Close Menu
Ain Live News
    Facebook X (Twitter) Instagram YouTube
    Sunday, June 15
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ರಾಜಕೀಯ
    • ಜಿಲ್ಲೆ
    • ಸಿನಿಮಾ
    • ಲೈಫ್ ಸ್ಟೈಲ್
    • ಜ್ಯೋತಿಷ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    Facebook X (Twitter) Instagram YouTube
    Ain Live News

    Ahmedabad Plane Crash: ವಿಮಾನ ಮೇಲಕ್ಕೆ ಏರುತ್ತಿಲ್ಲ..: ಕ್ಯಾಪ್ಟನ್ ಸುಮಿತ್ ಕೊನೆ 5 ಸೆಕೆಂಡ್’ಗಳ ಆಡಿಯೋ ವೈರಲ್

    By Author AINJune 14, 2025
    Share
    Facebook Twitter LinkedIn Pinterest Email
    Demo

    ನವದೆಹಲಿ: ಗುಜರಾತ್ ನ ಅಹಮದಾಬಾದ್ ನಿಂದ ಲಂಡನ್‌ಗೆ ತೆರಳುತ್ತಿದ್ದ ಏರ್ ಇಂಡಿಯಾ-171 ಬೋಯಿಂಗ್ 787 ಡ್ರೀಮ್‌ಲೈನರ್ ವಿಮಾನ ಪತನಗೊಂಡಿರುವುದು ದೇಶ ಮತ್ತು ಇಡೀ ವಾಯುಯಾನ ಜಗತ್ತನ್ನೇ ಬೆಚ್ಚಿಬೀಳಿಸಿದೆ. ಗುರುವಾರ ಮಧ್ಯಾಹ್ನ ಅಹಮದಾಬಾದ್‌ನ ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಟ ಕೆಲವೇ ಕ್ಷಣಗಳಲ್ಲಿ ವಿಮಾನವು ಮೇಘನದಿ ನಗರ ಪ್ರದೇಶದಲ್ಲಿರುವ ವೈದ್ಯಕೀಯ ಕಾಲೇಜಿನ ಆವರಣದ ಮೇಲೆ ಅಪ್ಪಳಿಸಿತು.

    ನಿಮ್ಮ ಮನೆಯಲ್ಲಿ ಸೊಳ್ಳೆಗಳ ಕಾಟ ಜಾಸ್ತಿ ಆಗಿದ್ಯಾ!? ಹಾಗಿದ್ರೆ ಹೀಗೆ ಮಾಡಿ!

    ಇನ್ನೂ ವಿಮಾನ ಪತನವಾಗುವ ಮೊದಲು ಪೈಲಟ್ ಎಟಿಸಿಗೆ ‘ಮೇಡೇ’ ಸಂದೇಶ (ಅಪಾಯವನ್ನು ಸೂಚಿಸುವ ಸಂದೇಶ) ಕಳುಹಿಸಿದ್ದರು. ಅಪಘಾತಕ್ಕೀಡಾದ ವಿಮಾನವನ್ನು ಕ್ಯಾಪ್ಟನ್ ಸುಮಿತ್ ಸಭರ್ವಾಲ್ ಮತ್ತು ಕಮಾಂಡರ್ ಕ್ಲೈವ್ ಕುಂದರ್ ನಿರ್ವಹಿಸುತ್ತಿದ್ದರು. ವಿಮಾನವು ಅಹಮದಾಬಾದ್​ ರನ್​​​ವೇ 23 ರಿಂದ ಮಧ್ಯಾಹ್ನ 1:39 ಕ್ಕೆ ಹೊರಟಿತ್ತು. ಕೆಲವೇ ನಿಮಿಷಗಳಲ್ಲಿ ಎಟಿಸಿಗೆ ‘ಮೇಡೇ’ ಸಂದೇಶ ಬಂದಿತು.

    ಪೈಲಟ್ ಸುಮಿತ್ ಸಭರ್ವಾಲ್ ಅವರು ಕೊನೆಯದಾಗಿ, ‘ಮೇಡೇ, ಮೇಡೇ, ಮೇಡೇ’ ಎಂದು ಸಂದೇಶ ಕಳುಹಿಸಿದ್ದರು. ಅಲ್ಲದೆ, ‘ಟೇಕಾಫ್​ಗೆ ಸಾಕಷ್ಟು ಪ್ರೆಷರ್ ಸಿಗುತ್ತಿಲ್ಲ. ವಿದ್ಯುತ್ ಪೂರೈಕೆ ಕಡಿಮೆಯಾಗುತ್ತಿದೆ, ವಿಮಾನ ಟೇಕ್ ಆಫ್ ಆಗುತ್ತಿಲ್ಲ, ನಾವು ಬದುಕುಳಿಯುವುದಿಲ್ಲ’ ಎಂದು ಹೇಳಿದ್ದರು.

    ಆದರೆ ನಂತರ ವಿಮಾನವು ಎಟಿಸಿ ಮಾಡಿದ ಕರೆಗಳಿಗೆ ಪ್ರತಿಕ್ರಿಯಿಸಲಿಲ್ಲ. ಟೇಕಾಫ್ ಆದ ಕೆಲವೇ ಕ್ಷಣಗಳಲ್ಲಿ ವಿಮಾನವು ಏರ್​​​ಪೋರ್ಟ್​ ಪರಿಧಿಯ ಹೊರಗೆ ವೈದ್ಯಕೀಯ ಕಾಲೇಜು ಕಟ್ಟಡಕ್ಕೆ ಅಪ್ಪಳಿಸಿತು. ಅಪಘಾತದ ಸ್ಥಳದಿಂದ ಭಾರೀ ಕಪ್ಪು ಹೊಗೆ ಬರುತ್ತಿರುವುದು ಕಂಡುಬಂದಿತು. ಪೈಲಟ್ ಅವರ ಕೊನೆಯ ಮಾತುಗಳ ನಂತರ ವಿಮಾನ ಅಪಘಾತಕ್ಕೀಡಾಯಿತು.

    Demo
    Share. Facebook Twitter LinkedIn Email WhatsApp

    Related Posts

    ಮತ್ತೊಂದು ವಿಮಾನ ಅಪಘಾತ: ಕೇದಾರನಾಥಕ್ಕೆ ಹೋಗುತ್ತಿದ್ದ ಹೆಲಿಕಾಪ್ಟರ್​ ಪತನ – 6 ಮಂದಿ ಸಾವು!

    June 15, 2025

    ಗೋಲ್ಡ್ ಪ್ರಿಯರಿಗೆ ಶಾಕ್: ನಿಲ್ಲದ ಚಿನ್ನದ ಬೆಲೆ ಏರಿಕೆ; ಇಲ್ಲಿದೆ ಇಂದಿನ ದರಪಟ್ಟಿ!

    June 15, 2025

    ವಿಮಾನ ದುರಂತ: ಅಹಮದಾಬಾದ್ ಜನರಲ್ ಆಸ್ಪತ್ರೆಯಲ್ಲಿ ಗಾಯಾಳುಗಳ ಆರೋಗ್ಯ ವಿಚಾರಿಸಿದ ಕಾಂಗ್ರೆಸ್ ನಾಯಕರು!

    June 14, 2025

    ಭಾರೀ ಮಳೆ: ಕೇರಳದ 5 ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಣೆ!

    June 14, 2025

    ಪ್ರಯಾಣಿಕರ ಗಮನಕ್ಕೆ: ವಿಮಾನ ಹಾರಾಟದ ವೇಳೆ ಫೋನ್ ಫ್ಲೈಟ್ ಮೋಡ್‌ನಲ್ಲಿ ಇಡೋದು ಯಾಕೆ?

    June 14, 2025

    Ahmedabad Plane Crash: ಎರಡು ಬಾರಿ ಲಂಡನ್ ಟಿಕೆಟ್ ರದ್ದುಗೊಳಿಸಿದ್ದ ವಿಜಯ್ ರೂಪಾನಿ..!

    June 14, 2025

    Axiom-4 mission: ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ ಬಾಹ್ಯಾಕಾಶ ಪ್ರಯಾಣ ಯಾವಾಗ ಗೊತ್ತಾ..? ಇಲ್ಲಿದೆ ಉತ್ತರ

    June 14, 2025

    ಪ್ಯಾನ್ ಕಾರ್ಡ್ ಇರುವವರಿಗೆ ಎಚ್ಚರಿಕೆ.. ಹೀಗೆ ಮಾಡದಿದ್ದರೆ ನಿಮಗೆ ಬೀಳಲಿದೆ 10 ಸಾವಿರ ರೂ. ದಂಡ!

    June 14, 2025

    ದೇಶದಲ್ಲಿ ಕೊರೊನಾ ಸಕ್ರಿಯ ಪ್ರಕರಣಗಳು 7,400 ಕ್ಕೆ ಏರಿಕೆ..! 87 ಮಂದಿ ಸಾವು

    June 14, 2025

    11 ಸೀಟ್ ನಿಗೂಢತೆ: ವಿಮಾನ ದುರಂತದಲ್ಲಿ ವಿಶ್ವಾಸ್​ ಕುಮಾರ್ ರೀತಿ ಬದುಕಿ ಬಂದಿದ್ದ ನಟ..ಯಾರದು?

    June 14, 2025

    PM Modi: ನಾಳೆಯಿಂದ 3 ದಿನ ಕೆನಡಾದಲ್ಲಿ ಜಿ7 ಶೃಂಗಸಭೆ: ಪ್ರಧಾನಿ ಮೋದಿ ಭಾಗಿ

    June 14, 2025

    ಏರ್ ಇಂಡಿಯಾ ವಿಮಾನ ದುರಂತ: ಕಾರಣ ಪತ್ತೆ ಹಚ್ಚಲು ಉನ್ನತ ಮಟ್ಟದ ಸಮಿತಿ ರಚನೆ!

    June 14, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.