ಪ್ರತಿಯೊಬ್ಬರಿಗೂ ತಮ್ಮ ಅಪ್ಪನೇ ಮೊದಲ ಹೀರೋ, ಅಪ್ಪ ಜೊತೆಗಿದ್ದರೆ ಸಾಕು ಪ್ರಪಂಚದಲ್ಲಿ ಏನು ಬೇಕಾದರೂ ಸಾಧಿಸುತ್ತೇನೆ ಎಂಬ ವಿಶ್ವಾಸವಿರುತ್ತದೆ. ಪ್ರೀತಿ, ವಾತ್ಸಲ್ಯದ ಸ್ಥಾನ ಹೆತ್ತಮ್ಮನಿಗಾದರೆ,
ಸ್ನೇಹ, ಅಕ್ಕರೆಯ ಪ್ರತಿ ರೂಪ ಎಂದರೆ ಅದು ಅಪ್ಪ. ತನ್ನ ಜೀವನವನ್ನೇ ಇಡೀ ಕುಟುಂಬಕ್ಕಾಗಿ ಮುಡಿಪಾಗಿಡುವ ತ್ಯಾಗಮಯಿ. ತನ್ನೆಲ್ಲಾ ಸುಖವನ್ನು ಮಕ್ಕಳಿಗಾಗಿ ಮೀಸಲಿಡುವ ನಿಜವಾದ ಹೀರೋ. ಎಲ್ಲಾ ರೀತಿಯಲ್ಲೂ ಆದರ್ಶಪ್ರಾಯವಾಗುವ ಮಕ್ಕಳ ಆದರ್ಶ ವ್ಯಕ್ತಿ.
ನಿಮ್ಮ ಮನೆಯಲ್ಲಿ ಸೊಳ್ಳೆಗಳ ಕಾಟ ಜಾಸ್ತಿ ಆಗಿದ್ಯಾ!? ಹಾಗಿದ್ರೆ ಹೀಗೆ ಮಾಡಿ!
ಪ್ರತೀ ವರ್ಷ ಜೂನ್ ಮೂರನೇ ಭಾನುವಾರ ಅಪ್ಪಂದಿರ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಅಪ್ಪಂದಿರ ದಿನಾಚರಣೆ ಈ ವಿಶೇಷವಾಗಿ ಅಪ್ಪನಿಗೆ ಏನಾದರೂ ಸರ್ಪ್ರೈಸ್ ಗಿಫ್ಟ್ ನೀಡಲೇ ಬೇಕಲ್ವೇ? ಅಪ್ಪನಿಗೆ ಖುಷಿ ಕೊಡುವ ವಿಚಾರದ ಕುರಿತಾಗಿ ಯೋಚಿಸಿ. ದಿನ ಪೂರ್ತಿ ಅಪ್ಪನಿಗಾಗಿಯೇ ಸಮಯಕೊಡಿ. ಹಾಗಿದ್ದಾಗ ಏನೆಲ್ಲಾ ಪ್ಲಾನ್ ಮಾಡಬೇಕು ಅಂತಿದ್ದೀರಿ? ಇಲ್ಲೊಂದಿಷ್ಟು ಸಲಹೆಗಳಿವೆ. ನಿಮಗಿಷ್ಟವಾದುದನ್ನು ಅಯ್ಕೆ ಮಾಡಿಕೊಳ್ಳಿ. ಈ ದಿನ ನಿಮಗೆ ಮರೆಯಲಾರದ ದಿನವಾಗಿರಬೇಕು.
ನಿಮ್ಮ ಕೈಯಾರೆ ತಯಾರಿಸಿದ ಪುಷ್ಪಗುಚ್ಛ ನೀಡಿ ಅಪ್ಪನಿಗೆ ಮುಂಜಾನೆಯ ಶುಭಾಶಯ ತಿಳಿಸಿ. ಬಳಿಕ ದೇವರ ಮುಂದೆ ದೀಪ ಬೆಳಗಿ ಸಿಹಿ ತಿನ್ನಿಸುವ ಮೂಲಕ ಅಪ್ಪಂದಿರ ದಿನದ ಶುಭಾಶಯ ಹೇಳಿ.
ಅಪ್ಪನಿಗೆ ಇಷ್ಟವಾಗುವ ಉಡುಗೊರೆಯನ್ನು ಯೋಚಿಸಿ ಅಥವಾ ಮನೆಯಲ್ಲಿಯೇ ಉಡುಗೊರೆಯನ್ನು ಸಿದ್ಧಪಡಿಸಿ. ನೀವು ಕೊಡುವ ಉಡುಗೊರೆ ತಂದೆಗೆ ಸರ್ಪ್ರೈಸ್ ಆಗಿರಲಿ.
ಅಪ್ಪ, ನಮಗಾಗಿ ಏನೆಲ್ಲಾ ಮಾಡಿದ್ದಾರೆ. ಅವುಗಳೆಲ್ಲವನ್ನೂ ನಾವು ಖುಷಿಯಿಂದ ಅನುಭವಿಸಿದ್ದೇವೆ. ಆದರೆ ಅಪ್ಪನಿಗಾಗಿ ಮಕ್ಕಳಾದ ನಾವು ವಿಶೇಷವಾಗಿ ಏನಾದರೂ ಮಾಡಬೇಕಲ್ಲವೇ? ಯಾವ ಅಪ್ಪಂದಿರೂ ಸಹ ಅದ್ದೂರಿಯ ಉಡುಗೊರೆಯನ್ನು ಎಂದೂ ಬಯಸುವುದಿಲ್ಲ. ಪ್ರತೀ ಹಂತದಲ್ಲಿಯೂ ಮಕ್ಕಳ ಯಶಸ್ಸನ್ನೇ ಬಯಸುತ್ತಾರೆ. ಹಾಗಾಗಿ ಅಪ್ಪನ ಬಗ್ಗೆ ಹೃದಯತುಂಬಿ ಮಾತನಾಡಿ ರೆಕಾರ್ಡ್ ಮಾಡಿ ಕಳುಹಿಸಿ. ನಿಮ್ಮ ಮಾತುಗಳು ಅಪ್ಪನಿಗೆ ಸಂತೋಷವಾಗಿರುವಂತಿರಬೇಕು. ಆನಂದಭಾಷ್ಪ ತುಂಬಿ ಬರುವಂತಿರಲಿ.
ಚಿಕ್ಕವರಿದ್ದಾಗ ಅಪ್ಪನೊಂದಿಗೆ ಆಟವಾಡಿದ ಕ್ಷಣದ ಚಿತ್ರಪಟಗಳಿರಬಹುದು. ಅವುಗಳೆಲ್ಲವನ್ನು ಒಟ್ಟುಗೂಡಿಸಿ ಅಪ್ಪನ ಕುರಿತಾದ ಒಂದೊಳ್ಳೆಯ ಹಾಡನ್ನು ಸೇರಿಸಿ ವಿಡಿಯೋ ತಯಾರಿಸಿ ಅಪ್ಪನಿಗೆ ಉಡುಗೊರೆಯಾಗಿ ನೀಡಿ. ಅಪ್ಪನಿಗಾಗುವ ಆ ಸಂತೋಷದ ಕ್ಷಣವನ್ನು ಕಣ್ತುಂಬ ನೋಡಿ ಖುಷಿ ಪಡಬಹುದು.