ಫೋಟೋ ಹಿಂದಿದೆ ರೋಚಕ ಕಥೆ!

    June 13, 2025

    India vs England: ತಾಯಿಗೆ ಹೃದಯಾಘಾತ: ಭಾರತಕ್ಕೆ ಮರಳಿದ ಗೌತಮ್ ಗಂಭೀರ್!

    June 13, 2025

    Air India Flight Crash: ಮರದ ಕೆಳಗೆ ಮಲಗಿದ್ದ 14 ವರ್ಷದ ಬಾಲಕ ಸಾವು..!

    June 13, 2025

    ವಿಮಾನ ದುರಂತದಲ್ಲಿ ನರ್ಸ್ ಸಾವು: ಉಪ ತಹಶೀಲ್ದಾರ್ ಅಮಾನತು – ಯಾಕೆ ಗೊತ್ತಾ..?

    June 13, 2025

    IAF Apache: ವಾಯುಪಡೆ ಹೆಲಿಕಾಪ್ಟರ್’ನಲ್ಲಿ ತಾಂತ್ರಿಕ ದೋಷ: ತುರ್ತು ಭೂಸ್ಪರ್ಶ

    June 13, 2025

    Plane Crash: ನಾನು ಬದುಕುಳಿದಿರುವುದು ನಿಜಕ್ಕೂ ಆಶ್ಚರ್ಯ ತಂದಿದೆ: ದುರಂತದಲ್ಲಿ ಬದುಕುಳಿದ ಏಕೈಕ ವ್ಯಕ್ತಿ ಹೇಳಿದ್ದೇನು..?

    June 13, 2025

    Ahmedabad plane crash: ತಂದೆಯ ಅಂತ್ಯ ಸಂಸ್ಕಾರ ಮುಗಿಸಿ ಹೊರಟಿದ್ದ ಮಗನ ದಾರುಣ ಅಂತ್ಯ..!

    June 13, 2025

    6 ತಿಂಗಳಲ್ಲಿ 6 ಘೋರ ದುರಂತಗಳು: ಏನಾಗಿದೆ ಈ ದೇಶಕ್ಕೆ?

    June 13, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.