ಬೆಂಗಳೂರು:- ಅತಿವೇಗವಾಗಿ ಬಂದು ಸಿಗ್ನಲ್ ಬಳಿ ನಿಂತಿದ್ದ ಬೈಕ್ ಸವಾರನಿಗೆ ಸ್ಕೂಲ್ ವ್ಯಾನ್ ಡಿಕ್ಕಿ ಹೊಡೆದಿರುವ ಘಟನೆ ಮಹದೇವಪುರ ಸಂಚಾರ ಠಾಣಾ ವ್ಯಾಪ್ತಿಯ ಕನ್ನಮಂಗಲ ಗೇಟ್ ಬಳಿ ನಿನ್ನೆ ಬೆಳಗ್ಗೆ 10.30 ಸುಮಾರಿಗೆ ಜರುಗಿದೆ. ಸಿನಿಮೀಯ ರೀತಿಯಲ್ಲಿ ನಡೆದ ಅಪಘಾತದಲ್ಲಿ ಅದೃಷ್ಟವಶಾತ್ ಬೈಕ್ ಸವಾರ ಪಾರಾಗಿದ್ದಾನೆ.
ಕೇಂದ್ರವು ರಾಜ್ಯ ಸರ್ಕಾರದ ಯಶಸ್ಸನ್ನ ಕಟ್ಟಿಹಾಕ್ತಿದೆ: ವಿದೇಶದಿಂದ ಬರುತ್ತಿದ್ದಂತೆ ಪ್ರಿಯಾಂಕ ಖರ್ಗೆ ವಾಗ್ದಾಳಿ
ಕನ್ನಮಂಗಲ ಗೇಟ್ ಮೂಲಕ ವೈಟ್ ಪೀಲ್ಡ್ ಕಡೆ ವೇಗವಾಗಿ ಬಂದ ಸ್ಕೂಲ್ ವ್ಯಾನ್ ಚಾಲಕನ ನಿಯಂತ್ರಣ ತಪ್ಪಿ ಸಿಗ್ನಲ್ ಬಳಿ ಬೈಕ್ ಸವಾರನಿಗೆ ಡಿಕ್ಕಿ ಹೊಡೆದಿದೆ. ಮುಂದೆ ಬರ್ತಿದ್ದ ಕಾರಿಗೂ ಡಿಕ್ಕಿ ಹೊಡೆದು ಸ್ಕೂಲ್ ವ್ಯಾನ್ ನಿಂತಿದೆ. ಘಟನೆಯಿಂದ ಸಣ್ಣ ಪುಟ್ಟ ಗಾಯಗಳಿಂದ ಬಚಾವ್ ಆಗಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಅಪಘಾತದ ದೃಶ್ಯ ಕಾರೊಂದರ ಡ್ಯಾಶ್ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಘಟನೆ ಸಂಬಂಧ ಮಹಾದೇವಪುರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಾಗಿದೆ.