Close Menu
Ain Live News
    Facebook X (Twitter) Instagram YouTube
    Wednesday, June 18
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ರಾಜಕೀಯ
    • ಜಿಲ್ಲೆ
    • ಸಿನಿಮಾ
    • ಲೈಫ್ ಸ್ಟೈಲ್
    • ಜ್ಯೋತಿಷ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    Facebook X (Twitter) Instagram YouTube
    Ain Live News

    ಕೃಷಿ ಇಲಾಖೆಯಲ್ಲಿ ಸಮಗ್ರ ಬದಲಾವಣೆ: ಸಚಿವ ಎನ್. ಚಲವರಾಯ ಸ್ವಾಮಿ

    By Author AINJune 18, 2025
    Share
    Facebook Twitter LinkedIn Pinterest Email
    Demo

    ಹಳಿಯಾಳ: ರಾಜ್ಯದ ಕೃಷಿ ಇಲಾಖೆಯಲ್ಲಿ ಸಮಗ್ರ ಬದಲಾವಣೆ ತರಲಾಗುತ್ತಿದೆ ಎಂದು‌ ಕೃಷಿ ಸಚಿವ ಎನ್. ಚಲವರಾಯ ಸ್ವಾಮಿ ಹೇಳಿದರು.ಹಳಿಯಾಳದ ಪುರಭವನದಲ್ಲಿ, ಮುಂಗಾರು ಬೀಜ ಬಿತ್ತನೆ ಅಭಿಯಾನಕ್ಕೆ ಚಾಲನೆ ಹಾಗೂ ಕೃಷಿ ಯಂತ್ರೋಪಕರಣ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

    ಕೃಷಿ ಇಲಾಖೆಯಲ್ಲಿ ಸಮಗ್ರವಾಗಿ ಬದಲಾವಣೆ ತರಲಾಗುತ್ತಿದ್ದು 1000 ಅಧಿಕಾರಿ ಸಿಬ್ಬಂದಿಗಳ ನೇಮಕಾತಿಗೆ ಸೂಚನೆ ನೀಡಲಾಗಿದ್ದು, ಸದ್ಯದಲ್ಲಿಯೇ ನೋಟಿಪಿಕೇಷನ್ ಹೊರಡಿಸಲಾಗುವುದು ಹಾಗೂ 700 ಮಂದಿಗೆ ಈಗಾಗಲೇ ಮುಂಬಡ್ತಿ ನೀಡಲಾಗಿದೆ ಎಂದರು.

    ರಾಜ್ಯದ 224 ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 24 ಸಾವಿರ ಕೃಷಿ ಹೊಂಡ ನಿರ್ಮಿಸುವ ಗುರಿ‌ ಹೊಂದಲಾಗಿದೆ. ಕಳೆದ 2 ವರ್ಷದಲ್ಲಿ ರೈತರಿಗೆ 344 ಕೃಷಿ ಯಂತ್ರೋಪಕರಣಗಳನ್ನು ವಿತರಿಸಲಾಗಿದೆ. ಕಬ್ಬು ಕಟಾವು ಯಂತ್ರಗಳ ಖರೀದಿಗೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ರೈತರಿಗೆ 50 ಲಕ್ಷ ಹಾಗೂ ಸಾಮಾನ್ಯ ವರ್ಗದ ರೈತರಿಗೆ 40 ಲಕ್ಷ ಸಬ್ಸಿಡಿ ನೀಡಲಾಗುತ್ತಿದೆ. ಸ್ಪಿಂಕ್ಲರ್ ಗೆ ಶೇ. 90 ರಷ್ಟು ಸಬ್ಸಿಡಿ ನೀಡಲಾಗುತ್ತಿದ್ದು, ಇದರ ಸದುಪಯೋಗವನ್ನು ಎಲ್ಲಾ ರೈತರು ಪಡೆಯಬೇಕು ಎಂದರು.

    ಸಮಗ್ರ ಕೃಷಿ ಮಾಡುವ ಅನೇಕ ರೈತರ ಆರ್ಥಿಕವಾಗಿ ಬಲಿಷ್ಠರಾಗಿದ್ದಾರೆ. ಭೂಮಿಯನ್ನು ನಂಬಿ ಸರ್ಕಾರದ ಸವಲತ್ತು ಪಡೆದುಕೊಂಡು ಎಲ್ಲಾ ರೈತರು ಆರ್ಥಿಕವಾಗಿ ಬಲಿಷ್ಠರಾಗಬೇಕು ಎಂದರು.

    ರಾಜ್ಯ ಸರ್ಕಾರ ಅಧಿಕಾರಕ್ಕೆ ಜಾರಿಗೆ ತಂದ 5 ಗ್ಯಾರಂಟಿ‌ ಯೋಜನೆಯನ್ನು ಜನರಿಗೆ ನೀಡಿ ಅವರ ಬದುಕನ್ನು ಹಸನು ಮಾಡಲಾಗಿದೆ. ವರ್ಷಕ್ಕೆ 50 ಸಾವಿರ ಕೋಟಿಯಂತೆ 5 ವರ್ಷಕ್ಕೆ 250 ಸಾವಿರ ಕೋಟಿಗಳನ್ನು ಗ್ಯಾರಂಟಿ ಯೋಜನೆ ಗಳಿಗೆ ಮೀಸಲಿಡಲಾಗಿದೆ. ಇದರ ಜೊತೆಗೆ ರಾಜ್ಯದಲ್ಲಿ ಇತರೆ ಅಭಿವೃದ್ಧಿ ಕೆಲಸಗಳು ನಡೆಯುತ್ತಿವೆ ಎಂದರು.

    ಹಳೆಯ ಬಟ್ಟೆ ಎಸೆಯೋದು ಅಥವಾ ದಾನ ಮಾಡೋದು.. ಇದರಲ್ಲಿ ಯಾವುದು ಒಳ್ಳೆಯದು?

    ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಹಾಗೂ ಹಳಿಯಾಳ ಶಾಸಕ ಆರ್. ವಿ. ದೇಶಪಾಂಡೆ ಮಾತನಾಡಿ, ರೈತರು ತಮಗೆ ವಿತರಿಸಿರುವ ಕೃಷಿ ಯಂತ್ರೋಪಕರಣಗಳನ್ನು ಬಳಸಿಕೊಂಡು ಆರ್ಥಿಕ ಸುಧಾರಣೆಯ ಜೊತೆಗೆ ಕೃಷಿ ಉತ್ಪನ್ನಗಳನ್ನು ಹೆಚ್ಚು ಮಾಡಿಕೊಳ್ಳಬೇಕು. ಭತ್ತ ಜೋಳದ ಬೆಳೆಗಳ ಇಳುವರಿ ಕಡಿಮೆಯಾದಂತೆ ಇಲ್ಲಿನ ರೈತರು ಕಬ್ಬು ಬೆಳೆಯಲು ಪ್ರಾರಂಭಿಸಿದರು. ಇದರಿಂದಾಗಿ‌ ಈ ಭಾಗದಲ್ಲಿ ಸಕ್ಕರೆ ಕಾರ್ಖಾನೆಯನ್ನು ತೆರೆಯಲಾಯಿತು. ಸರ್ಕಾರದಿಂದ ನೀಡುವ ಸವಲತ್ತುಗಳನ್ನು ಪಡೆದುಕೊಂಡು ರೈತರು ಸಾಮಾಜಿಕ, ಶೈಕ್ಷಣಿಕ‌ ಮತ್ತು ಆರ್ಥಿಕವಾಗಿ ಅಭಿವೃದ್ಧಿಯಾದರೆ ದೇಶದ ಆರ್ಥಿಕ ಅಭಿವೃದ್ಧಿ ಹೊಂದಲು ಸಾಧ್ಯ ಎಂದರು.

    ಇದೇ ಸಂದರ್ಭದಲ್ಲಿ 2025-26ನೇ ಸಾಲಿನ ಬೆಳೆ ಸಮೀಕ್ಷೆ ಕರಪತ್ರವನ್ನು ಬಿಡುಗಡೆಗೊಳಿಸಲಾಯಿತು. ಕೃಷಿ ಇಲಾಖೆ ಆಯುಕ್ತ ವೈ ಎಸ ಪಾಟೀಲ್ , ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ, ಕೃಷಿ ಇಲಾಖೆ ನಿರ್ದೇಶಕ ಡಾ. ಜಿ.ಟಿ ಪುತ್ರ, ಜಿಲ್ಲಾ ಪಂಚಾಯತ ಉಪ ಕಾರ್ಯದರ್ಶಿ ಪ್ರಕಾಶ ಹಾಲಮ್ಮನವರ, ಹಳಿಯಾಳ‌ ಪುರಸಭೆ ಅಧ್ಯಕ್ಷೆ ಪಾರ್ವತಿ ಅಗಸರ, ಉಪಾಧ್ಯಕ್ಷೆ ಲಕ್ಷ್ಮೀ ವಡ್ಡರ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಶಿವಪ್ರಸಾದ್ ಗಾವoಕರ್ ಮತ್ತಿತರು ಇದ್ದರು.

    Demo
    Share. Facebook Twitter LinkedIn Email WhatsApp

    Related Posts

    ಹುಬ್ಬಳ್ಳಿಯಲ್ಲಿ ನೂತನ “ಹೋಟೆಲ್ ಆಶ್ರಯ ಇನ್” ಗ್ರಾಹಕ ಸೇವೆಗೆ ಅರ್ಪಣೆ

    June 18, 2025

    ಇಸ್ರೇಲ್-ಇರಾನ್ ಯುದ್ಧ: ಹಾಸನ ಜಿಲ್ಲೆಯ ಹತ್ತಾರು ಜನ ಇಸ್ರೇಲ್’ನಲ್ಲಿ ಉದ್ಯೋಗ – ಹೆಚ್ಚಿದ ಆತಂಕ

    June 18, 2025

    ಕೊಡಗು: ಹಾರಂಗಿ ತೂಗು ಸೇತುವೆ ನಿರ್ಮಾಣಕ್ಕೆ ಡಿಸಿಎಂಗೆ ಮನವಿ ಮಾಡಿದ ಮಂತರ್ ಗೌಡ

    June 18, 2025

    ಕೂಲಿ ಕಾರ್ಮಿಕರ ಹೊತ್ತ ಆಟೋ ಪಲ್ಟಿ: ಕಾರ್ಮಿಕರಿಗೆ ಗಂಭೀರ ಗಾಯ – ತಪ್ಪಿದ ಭಾರೀ ಅನಾಹುತ

    June 18, 2025

    ಭೀಕರ ರಸ್ತೆ ಅಪಘಾತ: NSUI ಮುಖಂಡ ಸೇರಿ ಇಬ್ಬರು ಸಾವು – ಕಾರು ನುಜ್ಜುಗುಜ್ಜು

    June 18, 2025

    ಯುವತಿ ಕಿರುಕುಳ ತಾಳಲಾರದೆ ಯುವಕ ಆತ್ಮಹತ್ಯೆ..! ಸೆಲ್ಫಿ ವಿಡಿಯೋದಲ್ಲಿ ಗಂಭೀರ ಆರೋಪ

    June 18, 2025

    ಹಾಸನ: ಬೆಳ್ಳಂ ಬೆಳಗ್ಗೆ ಗ್ರಾಮಕ್ಕೆ ಕಾಡಾನೆಗಳ ಎಂಟ್ರಿ – ಬೆಚ್ಚಿದ ಜನತೆ!

    June 18, 2025

    ಹುಬ್ಬಳ್ಳಿ: ಗೂಂಡಾ ಕಾಯ್ದೆ ದಾಖಲಿಸಲು ಒತ್ತಾಯ

    June 18, 2025

    ಹೇಮಾವತಿ ಜಲಾಶಯ ಒಳ ಹರಿವಿನಲ್ಲಿ ಭಾರೀ ಏರಿಕೆ!

    June 18, 2025

    ಚಾಮರಾಜನಗರ: ಕೆರೆಯಲ್ಲಿ ಮುಳುಗಿ ಆರು ವರ್ಷದ ಮಗು ಸಾವು!

    June 18, 2025

    ಅನ್ನದಾತರಿಗೆ ಗುಡ್ ನ್ಯೂಸ್: KRS ಡ್ಯಾಂ ಭರ್ತಿಗೆ 11 ಅಡಿಯಷ್ಟೇ ಬಾಕಿ!

    June 18, 2025

    ರಾಜ್ಯದಲ್ಲಿ ಹೊಂದಾಣಿಕೆ‌ ಕೊರತೆ ಆಗಿದೆ: ಬಿಜೆಪಿ-ಜೆಡಿಎಸ್ ಮೈತ್ರಿ ಗುಟ್ಟು ಬಿಚ್ಚಿಟ್ಟ ಸಿ ಬಿ ಸುರೇಶ್ ಬಾಬು!

    June 18, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.