Close Menu
Ain Live News
    Facebook X (Twitter) Instagram YouTube
    Saturday, June 14
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ರಾಜಕೀಯ
    • ಜಿಲ್ಲೆ
    • ಸಿನಿಮಾ
    • ಲೈಫ್ ಸ್ಟೈಲ್
    • ಜ್ಯೋತಿಷ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    Facebook X (Twitter) Instagram YouTube
    Ain Live News

    Ahmedabad ದುರಂತ ಮಾಸುವೇ ಮುನ್ನವೇ Air India ವಿಮಾನಕ್ಕೆ ಬಾಂಬ್ ಬೆದರಿಕೆ..! ತುರ್ತು ಭೂಸ್ಪರ್ಶ

    By Author AINJune 13, 2025
    Share
    Facebook Twitter LinkedIn Pinterest Email
    Demo

    ನವದೆಹಲಿ: ನಿನ್ನೆಯಷ್ಟೆ ಲಂಡನ್‌ಗೆ 242 ಪ್ರಯಾಣಿಕರು ಮತ್ತು ಸಿಬ್ಬಂದಿಯನ್ನು ಹೊತ್ತೊಯ್ಯುತ್ತಿದ್ದ ಏರ್ ಇಂಡಿಯಾ ವಿಮಾನವು ಅಹಮದಾಬಾದ್​ನ ವೈದ್ಯಕೀಯ ಕಾಲೇಜು ಸಂಕೀರ್ಣಕ್ಕೆ ಅಪ್ಪಳಿಸಿ ದುರಂತ ಸಂಭವಿಸಿದೆ. ಇದರ ಬೆನ್ನಲ್ಲೇ ಥಾಯ್ಲೆಂಡ್‌ನ ಫುಕೆಟ್ ದ್ವೀಪದಿಂದ ದೆಹಲಿಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನಕ್ಕೆ ಬಾಂಬ್ ಬೆದರಿಕೆ ಹಾಕಲಾಗಿದೆ.

    ಹೌದು ವಿಮಾನ AI 379 ಲ್ಯಾಂಡ್ ಆಗಿದ್ದು, ಹಾರಾಟ ಮಾಡುತ್ತಿದ್ದ ವೇಳೆ ಈ ಬೆದರಿಕೆ ಬಂದಿದೆ. ಈ ಕಾರಣದಿಂದ ತಕ್ಷಣ ಭೂಸ್ಪರ್ಶಕ್ಕೆ ಮನವಿ ಮಾಡಲಾಗಿದೆ. ಗುಜರಾತಿನ ಅಹಮದಾಬಾದ್‌ ವಿಮಾನ ನಿಲ್ದಾಣದಲ್ಲಿ ನಡೆದ ವಿಮಾನ ದುರಂತದ ಬೆನ್ನಲ್ಲೇ ಏರ್​​ ಇಂಡಿಯಾ ವಿಮಾನಕ್ಕೆ ಬಾಂಬ್​​​ ಬೆದರಿಕೆ ಬಂದಿದೆ. ಇದೀಗ ಈ ವಿಚಾರ ಸಾರ್ವಜನಿಕರಲ್ಲಿ ಹಾಗೂ ಪ್ರಯಾಣಿಕರಲ್ಲಿ ಆತಂಕ ಸೃಷ್ಟಿಸಿದೆ.

    ನಿತ್ಯ ಬೆಳಿಗ್ಗೆ ಎದ್ದ ಕೂಡಲೇ ಎರಡೇ ಎರಡು ‘ನೆನೆಸಿಟ್ಟ ಬಾದಾಮಿ’ ತಿಂದ್ರೆ ಎಷ್ಟೆಲ್ಲಾ ಬೆನಿಫಿಟ್ ಗೊತ್ತಾ!?

    ಇದೀಗ ಬಾಂಬ್​​ ಬೆದರಿಕೆಯ ನಂತರ ಏರ್​​ ಇಂಡಿಯಾ ವಿಮಾನ ಸಿಬ್ಬಂದಿಗಳು ವಿಮಾನ AI 379ನಿಂದ ಪ್ರಯಾಣಿಕರನ್ನು ಹೊರಕ್ಕೆ ಕರದುಕೊಂಡು ಬಂದಿದ್ದಾರೆ ಎಂದು ಥೈಲ್ಯಾಂಡ್ ವಿಮಾನ ನಿಲ್ದಾಣದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಆದರೆ ಪ್ರಾಥಮಿಕ ಶೋಧದ ನಂತರ ಸಂಬಂಧಪಟ್ಟ ಏರ್ ಇಂಡಿಯಾ ವಿಮಾನದೊಳಗೆ ಯಾವುದೇ ಬಾಂಬ್ ಪತ್ತೆಯಾಗಿಲ್ಲ. ವಿಮಾನದಲ್ಲಿ 156 ಪ್ರಯಾಣಿಕರಿದ್ದರು. ಈ ವೇಳೆ ಯಾರು ಭಯಪಡಬೇಡಿ ವಿಮಾನಕ್ಕೆ ಬಾಂಬ್ ಬೆದರಿಕೆ ಬಂದಿದೆ ಎಂದು ಪ್ರಯಾಣಿಕರಿಗೂ ಹೇಳಿದ್ದಾರೆ.

    ಬೆಳಿಗ್ಗೆ 9:30 ಕ್ಕೆ (0230) ಫುಕೆಟ್ ವಿಮಾನ ನಿಲ್ದಾಣದಿಂದ ಭಾರತದ ದೆಹಲಿಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೊರಟ್ಟಿತ್ತು. ಅಂಡಮಾನ್ ಸಮುದ್ರದ ಸುತ್ತಲೂ ವಿಶಾಲವಾದ ಲೂಪ್ ಮಾಡಿ ಥಾಯ್ ದ್ವೀಪದಲ್ಲಿ ಮತ್ತೆ ಇಳಿಯಿತು ಎಂದು ಫ್ಲೈಟ್ ಟ್ರ್ಯಾಕರ್ ಫ್ಲೈಟ್‌ರಾಡರ್ 24 ತಿಳಿಸಿದೆ. ಬಾಂಬ್ ಬೆದರಿಕೆಯ ಕುರಿತು AOT ಯಾವುದೇ ವಿವರಗಳನ್ನು ನೀಡಿಲ್ಲ ಎಂದು ಹೇಳಿದೆ.

     

     

    Demo
    Share. Facebook Twitter LinkedIn Email WhatsApp

    Related Posts

    ದೇಶದಲ್ಲಿ ಕೊರೊನಾ ಸಕ್ರಿಯ ಪ್ರಕರಣಗಳು 7,400 ಕ್ಕೆ ಏರಿಕೆ..! 87 ಮಂದಿ ಸಾವು

    June 14, 2025

    11 ಸೀಟ್ ನಿಗೂಢತೆ: ವಿಮಾನ ದುರಂತದಲ್ಲಿ ವಿಶ್ವಾಸ್​ ಕುಮಾರ್ ರೀತಿ ಬದುಕಿ ಬಂದಿದ್ದ ನಟ..ಯಾರದು?

    June 14, 2025

    PM Modi: ನಾಳೆಯಿಂದ 3 ದಿನ ಕೆನಡಾದಲ್ಲಿ ಜಿ7 ಶೃಂಗಸಭೆ: ಪ್ರಧಾನಿ ಮೋದಿ ಭಾಗಿ

    June 14, 2025

    USA President: ಪರಿಸ್ಥಿತಿ ಕೈ ಮೀರುವ ಮುನ್ನ ಒಪ್ಪಂದಕ್ಕೆ ಬನ್ನಿ: ಇರಾನ್’ಗೆ ಎಚ್ಚರಿಕೆ ಕೊಟ್ಟ ಟ್ರಂಪ್

    June 14, 2025

    ಏರ್ ಇಂಡಿಯಾ ವಿಮಾನ ದುರಂತ: ಕಾರಣ ಪತ್ತೆ ಹಚ್ಚಲು ಉನ್ನತ ಮಟ್ಟದ ಸಮಿತಿ ರಚನೆ!

    June 14, 2025

    Air India Plane Crash: ಏರ್ ಇಂಡಿಯಾ ದುರಂತ: ಮೃತರ ಸಂಖ್ಯೆ 274ಕ್ಕೆ ಏರಿಕೆ

    June 14, 2025

    16 ನೇ ಹಣಕಾಸಿನ ಆಯೋಗದ ಸಭೆಯಲ್ಲಿ CM ಸಿದ್ದರಾಮಯ್ಯ ಭಾಗಿ: ರಾಜ್ಯದ ಪ್ರಸ್ತಾವನೆ ಸಲ್ಲಿಕೆ!

    June 13, 2025

    ವಿಮಾನದಲ್ಲಿ ಪ್ರಯಾಣಿಸೋ ಮುನ್ನ ಇದು ತಿಳಿದಿರಲಿ: ಈ ಸೀಟಲ್ಲಿ ಕೂರೋದು ಸೇಫ್!

    June 13, 2025

    ನಾವು ಆ ಮೂರು ದೇಶಗಳ ವಿದೇಶಾಂಗ ಸಚಿವರೊಂದಿಗೆ ಸಂಪರ್ಕದಲ್ಲಿದ್ದೇವೆ: ಜೈಶಂಕರ್

    June 13, 2025

    ವಿಮಾನ ದುರಂತದ ಬಗ್ಗೆ ಭಯಾನಕ ಭವಿಷ್ಯ ನುಡಿದಿತ್ತಾ ಆ ಪತ್ರಿಕೆ? ವೈರಲ್‌ ಫೋಟೋ ಹಿಂದಿದೆ ರೋಚಕ ಕಥೆ!

    June 13, 2025

    Air India Flight Crash: ಮರದ ಕೆಳಗೆ ಮಲಗಿದ್ದ 14 ವರ್ಷದ ಬಾಲಕ ಸಾವು..!

    June 13, 2025

    ವಿಮಾನ ದುರಂತದಲ್ಲಿ ನರ್ಸ್ ಸಾವು: ಉಪ ತಹಶೀಲ್ದಾರ್ ಅಮಾನತು – ಯಾಕೆ ಗೊತ್ತಾ..?

    June 13, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.