ಮಂಡ್ಯ:- ಜಿಲ್ಲೆಯಲ್ಲಿ ಧಾರಕಾರ ಮಳೆ ಸುರಿಯುತ್ತಿರುವ ಹಿನ್ನೆಲೆ KRS ಡ್ಯಾಂ ಭರ್ತಿಗೆ 11 ಅಡಿಯಷ್ಟೇ ಬಾಕಿ ಉಳಿದಿದೆ. ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆ ಹೆಚ್ಚಾಗಿರುವ ಹಿನ್ನೆಲೆ ಕೆಆರ್ಎಸ್ ಡ್ಯಾಂ ಭರ್ತಿಗೆ ಕೇವಲ 11 ಅಡಿಗಳಷ್ಟೇ ಬಾಕಿಯಿದೆ.
ರಾಜ್ಯದಲ್ಲಿ ಹೊಂದಾಣಿಕೆ ಕೊರತೆ ಆಗಿದೆ: ಬಿಜೆಪಿ-ಜೆಡಿಎಸ್ ಮೈತ್ರಿ ಗುಟ್ಟು ಬಿಚ್ಚಿಟ್ಟ ಸಿ ಬಿ ಸುರೇಶ್ ಬಾಬು!
ಸದ್ಯ ಕೆಆರ್ಎಸ್ ಡ್ಯಾಂಗೆ 29,368 ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, ಪರಿಣಾಮ 24 ಗಂಟೆಗಳಲ್ಲಿ ಕನ್ನಂಬಾಡಿ ಕಟ್ಟೆಯಲ್ಲಿ 4 ಟಿಎಂಸಿ ನೀರು ಶೇಖರಣೆಯಾಗಿದೆ. 124.80 ಅಡಿಗಳ ಗರಿಷ್ಠ ಮಟ್ಟ ಹೊಂದಿರುವ ಕೆಆರ್ಎಸ್ ಡ್ಯಾಂ 113.25 ಅಡಿಯಷ್ಟು ಭರ್ತಿಯಾಗಿದೆ. ಸಂಪೂರ್ಣ ಭರ್ತಿಗೆ ಇನ್ನೂ 11 ಅಡಿಗಳಷ್ಟೇ ಬಾಕಿ ಇದೆ. ಇನ್ನೂ 49.452 ಟಿಎಂಸಿಯ ಗರಿಷ್ಠ ಸಾಮಾರ್ಥ್ಯ ಹೊಂದಿರುವ ಕೆಆರ್ಎಸ್ ಡ್ಯಾಂನಲ್ಲಿ ಸದ್ಯ 35.118 ಟಿಎಂಸಿಯಷ್ಟು ನೀರು ಶೇಖರಣೆಯಾಗಿದೆ. ಇನ್ನೂ 14 ಟಿಎಂಸಿ ನೀರು ಬಂದರೆ ಕೆಆರ್ಎಸ್ ಡ್ಯಾಂ ಸಂಪೂರ್ಣ ಭರ್ತಿಯಾಗುತ್ತದೆ.
KRS ಡ್ಯಾಂನ ಇಂದಿನ ನೀರಿನ ಮಟ್ಟದ ವಿವರ;
ಗರಿಷ್ಟ ನೀರಿನ ಮಟ್ಟ: 124 80 ಅಡಿ
ಇಂದಿನ ನೀರಿನ ಮಟ್ಟ: 113.25 ಅಡಿ
ಡ್ಯಾಂ ನ ಒಳಹರಿವು : 31368 ಕ್ಯೂಸೆಕ್.
ಡ್ಯಾಂನ ಹೊರ ಹರಿವು : 1024 ಕ್ಯೂಸೆಕ್.
ಪ್ರಸ್ತುತ ಸಂಗ್ರಹ:35.118 TMC
ಗರಿಷ್ಟ ನೀರಿನ ಸಂಗ್ರಹ: 49.50 TMC