Close Menu
Ain Live News
    Facebook X (Twitter) Instagram YouTube
    Tuesday, June 17
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ರಾಜಕೀಯ
    • ಜಿಲ್ಲೆ
    • ಸಿನಿಮಾ
    • ಲೈಫ್ ಸ್ಟೈಲ್
    • ಜ್ಯೋತಿಷ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    Facebook X (Twitter) Instagram YouTube
    Ain Live News

    ಬಾಯಲ್ಲಿ ಹುಣ್ಣಿನ ಸಮಸ್ಯೆಯೇ!? ಹಾಗಿದ್ರೆ ಈ ಮನೆಮದ್ದುಗಳನ್ನು ಫಾಲೋ ಮಾಡಿ!

    By AIN AuthorJune 16, 2025
    Share
    Facebook Twitter LinkedIn Pinterest Email
    Demo

    ಮೌತ್ ಅಲ್ಸರ್ ಎಂದರೆ ಬಾಯಿಯೊಳಗೆ ಬೆಳೆಯುವ ಸಣ್ಣ ಹುಣ್ಣುಗಳಾಗಿವೆ. ಬಾಯಲ್ಲಿ, ಒಸಡುಗಳ ತಳದಲ್ಲಿ ಬೆಳೆಯುವ ಸಣ್ಣ ಹುಣ್ಣುಗಳು ನೋವಿನಿಂದ ಕೂಡಿರುತ್ತವೆ. ಬಾಯಲ್ಲಿ ಹುಣ್ಣಾದಾಗ ಏನನ್ನಾದರೂ ತಿನ್ನುವುದಿರಲಿ ನೀರು ಕುಡಿಯುವುದು ಕೂಡ ನರಕಯಾತನೆ ಎಂದೆನಿಸಿಬಿಡುತ್ತದೆ.

    ತಾಂತ್ರಿಕ ಸಮಸ್ಯೆ: ನವದೆಹಲಿಗೆ ಬರುತ್ತಿದ್ದ ಏರ್‌ಇಂಡಿಯಾ ಹಾಂಕಾಂಗ್‌ಗೆ ವಾಪಸ್‌!

    ಸಾಮಾನ್ಯವಾಗಿ ಕೆಲವರಿಗೆ ಬಾಯಲ್ಲಿ ಆಗಾಗ್ಗೆ ಹುಣ್ಣು ಉಂಟಾಗುತ್ತದೆ. ಕೆಲವರು ದೇಹದ ಉಷ್ಣತೆ ಹೆಚ್ಚಾಗಿರಬಹುದು ಹಾಗಾಗಿ ಈ ರೀತಿ ಆಗುತ್ತದೆ ಎಂದು ಭಾವಿಸುತ್ತಾರೆ. ಇನ್ನೂ ಕೆಲವರು ಕೆಲವು ಜೀವಸತ್ವಗಳ ಕೊರತೆಯಿಂದ ಈ ಸಮಸ್ಯೆ ಉಂಟಾಗಿರಬಹುದು ಎಂದುಕೊಳ್ಳುತ್ತಾರೆ. ಆದರೆ, ಬಾಯಲ್ಲಿ ಹುಣ್ಣಾಗಲು ನಿಮ್ಮ ಜೀವನಶೈಲಿ ಮತ್ತು ಕೆಟ್ಟ ಆಹಾರ ಪದ್ದತಿಯೂ ಕಾರಣವಾಗಿರಬಹುದು

    ಬಾಯಿ ಹುಣ್ಣು ತುಂಬಾ ನೋವನ್ನು ಉಂಟು ಮಾಡುವ ಸಮಸ್ಯೆ. ಇದು ಸಾಮಾನ್ಯವಾಗಿ ಅತಿಯಾದ ದೇಹ ಉಷ್ಣತೆಯಿಂದ ಮೂಡುವುದು ಎಂದು ಹೇಳಲಾಗುತ್ತದೆ. ಇದು ತುಟಿಯ ಕೆಳಭಾಗ, ಒಸಡು, ನಾಲಗೆ ಕೆಳಭಾಗ, ಮೇಲ್ಭಾಗ, ಗಂಟಲು, ಬಾಯಿಯ ಮೇಲ್ಭಾಗದಲ್ಲಿ ಮೂಡಬಹುದು. ಬಾಯಿ ಹುಣ್ಣು ಇದ್ದರೆ ಆಗ ಯಾವುದೇ ಆಹಾರ ತಿನ್ನಲು ತುಂಬಾ ಕಷ್ಟವಾಗುವುದು.

    ಇದನ್ನು ಬಾಯಿಯ ಅಲ್ಸರ್ ಎಂದು ಕೂಡ ಕರೆಲಾಗುತ್ತದೆ. ಬಾಯಿಯ ವಿಚಾರವಾದ ಕಾರಣ ಯಾವುದೇ ಸಾಮಾನ್ಯ ಔಷಧಿಗಳನ್ನು ಬಳಸಿದರೆ ಅದು ಹೊಟ್ಟೆ ಸೇರಿ ಮತ್ತೊಂದು ಸಮಸ್ಯೆ ಹುಟ್ಟುಹಾಕಬಹುದು. ಇದರ ಬದಲಿಗೆ ಬಾಯಿಯ ಸಮಸ್ಯೆ ನಿವಾರಣೆ ಮಾಡಲು ಕೆಲವು ಮನೆಮದ್ದುಗಳನ್ನು ಬಳಸಿದರೆ ಅದು ತುಂಬಾ ಪರಿಣಾಕಾರಿ ಆಗಿರುವುದು. ಅಂತಹ ಕೆಲವು ಮನೆಮದ್ದುಗಳ ಬಗ್ಗೆ ತಿಳಿಯಿರಿ.

    ಬಾಯಿಯ ಹುಣ್ಣಿ ಸಮಸ್ಯೆಗೆ ನಿಖರ ಕಾರಣವೇನೆಂದು ತಿಳಿಯದೇ ಇದ್ದರೂ ಕೆಲವು ಕಾರಣಗಳಿಂದ ಇದು ಬರುವ ಅಪಾಯಗಳು ಹೆಚ್ಚಾಗಿರುವುದು. ಬಾಯಿಯ ಗಾಯ, ಒತ್ತಡ ಮತ್ತು ಹಾರ್ಮೋನ್ ಬದಲಾವಣೆಯಿಂದ ಇದು ಬರಬಹುದು. ಕೆಲವು ಹುಣ್ಣಿನ ಸಮಸ್ಯೆಗಳು ಒಂದು ಅಥವಾ ಎರಡು ವಾರದಲ್ಲಿ ತನ್ನಿಂದ ತಾನೇ ಯಾವುದೇ ಔಷಧಿಯಿಲ್ಲದೆ ಮಾಯವಾಗುವುದು

    ಹಳದಿ, ಬಿಳಿ ಮತ್ತು ಕೆಂಪು ಬಣ್ಣದ ನೋವಿನ ಹುಣ್ಣುಗಳು
    ಮಸಾಲೆ, ಹುಳಿ ಮತ್ತು ಉಪ್ಪಿನಾಂಶವಿರುವ ಆಹಾರ ಸೇವನೆ ವೇಳೆ ಬಾಯಿಯಲ್ಲಿ ಕಿರಿಕಿರಿ.
    ಹುಣ್ಣಿನ ಸುತ್ತಲಿನ ಚರ್ಮದಲ್ಲಿ ಊತ.
    ಜಗಿಯುವಾಗ ಮತ್ತು ಬ್ರಶ್ ಮಾಡುವಾಗ ಸಮಸ್ಯೆ.
    ಬಾಯಿಯ ಸುತ್ತಲು ಕೆಂಪಾಗುವುದು.
    ಬಾಯಿಯಲ್ಲಿ ನೋವು ಮತ್ತು ಜಮ್ಮೆನ್ನುಸುವಿಕೆ.
    ಹಸಿವು ಕಡಿಮೆ ಆಗುವುದು.

    ತುಟಿ ಅಥವಾ ನಾಲಗೆಯಲ್ಲಿ ಮೂಡುವಂತಹ ಹುಣ್ಣನ್ನು ಸಾಮಾನ್ಯವಾಗಿ ಬಾಯಿಯ ಅಲ್ಸರ್ ಎಂದು ಕರೆಯಲಾಗುತ್ತದೆ. ಹೆಚ್ಚು ಆಮ್ಲೀಯವಾಗಿರುವ ಆಹಾರ ಸೇವನೆ ಮಾಡಿದರೆ ಆಗ ಇದರಿಂದ ಹುಣ್ಣು ಕಂಡುಬರಬಹುದು.
    ಬಾಯಿಯಲ್ಲಿ ಹುಣ್ಣು ಕಾಣಿಸಿಕೊಂಡರೆ ಆಗ ಆಮ್ಲೀಯತೆ ಇರುವ ಆಹಾರ ಸೇವನೆ ಕಡಿಮೆ ಮಾಡಬೇಕು. ಅದರಲ್ಲೂ ಮುಖ್ಯವಾಗಿ ಆಮ್ಲೀಯ ಹಣ್ಣುಗಳನ್ನು ಕಡೆಗಣಿಸಬೇಕು. ಇದರಿಂದ ಹುಣ್ಣುಗಳು ಬೇಗನೆ ಒಣಗುವುದು ಮತ್ತು ಕಿರಿಕಿರಿ ಕಡಿಮೆ ಆಗುವುದು.

    ಉಪ್ಪು ಹಾಕಿದ ನೀರು: ಉಪ್ಪು ಹಾಕಿದ ನೀರಿನಿಂದ ಬಾಯಿ ಮುಕ್ಕಳಿಸಿಕೊಂಡರೆ ಆಗ ಬಾಯಿಯ ಹುಣ್ಣಿನ ಸಮಸ್ಯೆಯು ಕಡಿಮೆ ಆಗುವುದು.
    ಉಪ್ಪಿನಲ್ಲಿ ಇರುವ ಬ್ಯಾಕ್ಟೀರಿಯಾ ವಿರೋಧಿ ಗುಣವು ಬಾಯಿಯ ಯಾವುದೇ ಭಾಗದಲ್ಲಿ ಇರುವ ಸೂಕ್ಷ್ಮಾಣು ಜೀವಿಗಳನ್ನು ದೂರ ಮಾಡುವುದು. ಒಂದು ಕಪ್ ಬಿಸಿ ನೀರಿಗೆ ಒಂದು ಚಮಚ ಉಪ್ಪು ಹಾಕಿ ಸರಿಯಾಗಿ ಮಿಶ್ರಣ ಮಾಡಿ. ಈ ಮಿಶ್ರಣವನ್ನು ದಿನದಲ್ಲಿ ಎರಡು ಸಲ ಬಾಯಿ ಮುಕ್ಕಳಿಸಲು ಬಳಸಿದರೆ ತುಂಬಾ ಒಳ್ಳೆಯದು.

    ಚಹಾದಲ್ಲಿ ಶಮನಕಾರಿ ಮತ್ತು ಸಂಕೋಚನ ಗುಣವಿದ್ದು, ಇದನ್ನು ನೇರವಾಗಿ ಹುಣ್ಣಿನ ಭಾಗಕ್ಕೆ ಇಡಬೇಕು. ಆಗ ಹುಣ್ಣಿನ ನೋವು ಕಡಿಮೆ ಆಗುವುದು.ಒಂದು ಕಪ್ಪು ಚಹಾದ ಟೀ ಬ್ಯಾಗ್ ಟೀ ಬ್ಯಾಗ್ ತೆಗೆದುಕೊಂಡು ಅದನ್ನು ಬಿಸಿ ನೀರಿನ ಒಂದು ಕಪ್ ಗೆ ಹಾಕಿ.ನೀರು ಮತ್ತು ಬ್ಯಾಗ್ ತಣ್ಣಗಾದ ಬಳಿಕ ಅದನ್ನು ಹುಣ್ಣು ಇರುವ ಭಾಗಕ್ಕೆ ಇಡಬೇಕು.

    ಮೆಗ್ನೀಸಿಯಮ್ ಹಾಲಿನಿಂದ ಬಾಯಿ ಮುಕ್ಕಳಿಸಿಕೊಂಡರೆ ಆಗ ಒಸಡಿನಲ್ಲಿ ಇರುವ ಹುಣ್ಣುಗಳು ದೂರವಾಗುವುದು ಮತ್ತು ನೋವು ಕಡಿಮೆ ಆಗುವುದು. ಒಂದು ಚಮಚ ಮೆಗ್ನಿಶಿಯಾ ಹಾಲನ್ನು ಒಂದು ಕಪ್ ನೀರಿಗೆ ಹಾಕಿಕೊಂಡು ಮಿಶ್ರಣ ಮಾಡಿ ಮತ್ತು ಅದರಿಂದ ಬಾಯಿ ಮುಕ್ಕಳಿಸಿ.

    ಬಾಯಿಯಲ್ಲಿರುವ ಹುಣ್ಣು ನಿವಾರಣೆ ಮಾಡಲು ಮತ್ತು ನೋವು ತಗ್ಗಿಸಲು ಲವಂಗವನ್ನು ಬಾಯಿಯಲ್ಲಿ ಇಟ್ಟುಕೊಂಡು ಜಗಿಯಬೇಕು. ಲವಂಗವು ಬ್ಯಾಕ್ಟೀರಿಯಾ ವಿರೋಧಿ ಮತ್ತು ನೋವು ನಿವಾರಕ ಗುಣ ಹೊಂದಿದೆ. ಇದು ಹುಣ್ಣಿನ ಶುಚಿತ್ವ ಕಾಪಾಡಿಕೊಂಡು ಬೇಗನೆ ಒಣಗಲು ಮತ್ತು ನೋವು ಕಡಿಮೆ ಮಾಡಲು ಸಹಕಾರಿ.

    ಮೊಸರು ಸೇವನೆ ಮಾಡಿದರೆ ಆಗ ಕರುಳಿನ ಕ್ರಿಯೆಗಳು ಸರಾಗವಾಗಿ ಆಗುವುದು ಮತ್ತು ಕರುಳಿನ ಮೇಲ್ಪದರವು ಉತ್ತಮಗೊಳ್ಳುವುದು. ಇದು ದೇಹಲ್ಲಿ ಪ್ರತಿರೋಧಕ ಶಕ್ತಿ ವೃದ್ಧಿ ಮಾಡಿ ಬಾಯಿಯ ಹುಣ್ಣುಗಳು ಬೇಗನೆ ಗುಣವಾಗಲು ಸಹಕಾರಿ.

    Demo
    Share. Facebook Twitter LinkedIn Email WhatsApp

    Related Posts

    Smartphone Explosion: ಈ ತಪ್ಪುಗಳನ್ನು ಎಂದಿಗೂ ಮಾಡ್ಬೇಡಿ: ಮೊಬೈಲ್ ಬ್ಲಾಸ್ಟ್ ಆಗತ್ತೆ!

    June 17, 2025

    ಕಣ್ಣುಗಳ ಸುತ್ತಲೂ ಊದಿ ಕೊಳ್ಳುತ್ತಿದ್ಯಾ!? ಹಾಗಿದ್ರೆ ನಿಮ್ಮ ಕಿಡ್ನಿಗಳು ಹಾಳಾಗಿವೆ ಎಂದರ್ಥ

    June 17, 2025

    ನಿತ್ಯ ರಾತ್ರಿ ಹೊತ್ತು ಅನ್ನ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದಾ? ಕೆಟ್ಟದ್ದಾ..? ಇಲ್ಲಿದೆ ಕಂಪ್ಲೀಟ್ ಡೀಟೈಲ್ಸ್!

    June 16, 2025

    ಮಾರಕ ರೋಗಗಳಿಗೆ ಹಲಸಿನ ಬೀಜ ಮದ್ದು: ಗಂಭೀರ ಸಮಸ್ಯೆಗಳಿಗೆ ಇದು ರಾಮಬಾಣ!

    June 16, 2025

    ನಿಮಗಿದು ಗೊತ್ತಾ!? ಮನೆ ಮುಂದೆ ಈ ಹೂವಿನ ಗಿಡ ಬೆಳೆಸಿದರೆ ಆರ್ಥಿಕ ಸಮಸ್ಯೆ ಶಾಶ್ವತ ದೂರವಾಗುತ್ತಂತೆ!

    June 16, 2025

    Chicken Benefits: ಚಿಕನ್‌ ತಿನ್ನೋದ್ರಿಂದ ಎಷ್ಟೆಲ್ಲಾ ಆರೋಗ್ಯ ಬೆನಿಫಿಟ್ ಗಳಿದೆ ಗೊತ್ತಾ?

    June 16, 2025

    ಪುರುಷರೇ ಎಚ್ಚರ: ಗಂಡಸರಲ್ಲಿ ವೇಗವಾಗಿ ಹರಡುತ್ತಿದೆ ಇದೊಂದು ಕ್ಯಾನ್ಸರ್.. ಈ ಲಕ್ಷಣ ಕಂಡ್ರೆ ಕೂಡಲೇ ಡಾಕ್ಟರ್ ಭೇಟಿ ಮಾಡಿ!

    June 16, 2025

    ತೆಳ್ಳಗಾಗಬೇಕು ಅಂತ ಬಿಸಿ ನೀರಿಗೆ ಜೇನುತುಪ್ಪ ಬೆರೆಸಿ ಕುಡಿತೀರಾ? ಈ ವಿಚಾರ ತಿಳ್ಕೊಳ್ಳಿ, ಇಲ್ಲದಿದ್ರೆ ಅಪಾಯ ಫಿಕ್ಸ್!

    June 16, 2025

    ನೀವು ಕೂಡ ಜಾಸ್ತಿ ಉಪ್ಪಿನಕಾಯಿ ತಿಂತೀರಾ!? ಹಾಗಿದ್ರೆ ಈ ಸಮಸ್ಯೆಗಳು ಗ್ಯಾರಂಟಿ!

    June 15, 2025

    ನಿತ್ಯ ಒಂದು ಸೇಬು ತಿಂದ್ರೆ ಹಾರ್ಟ್‌ಗೆ ಒಳ್ಳೆಯದಂತೆ: ಇದು ಸುಳ್ಳಲ್ಲ ಮರ್ರೆ!

    June 15, 2025

    ನೀವು ಊಟ ಮಾಡ್ಬೇಕಾದ್ರೆ ಸೀನು ಬರುತ್ತಾ!? ಹಾಗಿದ್ರೆ ಈ ರೀತಿ ಮಾಡಿ ಎನ್ನುತ್ತೆ ಶಕುನ ಶಾಸ್ತ್ರ..!

    June 14, 2025

    ಈ ಹಣ್ಣಿನ ಬೆನಿಫಿಟ್ ಎಷ್ಟಿದೆ ಗೊತ್ತಾ!? ಕೊಲೆಸ್ಟ್ರಾಲ್ ನಿಂದ ಕ್ಯಾನ್ಸರ್‌ ಗುಣಪಡಿಸೋ ಶಕ್ತಿ ಇದೆ!

    June 14, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.