Close Menu
Ain Live News
    Facebook X (Twitter) Instagram YouTube
    Saturday, June 14
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ರಾಜಕೀಯ
    • ಜಿಲ್ಲೆ
    • ಸಿನಿಮಾ
    • ಲೈಫ್ ಸ್ಟೈಲ್
    • ಜ್ಯೋತಿಷ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    Facebook X (Twitter) Instagram YouTube
    Ain Live News

    ಬೆಂಗಳೂರಿನ ಕ್ರಿಕೆಟ್ ವ್ಯವಸ್ಥೆ ಮೇಲೆ ಕೆಟ್ಟ ಹೆಸರು ಬಂದಿದೆ: ಕಾಲ್ತುಳಿತಕ್ಕೆ ಮೊಯ್ಲಿ ಅಸಮಾಧಾನ!

    By AIN AuthorJune 13, 2025
    Share
    Facebook Twitter LinkedIn Pinterest Email
    Demo

    ಬೆಂಗಳೂರು:- RCB ವಿಜಯೋತ್ಸವದ ವೇಳೆ ಕಾಲ್ತುಳಿತದಿಂದ 11 ಮಂದಿ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಘಟನೆ ಕುರಿತು ಸಿಎಂ ಸಿದ್ದರಾಮಯ್ಯಗೆ ಮಾಜಿ ಸಿಎಂ ವೀರಪ್ಪ ಮೊಯ್ಲಿ ಪತ್ರ ಬರೆದಿದ್ದಾರೆ.

    ಲಂಚಕ್ಕೆ ಬೇಡಿಕೆ: ಸರ್ಕಾರಿ ಅಧಿಕಾರಿ ಹಾಗೂ ಕಂಪ್ಯೂಟರ್ ಆಪರೇಟರ್ ಲೋಕಾ ಬಲೆಗೆ!

    ಇಂದು ಸಿಎಂ ಸಿದ್ದರಾಮಯ್ಯ ಅವರಿಗೆ ಎರಡು ಪುಟಗಳ ಪತ್ರ ಬರೆದಿರುವ ವೀರಪ್ಪ ಮೊಯ್ಲಿ, ‘ಕಾಲ್ತುಳಿತ ಪ್ರಕರಣ ಸಂಬಂಧ ಜಿಲ್ಲಾಧಿಕಾರಿ, ಸಿಐಡಿ ಹಾಗೂ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಮೂರು ತನಿಖೆ ನಡೆಸಲಾಗುವುದು ಎಂದು ಪ್ರಕಟಿಸಿರುವುದು ಸರಿಯಲ್ಲ. ಇದರಿಂದ ಸರಕಾರದ ಆಡಳಿತಕ್ಕೆ ಕೆಟ್ಟ ಹೆಸರು ಬರುವ ಸಾಧ್ಯತೆಗಳಿವೆ. ಹೀಗಾಗಿ ಈ ಬಗ್ಗೆ ಪುನರ್ ಪರಿಶೀಲನೆ ನಡೆಸಬೇಕು’ ಎಂದು ಮನವಿ ಮಾಡಿದ್ದಾರೆ.

    ಜೂನ್ 4 ರಂದು ನಡೆದಿದ್ದ ದುರ್ಘಟನೆ ನಮ್ಮ ಸರಕಾರಕ್ಕೆ, ಬೆಂಗಳೂರಿಗರಿಗೆ, ಕ್ರಿಕೆಟ್ ಪ್ರೇಮಿಗಳಿಗೆ ಆಘಾತ ಉಂಟುಮಾಡಿದೆ. ಘಟನೆ ಬಗ್ಗೆ ಸಾರ್ವಜನಿಕರಿಂದ ಅಥವಾ ಸರಕಾರದಿಂದ ವೈಪರೀತ್ಯದ ಪ್ರತಿಕ್ರಿಯೆ ಬಂದಿದೆ. ಕಾಲ್ತುಳಿತದ ಆಕಸ್ಮಿಕ ಘಟನೆಯಿಂದ ಅನೇಕ ದಶಕಗಳಿಂದ ಗಳಿಸಿದ ಕಾಂಗ್ರೆಸ್ ಪಕ್ಷದ ವರ್ಚಸ್ಸನ್ನು ಅಳಿಸಿಹಾಕಬಾರದು. ಈ ಬಗ್ಗೆ ವಿಶೇಷವಾದ ಎಚ್ಚರಿಕೆಯಿಂದ ಕ್ರಮ ಕೈಗೊಳ್ಳುವ ಅನಿವಾರ್ಯತೆಯಿದೆ. ದುರ್ಘಟನೆ ಹಿನ್ನೆಲೆಯಲ್ಲಿ ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಬೆಂಗಳೂರಿನ ಕ್ರಿಕೆಟ್ ವ್ಯವಸ್ಥೆಯ ಮೇಲೆಯೇ ಕೆಟ್ಟ ಹೆಸರು ಬಂದಿದೆ. ಆ ಕೆಟ್ಟ ಹೆಸರನ್ನು ಅಳಿಸಿಹಾಕಬೇಕು’ ಎಂದು ವೀರಪ್ಪ ಮೊಯ್ಲಿ ಸಲಹೆ ನೀಡಿದ್ದಾರೆ.

    ‘ಆರ್‌ಸಿಬಿ ವಿಜಯೋತ್ಸವವನ್ನು ಸಂಭ್ರಮಿಸುವ ಬದಲು ಬೆಟ್ಟು ತೋರಿಸುವ ಪ್ರಕ್ರಿಯೆ ನಡೆದಿದೆ, ಇದು ಸಲ್ಲದು. ಕಾಲ್ತುಳಿತದಲ್ಲಿ ಅಸುನೀಗಿದವರ ಕುಟುಂಬದ ಸದಸ್ಯರು ಹಾಗೂ ಗಾಯಾಳುಗಳಲ್ಲಿ ವಿಶ್ವಾಸ ಮೂಡಿಸಬೇಕು. ಅಲ್ಲದೆ, ಕ್ರಿಕೆಟ್ ಪ್ರೇಮಿಗಳಲ್ಲಿಯೂ ಸುರಕ್ಷತೆಯ ವಾತಾವರಣ ನಿರ್ಮಿಸುವ ನಿಟ್ಟಿನಲ್ಲಿ ಕ್ಷಿಪ್ರ ಗತಿಯಲ್ಲಿ ಪ್ರಕರಣದ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು’ ಎಂದು ವೀರಪ್ಪ ಮೊಯ್ಲಿ ಕೋರಿದ್ದಾರೆ.

    Demo
    Share. Facebook Twitter LinkedIn Email WhatsApp

    Related Posts

    ಬೆಂಗಳೂರು| ಬ್ಯಾಡ್ಮಿಂಟನ್ ಕೋರ್ಟ್ ಹಾಗೂ ವಿಕ್ಟರ್ ಬ್ರ್ಯಾಂಡ್ ಸ್ಟೋರ್ ಉದ್ಘಾಟನೆ!

    June 14, 2025

    ಪ್ರಯಾಣಿಕರ ಗಮನಕ್ಕೆ: ವಿಮಾನ ಹಾರಾಟದ ವೇಳೆ ಫೋನ್ ಫ್ಲೈಟ್ ಮೋಡ್‌ನಲ್ಲಿ ಇಡೋದು ಯಾಕೆ?

    June 14, 2025

    Caste Census Karnataka: ರಾಜ್ಯದ ಜಾತಿಗಣತಿ ಉದ್ದೇಶ, ದುರುದ್ದೇಶ ಬೇರೆಯೇ ಇದೆ – ನಿಖಿಲ್ ಕುಮಾರಸ್ವಾಮಿ ಆರೋಪ

    June 14, 2025

    WTC Final: 27 ವರ್ಷಗಳ ಕನಸು ಕೊನೆಗೂ ನನಸು: ಚಾಂಪಿಯನ್ ​ಶಿಪ್​ ಟ್ರೋಫಿಗೆ ಮುತ್ತಿಕ್ಕಿದ ದಕ್ಷಿಣ ಆಫ್ರಿಕಾ

    June 14, 2025

    ಸೂಪರ್‌ ಸ್ಟಾರ್ ರಜನಿಕಾಂತ್‌ ಸಂಬಂಧಿ ಜೊತೆ ಎಸ್ಆರ್‌ಎಚ್‌ ಓನರ್ ಕಾವ್ಯಾ ಮಾರನ್ ಕಲ್ಯಾಣ? ‌‌

    June 14, 2025

    Cricket: ಇನ್ನುಂದೆ ಇಂತಹ ಕ್ಯಾಚ್’ಗಳಿಗೆ ಬೆಲೆ ಇಲ್ವಾ..!? ಆಟಗಾರರಿಗೆ ಬಿಗ್ ಶಾಕ್ ಕೊಟ್ಟ ICC

    June 14, 2025

    ಬೆಂಗಳೂರಿನ 30 ವರ್ಷದ ಹಳೆ ದೇಗುಲಕ್ಕೆ ಭೇಟಿ ಕೊಟ್ಟ ನಟಿ ಕಂಗನಾ ರನೌತ್‌!

    June 14, 2025

    Father’s Day 2025: ಅಪ್ಪನಿಗೆ ಹೇಗೆಲ್ಲಾ ಶುಭಾಶಯ ತಿಳಿಸಬೇಕು ಅಂದುಕೊಂಡಿದ್ದೀರಾ? ಇಲ್ಲಿದೆ ನೋಡಿ ಟಿಪ್ಸ್

    June 14, 2025

    BMTC ಬಸ್ ಚಾಲಕನಿಗೆ ಚಪ್ಪಲಿಯಿಂದ ಹಲ್ಲೆ ನಡೆಸಿದ ಮಹಿಳೆ! ಯಾಕೆ ಗೊತ್ತಾ..?

    June 14, 2025

    ಕಾಂಗ್ರೆಸ್ ಸರ್ಕಾರ ತನ್ನ ವೈಫಲ್ಯ ಮುಚ್ಚಿಕೊಂಡು ಕೇಂದ್ರದ ಮೇಲೆ ಆರೋಪ: ಬಿ.ವೈ ವಿಜಯೇಂದ್ರ

    June 14, 2025

    ಮಡೆನೂರು ಮನು ಮತ್ತೊಂದು ಆಡಿಯೋ ವೈರಲ್…ಏನಿದೆ ಆಡಿಯೋದಲ್ಲಿ?

    June 14, 2025

    ಪ್ಯಾನ್ ಕಾರ್ಡ್ ಇರುವವರಿಗೆ ಎಚ್ಚರಿಕೆ.. ಹೀಗೆ ಮಾಡದಿದ್ದರೆ ನಿಮಗೆ ಬೀಳಲಿದೆ 10 ಸಾವಿರ ರೂ. ದಂಡ!

    June 14, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.