ಕೋಲಾರ: ಮಾಜಿ ಸಚಿವ ವರ್ತೂರ್ ಪ್ರಕಾಶ್ಗೆ ತಿಂಗಳು ಮಾಮೂಲಿ ಇಲ್ಲದೇ ಹೋಗಿದ್ದರಿಂದ ಬಾಯಿಗೆ ಬಂದಂತೆ ಮಾತಾಡತ್ತಾರೆ. ಅಧಿಕಾರಿಗಳು ನೀಡುತ್ತಿದ್ದ ತಿಂಗಳ ಮಾಮೂಲಿಯಲ್ಲಿ ಅವರು ಜೀವನ ನಡೆಸುತ್ತಿದ್ದಾರೆ. ಈಗ ಮಾಮೂಲಿ ನಿಂತು ಹೋಗಿದೆ.
ಆದ್ದರಿಂದ ನಾಲಿಗೆ ಮೇಲೆ ಬಿಗಿ ಇಲ್ಲದೆ ಮಾತನಾಡುತ್ತಿದ್ದಾರೆ ಎಂದು ಶಾಸಕ ಕೊತ್ತೂರು ಮಂಜುನಾಥ್ ವಾಗ್ದಾಳಿ ನಡೆಸಿದರು. ಕೋಲಾರ ತಾಲೂಕಿನ ವೇಮಗಲ್ ನಲ್ಲಿ ಶ ಇಂದಿರಾ ಕ್ಯಾಂಟೀನ್ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು ಅಧಿಕಾರದಲ್ಲಿ ಇದ್ದಷ್ಟು ದಿನ ಅಧಿಕಾರಿಗಳು ನೀಡುವ ಕಮಿಷನ್ ವರ್ತೂರು ಪ್ರಕಾಶ್ ಅವರಿಗೆ ಜೀವನವಾಗಿತ್ತು.
ನಿಮ್ಮ ಮನೆಯಲ್ಲಿ ಸೊಳ್ಳೆಗಳ ಕಾಟ ಜಾಸ್ತಿ ಆಗಿದ್ಯಾ!? ಹಾಗಿದ್ರೆ ಹೀಗೆ ಮಾಡಿ!
ನನಗೆ ಅಂತಹ ಪರಿಸ್ಥಿತಿ ಬೇಕಾಗಿಲ್ಲ. ನನಗೆ ಕೋಟ್ಯಾಂತರ ರೂಪಾಯಿ ಬಾಡಿಗೆ ಬರುತ್ತದೆ. ನಿನ್ನ ಅವಧಿಯಲ್ಲಿನ ಕಾಮಗಾರಿಗಳು ಮಾಡಲು ಗುತ್ತಿಗೆದಾರರಿಂದ ಲಂಚ ಪಡೆದಿರುವುದಾಗಿ ಗುತ್ತಿಗೆದಾರರು ಹೇಳಿದ್ದಾರೆ. ನಾನು ಯಾರ ಹತ್ತಿರವಾದರೂ ಪಡೆದಿದ್ದರೆ ಸಾಬೀತು ಮಾಡಲಿ ಎಂದು ಸಾವಾಲು ಹಾಕಿದರು.
ವರ್ತೂರು ಪ್ರಕಾಶ್ ಅವರು ಏನಾದರೂ ಮಾತಾಡಬೇಕು ಅಂತ ಕಾಂಗ್ರೆಸ್ ನಾಯಕರ ವಿರುದ್ದ ಇಲ್ಲಸಲ್ಲದ ಆರೋಪ ಮಾಡಿಕೊಳ್ಳುವುದೇ ಜೀವನವಾಗಿದೆ ಹಿಂದೆ ಸಿದ್ದರಾಮಯ್ಯ ಅವರ ವಿರುದ್ದ ಮಾತಾಡಿ ಮಾತಾಡಿ ಏನಾಗಿದೆ ಅಂತ ರಾಜ್ಯದ ಜನಕ್ಕೆ ಗೊತ್ತಿದೆ ಇನ್ನಾದರೂ ಅವರಿಗೆ ಒಳ್ಳೆಯ ಬುದ್ದಿ ಕೊಟ್ಟು ಒಳ್ಳೆಯದು ಮಾತಾಡಲಿ ಇಲ್ಲ ಯಾರು ತಪ್ಪು ಮಾಡಿದ್ದಾರೆ ಅಂತ ಅ ಕೋಲಾರಮ್ಮ ದೇವರು ನೋಡಿಕೊಳ್ಳಲಿ ಎಂದರು.