Close Menu
Ain Live News
    Facebook X (Twitter) Instagram YouTube
    Tuesday, June 17
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ರಾಜಕೀಯ
    • ಜಿಲ್ಲೆ
    • ಸಿನಿಮಾ
    • ಲೈಫ್ ಸ್ಟೈಲ್
    • ಜ್ಯೋತಿಷ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    Facebook X (Twitter) Instagram YouTube
    Ain Live News

    ನೈಸರ್ಗಿಕ ಹಾಗೂ ಸಾವಯವ, ಕೃಷಿಗೆ ಸರ್ಕಾರದ ಪ್ರೋತ್ಸಾಹ: ಎನ್. ಚಲುವರಾಯಸ್ವಾಮಿ

    By Author AINJune 16, 2025
    Share
    Facebook Twitter LinkedIn Pinterest Email
    Demo

    ಬೆಂಗಳೂರು:  ಭೂಮಿಯ ಫಲವತೆ ಹಾಗೂ ಹವಾಮಾನ ಸಂರಕ್ಷಣೆ ನಮ್ಮೆಲ್ಲರ ಜವಾಬ್ದಾರಿಯಾಗಿದೆ. ರಾಸಾಯನಿಕ ಮುಕ್ತ, ಕೃಷಿಯತ್ತ ಗಮನಹರಿಸಬೇಕಾಗಿದ್ದು. ರಾಜ್ಯ ಸರ್ಕಾರವು ನೈಸರ್ಗಿಕ ಹಾಗೂ ಸಾವಯವ ಕೃಷಿಯ ಜಾಗೃತಿ ಹಾಗೂ ಪ್ರೋತ್ಸಾಹಕ ಕ್ರಮಗಳನ್ನು ಕೈಗೊಳ್ಳಲಿದೆ ಎಂದು ಕೃಷಿ ಸಚಿವರಾದ ಎನ್. ಚಲುವರಾಯಸ್ವಾಮಿಯವರು ತಿಳಿಸಿದರು.

    ವಿಕಾಸಸೌಧದಲ್ಲಿ ಸುಭಾಷ್ ಪಾಳೇಕರ್ ಕೃಷಿಯ ಸಾಧಕ-ಬಾಧಕಗಳ ಬಗ್ಗೆ ತಜ್ಞರು, ಅನುಭವಿಗಳು ಹಾಗೂ ಅಧಿಕಾರಿಗಳೊಂದಿಗೆ ಸುದೀರ್ಘ ಚರ್ಚೆ ನಡೆಸಿದ ಸಚಿವರು ನಾಲ್ಕೂ ಕೃಷಿ ವಿಶ್ವವಿದ್ಯಾಲಯಗಳಲ್ಲಿ ಪ್ರಯೋಗಗಳನ್ನು ಹೆಚ್ಚಿಸುವ ಯೋಜನೆಗಳ ಅನುಷ್ಠಾನಕ್ಕೆ ಸೂಚನೆ ನೀಡಿದರು..

    ನೈಸರ್ಗಿಕ ಕೃಷಿ ತಜ್ಞರಾದ ಸುಭಾಷ್ ಪಾಳೇಕರ್ ಅವರ ಅಭಿಪ್ರಾಯವನ್ನ ಅಲಿಸಿದ ಕೃಷಿ ಸಚಿವರು ತಕ್ಷಣವೇ ಸಂಪೂರ್ಣ ಕೃಷಿ ಪದ್ದತಿಯನ್ನ ಬದಲಾಯಿಸುವುದು ಕಷ್ಟ ಆದರೆ, ಪ್ರತಿ ಗ್ರಾಮದಲ್ಲೂ ಪ್ರಾಯೋಗಿಕವಾಗಿ ರೈತರ ಜಮೀನುಗಳನ್ನು ಭಾಗಶಃ ರಾಸಾಯನಿಕ ಮುಕ್ತವಾಗಿ ಪರಿವರ್ತಿಸುವ ಅವಕಾಶವಿದ್ದು ಇಲಾಖೆ ಮೂಲಕವು ಈ ಬಗ್ಗೆ ಜಾಗೃತಿ ಹಾಗೂ ಮಾರ್ಗದರ್ಶನ ನೀಡಲಾಗುವುದು ಎಂದು ಎನ್. ಚಲುವರಾಯಸ್ವಾಮಿ ಹೇಳಿದರು..

    ಪ್ರತಿ ಜಿಲ್ಲೆಯಲ್ಲೂ ಸಾವಯವ ಕೃಷಿ ವಿಸ್ತರಣೆ ಜೊತೆಗೆ ಸುಭಾಷ್ ಪಾಳೇಕರ್ ನೈಸರ್ಗಿಕ ಕೃಷಿ ಪದ್ದತಿಯ ಅಳವಡಿಸುವ ಬಗ್ಗೆಯು ಪ್ರಾತ್ಯಕ್ಷಿಕೆ ಹಾಗೂ ಕಾರ್ಯಗಾರಗಳನ್ನ ಏರ್ಪಡಿಸಲು ಇಲಾಖಾಧಿಕಾರಿಗಳಿಗೆ ಮತ್ತು ವಿಶ್ವವಿದ್ಯಾಲಯಗಳಿಗೆ ನಿರ್ದೇಶನ ನೀಡಲಾಗುವುದು ಎಂದರು..

    ಇದ್ದಕ್ಕೂ ಮುನ್ನ ಮಾತನಾಡಿದ ನೈಸರ್ಗಿಕ ಕೃಷಿ ವಿಜ್ಞಾನಿ ಡಾ. ಸುಭಾಷ್ ಪಾಳೇಕರ್ ರವರು ಕೃಷಿಯಲ್ಲಿ ಅತಿಯಾದ ರಾಸಾಯನಿಕ, ಕೀಟನಾಶಕಗಳ ಬಳಕೆಯಿಂದ ಭೂಮಿಯ ಫಲವತತೆ ನಾಶವಾಗುತ್ತಿದ್ದು ತಿನ್ನುವ ಆಹಾರ ಕೂಡ ವಿಷಕಾರಿಯಾಗುತಿರುವುದರಿಂದ ಜೀವಾಮೃತಗಳ ಬಳಕೆಯ ಮೂಲಕ ಅತ್ಯಂತ ಕಡಿಮೆ ವೆಚ್ಚದಲ್ಲಿ ಆರೋಗ್ಯ ಪೂರ್ಣ ಆಹಾರ ಬೆಳೆಯುವ ಪದ್ದತಿ ಅನುಸರಿಸುವುದು ಅತ್ಯಂತ ಅಗತ್ಯವಾಗಿದೆ ಎಂದು ವಿವರಿಸಿದರು..

    ದೇಶದಲ್ಲಿ ಅಹಾರೋತ್ಪದಾನೆ ಸ್ವಾವಲಂಭಿ ಮಾರ್ಗದಲ್ಲಿದ್ದರೂ ಅತಿಯಾದ ರಸಗೊಬ್ಬರ ಹಾಗೂ ಕೀಟನಾಶಕಗಳ ಬಳಕೆಯಿಂದ ಭೂಮಿ ಬರಡಾಗುತ್ತಿದೆ. ಮಣ್ಣಿನಲ್ಲಿ ಇಂಗಾಲದ ಅಂಶ ಕಡಿಮೆಯಾಗಿ ಉಪ್ಪಿನಾಂಶ ಹೆಚ್ಚಾಗುತ್ತಿದೆ. ಇದಕ್ಕೆ ತುರ್ತು ಕಡಿವಾಣ ಹಾಕದಿದ್ದರೆ ಮಾನವ ಕುಲಕ್ಕೆ ಅಪಾಯವಾಗಬಲ್ಲದು ಎಂದು ಕಳವಳ ವ್ಯಕ್ತಪಡಿಸಿದರು..

    ಈ ಬಗ್ಗೆ ರೈತರಲ್ಲಿ ಅಧಿಕಾರಿಗಳು ಹೆಚ್ಚಿನ ಅರಿವು ಮೂಡಿಸಿ ನೈಸರ್ಗಿಕ ಕೃಷಿಯತ್ತ ಆಕರ್ಷಿಸಬೇಕು. ಅತ್ಯಂತ ತೀರ ಕಡಿಮೆ ವೆಚ್ಚದಲ್ಲಿ ಅಧಿಕ ಇಳುವರಿ ದೊರೆಯುವುದರಿಂದ ಕೃಷಿಕರಿಗೆ ದೇಶಕ್ಕೆ ಸಾಮಾನ್ಯ ಜನರಿಗೆ ಬಹು ಉಪಕಾರಿ ಎಂದರು.. ದೇಶದ ಯಾವುದೇ ಭಾಗದಲ್ಲಿ ಬೇಕಾದರು ತಾವು ಸಂಶೋಧಿಸಿರುವ ಈ ಪದ್ದತಿಯನ್ನು ಜಾರಿಗೊಳಿಸಬಹುದಾಗಿದ್ದು. ರಾಸಾಯನಿಕಗಳಿಗೆ ಎದುರಾಗಿ ಸಹಜತೆಯಿಂದಲೇ ಕೃಷಿ ಮಾಡುವುದನ್ನು ರೂಡಿಸಿಕೊಳ್ಳಲು ಸಹಕರಿಸಬೇಕೆಂದು ಸುಭಾಷ್ ಪಾಳೇಕರ್ ಮನವಿ ಮಾಡಿದರು..

    ಮಾಜಿ ಶಾಸಕರಾದ ಡಿ.ಆರ್.ಪಾಟೀಲ್ ಅವರು ಮಾತನಾಡಿ ಸುಭಾಷ್ ಪಾಳೇಕರ್ ಅವರ ಕೃಷಿ ಪದ್ದತಿಯ ಲಾಭಗಳ ಬಗ್ಗೆ ವಿವರಿಸಿ ಇದ್ದನ್ನು ಪ್ರೋತ್ಸಾಹಿಸಲು ಸರ್ಕಾರ ಕೂಡ ಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸಬೇಕು ಎಂದರು.. ಕೃಷಿ ಇಲಾಖೆ ಕಾರ್ಯದರ್ಶಿ ಡಾ.ರವಿಶಂಕರ್, ಆಯುಕ್ತರಾದ ವೈ.ಎಸ್.ಪಾಟೀಲ್, ನಿರ್ದೇಶಕರಾದ ಡಾ.ಜಿ.ಟಿ.ಪುತ್ರ, ವಿವಿಧ ಕೃಷಿ ವಿಶ್ವವಿದ್ಯಾಲಯಗಳ ಉಪ ಕುಲಪತಿಗಳು ಅಧಿಕಾರಿಗಳು, ಕೃಷಿ ತಜ್ಞರು ಹಾಜರಿದ್ದರು

    Demo
    Share. Facebook Twitter LinkedIn Email WhatsApp

    Related Posts

    Crude Oil Price: ಇಸ್ರೇಲ್-ಇರಾನ್ ಸಂಘರ್ಷ: ಕಚ್ಚಾ ತೈಲ ಬೆಲೆ ಏರಿಕೆ..! ಭಾರತೀಯ ಕಂಪನಿಗಳ ಮೇಲೆ ಒತ್ತಡ

    June 17, 2025

    Bengaluru: ಬೆಂಗಳೂರಿನಲ್ಲಿ ಡ್ರಗ್ ಪೆಡ್ಲಿಂಗ್ ಮಾಡುತ್ತಿದ್ದ ವಿದೇಶಿ ಪ್ರಜೆ ಅರೆಸ್ಟ್..!

    June 17, 2025

    ದೇಶದಲ್ಲಿ ಕೊರೋನಾ ಆತಂಕ: ಯಾವ ರಾಜ್ಯದಲ್ಲಿ ಅತಿ ಹೆಚ್ಚು ಕೇಸ್.? ಬೆಂಗಳೂರಲ್ಲಿ ಎಷ್ಟು.?

    June 17, 2025

    ಮದುವೆಗೆ ಹೋಗಿದ್ದವರ ಮನೆ ಗೂಡಿಸಿ ಗುಂಡಾಂತರ ಮಾಡಿದ್ದ ಆರೋಪಿಗಳು ಅರೆಸ್ಟ್..!

    June 17, 2025

    ಪ್ರಸಾರವಾಗಲಿಲ್ಲ ʼಕರ್ಣʼ ಸೀರಿಯಲ್..ಕೊನೆ ಕ್ಷಣದಲ್ಲಿ ಏನಾಯ್ತು..ಕಿರಣ್ ರಾಜ್ ಹೇಳಿದ್ದೇನು?

    June 17, 2025

    DK Shivakumar Fall Down: ಸೈಕಲ್ ಏರಿ ಜಾರಿ ಬಿದ್ದ ಡಿಕೆಶಿ..! ವಿಡಿಯೋ ವೈರಲ್

    June 17, 2025

    Gold Price: ಚಿನ್ನದ ಬೆಲೆಯಲ್ಲಿ ಭಾರೀ ಇಳಿಕೆ! ಬಂಗಾರ ಖರೀದಿಸಲು ಇದೇ ಬೆಸ್ಟ್ ಟೈಮ್

    June 17, 2025

    ಇರಾನ್-ಇಸ್ರೇಲ್ ಯುದ್ಧ ಎಫೆಕ್ಟ್: ಕರ್ನಾಟಕಕ್ಕೆ ಬರುತ್ತಿದ್ದ ಮಸಾಲೆ, ಡ್ರೈಫ್ರೂಟ್ಸ್‌ ಸಪ್ಲೈ ಬಂದ್!

    June 17, 2025

    ಧಾರಕಾರ ಮಳೆ: ಕರ್ನಾಟಕದ 6 ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಣೆ!

    June 17, 2025

    ರೈತರಿಗೆ ‘ಮಾವು’ ಸಂಕಷ್ಟ: ಉಗ್ರ ಹೋರಾಟದ ಎಚ್ಚರಿಕೆ ಕೊಟ್ಟ ಅನ್ನದಾತರು!

    June 16, 2025

    ಚಿನ್ನಸ್ವಾಮಿ ಕಾಲ್ತುಳಿತ ಕೇಸ್: ವಿಪಕ್ಷಗಳು ರಾಜಕೀಯ ಮಾಡೋದು ಬಿಡಲಿ: ಚಲುವರಾಯಸ್ವಾಮಿ!

    June 16, 2025

    ಯಲಹಂಕ ವಲಯದಲ್ಲಿ 12 ಕಟ್ಟಡಗಳ ವ್ಯತಿರಿಕ್ತ ಭಾಗಗಳ ತೆರವು ಕಾರ್ಯಚರಣೆ: ಕರೀಗೌಡ!

    June 16, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.