ಹಸಿದವರಿಗೆ ಹಲಸು, ಉಂಡವರಿಗೆ ಮಾವು’ಎಂಬ ಮಾತಿದೆ. ಸದ್ಯ ಹಲಸಿನ ಹಣ್ಣಿನ ಸೀಸನ್ ಶುರುವಾಗಿದೆ. ಮಾರುಕಟ್ಟೆಯಲ್ಲಿ ಇದರದ್ದೇ ಕಾರುಬಾರು ಜೋರಾಗಿದೆ. ಇದೊಂದು ಅತ್ಯಂತ ರುಚಿಕರವಾದ ಹಣ್ಣುಗಳಲ್ಲಿ ಒಂದಾಗಿದ್ದು, ಎಲ್ಲರೂ ಈ ಹಣ್ಣು ತಿನ್ನಲು ತುಂಬಾ ಇಷ್ಟಪಡುತ್ತಾರೆ.
ರೈತರಿಗೆ ‘ಮಾವು’ ಸಂಕಷ್ಟ: ಉಗ್ರ ಹೋರಾಟದ ಎಚ್ಚರಿಕೆ ಕೊಟ್ಟ ಅನ್ನದಾತರು!
ಬೇರೆ ಹಣ್ಣುಗಳಿಗೆ ಹೋಲಿಸಿದರೆ ಹಲಸಿನ ಹಣ್ಣು ನೋಡುವುದಕ್ಕೆ ಗಜಗಾತ್ರದ ಹಣ್ಣಾಗಿದ್ದು ಮೇಲೆ ನೋಡಲು ತುಂಬಾ ಒರಟು. ಆದರೆ ಒಳಗೆ ತುಂಬಾ ಮೃದು. ಅಲ್ಲದೇ ಭಾರತದಲ್ಲಿ ಅತಿ ಹೆಚ್ಚಾಗಿ ಹಲಸಿನ ಹಣ್ಣನ್ನು ಒಡಿಶಾ, ದಕ್ಷಿಣ ಏಷ್ಯಾದ ಉಷ್ಣವಲಯದಲ್ಲಿ ಬೆಳೆಯಲಾಗುತ್ತದೆ.
ಹಲಸಿನ ಹಣ್ಣು ಅನೇಕ ಜನರ ನೆಚ್ಚಿನ ಹಣ್ಣು. ಇದರ ಹೆಸರು ಹೇಳಿದ್ರೆ ಸಾಕು ಕೆಲವರ ಬಾಯಲ್ಲಿ ನೀರು ಬರುತ್ತೆ. ಗ್ರಾಮೀಣ ಪ್ರದೇಶಗಳಲ್ಲಿ ಬಹುತೇಕ ಎಲ್ಲಾ ಮನೆಗಳಲ್ಲಿ ಹಲಸಿನ ಮರಗಳು ಕಂಡುಬರುತ್ತವೆ. ಬೇಸಿಗೆ ಆರಂಭವಾದ ತಕ್ಷಣ ಹಣ್ಣಾಗಲು ಪ್ರಾರಂಭಿಸುತ್ತವೆ. ಮಾರುಕಟ್ಟೆಯಲ್ಲಿ ಈ ಹಣ್ಣಿಗೆ ವಿಶೇಷ ಪ್ರಾಮುಖ್ಯತೆ ಇದೆ.
ಹಣ್ಣಷ್ಟೇ ಅಲ್ಲ, ಹಲಸಿನ ಬೀಜಗಳು ಕೂಡ ನಮ್ಮ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಅನೇಕ ಜನರು ಹಲಸಿನ ಬೀಜಗಳನ್ನು ಹೆಚ್ಚಾಗಿ ತಿನ್ನಲು ಇಷ್ಟಪಡುತ್ತಾರೆ. ಈ ಬೀಜಗಳು ಕ್ಯಾಲ್ಸಿಯಂ ಮತ್ತು ಮೆಗ್ನೀಸಿಯಮ್‌ನಂತಹ ಖನಿಜಗಳಿಂದ ಸಮೃದ್ಧವಾಗಿವೆ. ಅವು ನಮ್ಮ ಮೂಳೆಗಳನ್ನು ಬಲ ಪಡಿಸುತ್ತವೆ.. ಸ್ನಾಯುಗಳಿಗೆ ಶಕ್ತಿಯನ್ನು ನೀಡುತ್ತವೆ ಮತ್ತು ಆಸ್ಟಿಯೊಪೊರೋಸಿಸ್‌ನಂತಹ ಕಾಯಿಲೆಗಳಿಂದ ನಮ್ಮನ್ನು ರಕ್ಷಿಸುತ್ತವೆ.
ಅಲ್ಲದೆ, ಹಲಸಿನ ಬೀಜಗಳಲ್ಲಿ ನಾರಿನ ಅಂಶ ಇರುವುದರಿಂದ, ಅವು ಅಜೀರ್ಣ, ಮಲಬದ್ಧತೆ ಮತ್ತು ಮೂಲವ್ಯಾಧಿ ಮುಂತಾದ ಸಮಸ್ಯೆಗಳಿಗೆ ಉತ್ತಮ ಪರಿಹಾರವಾಗಿದೆ. ಈ ಬೀಜಗಳಲ್ಲಿ ವಿಟಮಿನ್ ಎ ಇರುವಿಕೆಯು ದೃಷ್ಟಿ ಸುಧಾರಿಸುತ್ತದೆ. ಇದು ಕಣ್ಣಿನ ಪೊರೆ ಮುಂತಾದ ಕಣ್ಣಿನ ಕಾಯಿಲೆಗಳನ್ನು ತಡೆಗಟ್ಟಲು ಸಹಾಯ ಮಾಡುತ್ತದೆ.
ಸೌತೆಕಾಯಿ ಬೀಜಗಳು ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳಿಂದ ವಿಶೇಷವಾಗಿ ಪರಿಹಾರ ನೀಡುತ್ತವೆ. ವಯಸ್ಸಾದ ಲಕ್ಷಣಗಳು ಮತ್ತು ಒಣ ಚರ್ಮದ ಸಮಸ್ಯೆಗಳು ಕಡಿಮೆಯಾಗುತ್ತವೆ. ಹಾಗಾಗಿ ಹಲಸಿನ ಬೀಜಗಳು ನಮ್ಮ ಆರೋಗ್ಯಕ್ಕೆ ತುಂಬಾ ಒಳ್ಳೆಯದು, ಅವು ದೇಹವನ್ನು ಚೈತನ್ಯಗೊಳಿಸುತ್ತದೆ ಮತ್ತು ದೃಷ್ಟಿ, ಚರ್ಮ ಮತ್ತು ಮನಸ್ಥಿತಿ ಸೇರಿದಂತೆ ಯೋಗಕ್ಷೇಮವನ್ನು ಕಾಪಾಡುತ್ತದೆ.