ಮಂಡ್ಯ: ಮಂಡ್ಯ ಜಿಲ್ಲೆಯ ಬಂಡೂರು ಕುರಿಗೆ ಎಲ್ಲಿಲ್ಲದ ಬೇಡಿಕೆ. ಬಂಡೂರು ಕುರಿಯ ಮಾಂಸ ಹೆಚ್ಚು ರುಚಿಕರ ಆಗಿರುತ್ತದೆ ಎಂಬುದು ಇದಕ್ಕೆ ಮುಖ್ಯ ಕಾರಣ. ಆದರೆ, ಇದೀಗ ಮಂಡ್ಯ ಜಿಲ್ಲೆಯ ಬಂಡೂರು ತಳಿಯ ಟಗರು ದಾಖಲೆ ಬೆಲೆಗೆ ಸೇಲ್ ಆಗಿದೆ. ಕೇವಲ 7ತಿಂಗಳ ಟಗರು ಬರೋಬ್ಬರಿ 1.60 ಲಕ್ಷಕ್ಕೆ ಮಾರಾಟವಾಗಿದೆ.
ಕಿರುಗಾವಲು ಗ್ರಾಮದ ಉಲ್ಲಾಸ್ ಗೌಡ ಎಂಬುವರು ಸಾಕಿದ್ದ ಬಂಡೂರು ತಳಿಯ ಟಗರು ಆಗಿದ್ದು, ವಡ್ಡರಹಳ್ಳಿಯ ರೈತ ಕುಮಾರ್ ಹಾಗು ಕುಳ್ಳೇಗೌಡ ಎಂಬುವರಿಂದ ಖರೀದಿ ಮಾಡಿದ್ದರು.
Smartphone Explosion: ಈ ತಪ್ಪುಗಳನ್ನು ಎಂದಿಗೂ ಮಾಡ್ಬೇಡಿ: ಮೊಬೈಲ್ ಬ್ಲಾಸ್ಟ್ ಆಗತ್ತೆ!
ಬಂಡೂರು ತಳಿಯ ಟಗರಿಗೆ ದೇಶದೆಲ್ಲೆಡೆ ಬಹು ಬೇಡಿಕೆಯಾಗಿದ್ದು, ಈ ಹಿಂದೆ ಇವರ ತಂದೆ ಹಾಗು ತಾತ ಕೂಡ ಬಂಡೂರು ತಳಿ ಟಗರನ್ನು ಸಾಕಿ 1.49 .ಲಕ್ಷಕ್ಕೆ ಮಾರಾಟ ಮಾರಿದ್ರು. ದಾಖಲೆ ಬೆಲೆಗೆ ಮಾರಾಟವಾದ ಜೋಡಿ ಟಗರನ್ನು ಗ್ರಾಮದಲ್ಲಿ ಮೆರವಣಿಗೆ ಮಾಡಿ ಹಸ್ತಾಂತರ ಮಾಡಲಾಯಿತು.