ಬೆಂಗಳೂರು:- ರಾಜಧಾನಿ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಕಾಂಗ್ರೆಸ್ ನಾಯಕ ಹೆಚ್.ಎಂ ರೇವಣ್ಣ ಅವರ ಪತ್ನಿ ವಿಧಿವಶರಾಗಿದ್ದಾರೆ. ವತ್ಸಲಾ (70) ಮೃತ ದುರ್ದೈವಿ.
ಇತೀಚೆಗೆ ಅವರು ಉತ್ತರ ಭಾರತ ಪ್ರವಾಸಕ್ಕೆ ತೆರಳಿದ್ದಾಗ ಅವರ ಕೈಗೆ ಏಟಾಗಿತ್ತು. ಇದಕ್ಕೆ ಚಿಕಿತ್ಸೆಗಾಗಿ ಅವರು ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಅವರ ಆರೋಗ್ಯ ಸುಧಾರಿಸಿರಲಿಲ್ಲ ಗುರುವಾರ ನಿಧನರಾಗಿದ್ದಾರೆ.
ಹೆಚ್.ಎಂ ರೇವಣ್ಣ ಅವರು ಪುತ್ರರಾದ ಶಶಾಂಕ್ ಹಾಗೂ ಅನೂಪ್ ಅವರನ್ನು ಅಗಲಿದ್ದಾರೆ.